(ಬೀದಿ ನಾಟಕದ ಹಾಡು) ಜಡುಗುಡ್ಡಿ ಜಡ್ಡಿ ನಕ್ಕ ನನ್ನ ನೋಡಿ ಚಂದ್ರ ನಕ್ಕ || “ಯಾಕಪ್ಪೋ” ಅಂದ್ರೆ ಅಂದ “ಆದೆಲ್ಲೊ ಮೆಂಬ್ರು” || ಜಡುಗುಡ್ಡಿ ಜಡ್ಡಿ ನಕ್ಕ ನನ್ನ ನೋಡಿ ಸೂರ್ಯ ನಕ್ಕ || “ಯಾಕಪ್ಪೊ” ಅಂದ್...

ಕನ್ನಡವೇ.. ನನ್ನ ಉಸಿರು ಕನ್ನಡವೇ.. ನಮ್ಮ ಹಸಿರು ಕನ್ನಡದಿ ನಾವುಗಳು ಏಳ್ಗೆಯನು ಸಾಧಿಸಲು ಜೀವನವು ಸಾರ್ಥಕವು ಕನ್ನಡದ ಭೂಮಿಯಲಿ ಅನ್ನ, ನೀರು, ಕನ್ನಡವಾಗಿಸಿ ಬೆಳೆದು ಬಾಳುತಿರುವ ಕನ್ನಡಿಗರು ಪ್ರಾಣವನು ನೀಡಿಯಾದರೂ ಉಳಿಸಬೇಕು ಕನ್ನಡವಾ… ...

ತುಂಬಿದ ಸಿರಿಯ ಸೊಬಗಿನಲಿ ಗಿರಿವನ ಬೆಟ್ಟಗಳ ಹಸಿರಲಿ ಕನ್ನಡದ ಗಡಿಯಲಿ ಕನ್ನಡಮ್ಮನ ಅಳಲು ಆಲಿಸುವವರಿಲ್ಲ ಮೆರೆಯಬೇಕಿದ್ದ ಸಾಮ್ರಾಜ್ಞಿ ಬೆಂಡಾಗುತಿಹಳು ಬವಣೆಯಿಂದ ಜೋಭದ್ರ ನಾಯಕಮಣಿಗಳನು ಪಡೆದ ಕನ್ನಡನಾಡಿನ ಚಿತ್ರವ ಕಂಡು ಕಣ್ಣೀರಿನ ಹೊಳೆ ಹರಿಸುತಿ...

ಅದೊಂದು ಪುಟ್ಟ ಗ್ರಾಮ. ಅಲ್ಲಿನ ತರುಣ ಸಂಘವರು ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸನ್ಮಾನಿತನಾದವನು ಹೆಸರಾಂತ ಕವಿ. ಅವನೂ ಅದೇ ಹಳ್ಳಿಯವನು. ಸಾಹಿತ್ಯ ಅಕಾಡಮಿಯ ಪ್ರಶಸ್ತಿ ದೊರಕಿಸಿಕೊಂಡಿದ್ದರಿಂದ ಊರ ಜನ ಪ್ರೀತಿ, ಅಭಿಮಾನದಿಂದ ಕವಿಯ...

ಆನಂದಪ್ಪ ಆ ಶಹರದ ಹೃದಯಭಾಗದಲ್ಲಿ ಮನೆ ಕಟ್ಟಿಸಲು ಶುರು ಮಾಡಿದ. ಅಲ್ಲಿನದು ಬಹು ಮೌಲ್ಯದ ಬಯಲು ಜಾಗೆ. ಅದು ಅವನಿಗೆ ಬಳುವಳಿಯಾಗಿ ಸಿಕ್ಕಿತ್ತು. ಆನಂದಪ್ಪ ಒಬ್ಬ ಇಂಜಿನಿಯರ್‍. ಸರಕಾರಿ ಹುದ್ದೆಯಲ್ಲಿದ್ದ. ತಾನು ಕಟ್ಟಿಸುವ ಮನೆ ಭೂಮಿಯ ಮೇಲಿನ ಸ್ವರ...

ಮುಂಜಾವಿನಮಂಜಿನಂತೆ ತುಂತುರ ಮಳೆ ಹನಿಯಂತೆ ನೈದಿಲೆಯ ಚಲುವಿನಂತೆ ಒಲವು ಸೂಸುತಾ ಮರೆಯಾದೆ ಸ್ನೇಹ-ಪ್ರೀತಿಗಳ ಸಂಗಮದ ಸಾಕಾರದಲಿ ಫಲಾಪೇಕ್ಷ ಬಯಸದ ನಿರ್‍ಮಲ ಸ್ನೇಹ ಸೇತುವೆ ಬದುಕು-ಬವಣೆಗಳೆನ್ನದೆ ಜನಸ್ಪಂದನೆಯಲಿ ಸಂತಸ ಕಾಣುತ ನಂಬಿಗೆಯ ಬಂಧನದ ಬಾಂಧ...

ನಡೆನುಡಿಯಿಂದ  ನಾವು  ನಡೆಯಬೇಕಣ್ಣಾ ದೇಹವಿದು  ತಮ ನಡುವೆ  ಬಿದ್ದು  ಹೋಗತೈತಣ್ಣಾ            ||ಪ|| ಭಜನೆಯ  ಮಾಡ್ವಾಗ   ಭೇದಭಾವ  ಬಿಟ್ಟು   ಭಜಿಸಬೇಕಣ್ಣಾ ಅಣ್ಣತಮ್ಮರೆಂದು ತಿಳಿಯಬೇಕಣ್ಣಾ                        ||೧|| ಪರ ಹೆಣ್ಣು ಮಕ...

– ೧ – ನಾವು ನಮ್ಮವರೆಂಬ ಭಾವವು ನಮ್ಮ ಬಗೆಗಿನ ಹೆಮ್ಮೆ ಒಲವು ಒಳಿತಿನತ್ತ ನಡೆವ ನಡಿಗೆಗೆ ನಮ್ಮ ನಾವು ತಿಳಿವುದೆಂದಿಗೆ || ಜಾತಿವಾದವ ದೂರವಿಟ್ಟು ಜಾತಿ ಕೀಳರಿಮೆ ಬಿಟ್ಟು ಲೋಕ ಧೈರ್‍ಯ ಸ್ಥೈರ್‍ಯಕೆ ಮೂಕರಾದವರ ವಾಕ್ಯಕೆ || ನಮ್ಮ ಹ...

ಲೇಖನಕ್ಕೆ ತೊಡಗಿಕೊಳ್ಳುವ ಮೊದಲು ಬರವಣಿಗೆಯ ಸ್ವರೂಪವನ್ನು ಅಸ್ಪಷ್ಟವಾಗಿಯಾದರೂ ಗುರುತಿಸಿಕೊಳ್ಳಲೇಬೇಕಾಗಿರುವುದರಿಂದ ಈ ಲೇಖನವನ್ನು ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡ ನನ್ನ ಅನುಭವಗಳ ಮಟ್ಟಕ್ಕೆ ಸೀಮಿತಗೊಳಿಸಲು ನಿರ್ಧರಿಸಿದ್ದೇನೆ. ತಾಂತ್ರಿಕ ...

ಮಣಿದಿದೆ ವಿಶ್ವವು ನಿನ್ನ ಚರಣಕೆ ಇಳೆದಾಯಿ ಶುಭದಾಯಿನಿ ಮಣ್ಣ ಕಣಕಣ ರಮ್ಯ ತೋರಣ ನಾಕದಂದಣ ಜಗ ಕಾರಣ….. ಆದಿ ಅಂತ್ಯದಗೊಡವೆ ಸಲ್ಲದು ಜೀವದೊಡವೆಯ ಶ್ರೀನಿಧಿ ಮುನ್ನ ಬಾಳಿಗೆ ಭೀತಿ ಒಲ್ಲದು….. ಭಾವದಕ್ಷಯ ತವನಿಧಿ…… ತಮದ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...