ಏ ಸಖಿಯೆ ಅಲಾವಿ ಆಡುನು ಬಾ                                 ||ಪ||

ಅಲಾವಿಯಾಡುತ ಪದಗಳ ಪಾಡುತ
ಬಳ್ಳಿಹಿಡಿದು ಬಲು ಮೌಜಿಲೆ ಕುಣಿದು                             ||೧||

ಸೊಗಸಿನ ಸಿಂಗಾರ ಮಾಡ್ಯಾರು ವಯ್ಯಾರ
ಬಾಗಿ ಬಳಕುತ ಹೆಚ್ಚಿ ಚಲ್ಲುತ ಗೆಜ್ಜಿ ಸಪ್ಪಳ ಕೇಳುನು ಬಾ         ||೨||

ಶರಣರ ಲೀಲಾ ಕಲಿಯುಗದ ಮೇಲಾ
ಜಾಹೀರಾದಿತು ಶಿಶುನಾಳ ಶಾಹಿದರಾ ಹೊಂದಿಗೂಡುನು ಬಾ     ||೩||
*****