ಶರಣರಲಾವಿಯಾಡುನ ಬಾರೋ
ಮನಕ ತಿಳಿದು ನೀ ನೋಡೋ           ||ಪ||

ಸಧ್ಯದಿ ಸಮರದೊಳು
ಮಧ್ಯದಿ ಕೂಡುವ
ಬುದ್ದಿವಂತರಲ್ಲೆ
ತಿದ್ದಿಯಾಡುನು ಬಾ                   ||೧||

ಮಾಡೋದು ಚಂದ್ರನ್ನ
ನೋಡಿ ಗುದ್ದಲಿ ಹಾಕಿ
ಬೇಡಿಕೊಂಡು ಅಲಾವಿ
ಕೂಡಿಯಾಡುನು ಬಾ                 ||೨|!

ದೇಶಕಧಿಕವಾದ
ವಾಸುಳ್ಳ ಶಿಶುನಾಳ
ಗುರುವು ಹೇಳಿದ್ದು ಕೇಳಿ
ಕೂಡಿಯಾಡುನು ಬಾರೋ               ||೩||
*****