Home / ಕವನ / ಭಾವಗೀತೆ

ಭಾವಗೀತೆ

ಹುಟ್ಸೋದ್ಯಾಕೆ ಸಾಯ್ಸೋದ್ಯಾಕೆ ನಮ್ಮಯ ತಪ್ಪಾದ್ರು ಏನು? ಸ್ತ್ರೀಭ್ರೂಣವಾಗಿದ್ದೆ ತಪ್ಪೇನು?? ನಿಮ್ಮಯ ತೆವಲಿಗೆ ಆಡದ ಮಾತಿಗೆ ನಮ್ಮಯ ಈ ಬಲಿ ಹಿತವೇನು? ರೋಗಿಗಳನ್ನು ಉಳಿಸುತ್ತೀರಿ ನಮ್ಮಯ ಸಾವಿಗೆ ಕಾಯುತ್ತೀರಿ ಸಂಕಟಕೊ ಇಲ್ಲ ಸಂತಸಕೊ ಕಡೆಗೆ ಕಂಬನ...

ಮದುವೆಯ ಆಟವೆ ತಿಳಿಯದ ಮಗುವಿಗೆ ಮದುವೆ ಮಾಡಿದರೆ ಹೇಗಮ್ಮ ಅಮ್ಮನಾಗುವ ದಿನಗಳು ಬಂದರೆ; ತಾನಮ್ಮನಾಗುವ ದಿನಗಳು ಬಂದರೆ ಗುಮ್ಮನಾರು ನೀ ಹೇಳಮ್ಮ? //ಪ// ಅಕ್ಷರವನ್ನು ಕಲಿಯಬೇಡವೆ ಚಿಣ್ಣರೊಡನೆ ಕುಣಿದಾಡಬೇಡವೆ ಬಳ್ಳಿ ತಾನು ಗಿಡವಾಗುವ ಮುನ್ನವೆ ಫಲ ...

ಅರಳುತ್ತಿದ್ದ ಮೊಗ್ಗು ಮುದುಡಿ ಹೋಯಿತಲ್ಲ ಕಾಣುತಿದ್ದ ಕನಸು ಕರಗಿ ಹೋಯಿತಲ್ಲ /ಪ// ಪುಟ್ಟ ಬೆರಳುಗಳು ಬಿಡಿಸುತ್ತಿದ್ದ ಅಕ್ಷರಗಳ ರಂಗೋಲಿ ಅರವಿನ ಬಣ್ಣವ ಪಡೆಯುವ ಮೊದಲೆ ಕದಡಿ ಹೋಯಿತಿಲ್ಲಿ ಕದಡಿ ಹೋಯಿತಿಲ್ಲಿ – ತಾಳಿಯ ನೊಗದ ಭಾರದಲ್ಲಿ ಮು...

ಹೇಳಿಕೊಳ್ಳುವೆವು ಎದೆ ತಟ್ಟಿ ಕನ್ನಡಿಗರು ನಾವು ನಮಗೆ ಯಾರಿಗೂ ಬೇಡ ಕನ್ನಡ ಮಾಧ್ಯಮವು ಆದರೂ ಕನ್ನಡಿಗರು ನಾವು ಯಾರಿಗೆ ಕಡಿಮೆ ನಾವು! ಮಾಸ್ತಿ ಕುವೆಂಪು ಬಿ.ಎಂ.ಶ್ರೀ ಯಾರಾದರೆ ಏನು? ಗೋಕಾಕ್, ಮಹಿಷಿ ವರದಿ ಏನು ಹೇಳಿದರೆ ಏನು? ವಿವೇಕ ನಮಗೆ ಅಪಥ್...

(ಮದುಮಗನ ಗೀತೆ) ಒಂಟೆತ್ತಿನ ಗಾಡಿ – ನಾನು ಈವರೆಗೆ ಜೋಡೆತ್ತಿನ ಬಂಡಿ – ನಾಳೆ ತೆರೆವ ದಾರಿಗೆ ಹೊತ್ತೊಯ್ಯುವೆನು ನಿಮ್ಮ ಎಲ್ಲಾ ಹರಕೆ ಬೆನ್ನಿಗಿರಲಿ ಮಾತ್ರ – ನಿಮ್ಮ ಪ್ರೀತಿಯ ಹಾರೈಕೆ //ಪ// ಇಂದೇಕೋ ಏನೋ – ನೆನ- ಪ...

ಭೂಮಿಗಿಂತ ಹೃದಯ ಭಾರ ಕಾಡಿಗಿಂತ ಹಾಡು ಘೋರ ಏಕೆ ತಿಳಿಯದಾಗಿದೆ? ಬೆಳದಿಂಗಳು ಸುಡುತಲಿಹುದು ನೈದಿಲೆ ಹೂ ಬಾಡುತಿಹುದು ಯಾರು ತಿಳಿಸಬೇಕಿದೆ? ಘಮಘಮಿಸುವ ಮಲ್ಲೆ ತೋಟ ಕಂಪಿನುಸಿರ ಬಿಸಿಯ ಸೂಸಿ ಏಕೆ ವಿವಶವಾಗಿದೆ? ಬೀಸಿ ಬಂದ ಯಾವ ಗಾಳಿ ಸ್ಪರ್ಶಿಸಿ ಮರ...

ಉದಯಾಚಲದಲಿ ಮೂಡಿದ ಸೂರ್ಯ ಹಿಡಿದನು ಕನ್ನಡ ಬಾವುಟವ ಹಾರಿದ ಹಕ್ಕಿಗಳೆಲ್ಲವು ಮೊರೆದವು ಕನ್ನಡ ನಾಡ ಗೀತವ || ಓಡುವ ನದಿಗಳು ಕಲಕಲ ರವದಲಿ ನಲಿಸಲಿ ಕರುನಾಡ ಹೆಜ್ಜೆಯ ಹಾಕಿದ ಪಚ್ಚನೆ ಪಯಿರು ಮೆರೆಸಲಿ ಸಿರಿನಾಡ ಪಡುವಣ ತೀರದ ಸಹ್ಯಾದ್ರಿಯ ಸಿರಿ ಸ್ಫೂ...

ಪುಷ್ಪ… ಪುಷ್ಪ… ಕಣ್ಣು ಪುಷ್ಪ ನೋಟ ಪುಷ್ಪ ನುಡಿವ ಮಾತು ಮಿಡಿವ ಹೃದಯ ನಗೆಯೂ ಬಗೆಯೂ ಪುಷ್ಪ ಪುಷ್ಪ ||ಪ|| ಒಲುಮೆ ಪುಷ್ಪ ನಲುಮೆ ಪುಷ್ಪ ಚಲನ ವಲನ ಮಿಲನ ಪುಷ್ಪ ಕರುಣೆ ಪುಷ್ಪ ಸ್ಫುರಣೆ ಪುಷ್ಪ ಕಣ್ಣೂರಲ್ಲಿ ತಳೆದ ಪುಷ್ಪ ಕನಸಾಗುವುದ...

ಪ್ರೇಮಕೂ ಸುಳ್ಳಿಗೂ ಎಂತಹ ನಂಟು ಕವಿಯ ಕೇಳಬೇಕು ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ ಹೇಳಬೇಕು //ಪ// ಇವಳಿಗೆ ಅವನು ಹುಣ್ಣಿಮೆ ಚಂದ್ರ ಅವನಿಗೆ ಇವಳು ನೈದಿಲೆಯು ಇವರ ಮಿಲನವೆ ಮಧುಮಹೋತ್ಸವ ಇದಕೆ ಯಾವುದು ಎಣೆಯು! ಜಗತ್ತು ಎಂದರೆ ಅವನಿಗೆ ಇವಳು ಇವ...

ಕನಸುಗಣ್ಣಿನ ಹುಡುಗಿ ಕನಸಿಗೆ ಬರುತಾಳೆ ಕನಸು ಕಣ್ಣಲಿ ಚೆಲ್ಲಿ ಕಣ್ಮರೆಯಾಗುತಾಳೆ //ಪ// ಕಂಡರೆ ಅಲ್ಲೋ ಇಲ್ಲೋ ಕಣ್ಮನ ಸೆಳಿತಾಳೆ ಕಣ್ಮನ ಸೆಳೆದ ಸ್ಥಳವ ಸ್ಮಾರಕ ಮಾಡುತಾಳೆ ಕಡಲಿಗೆ ನಡೆದರೂ ಕೂಡ ಅಲೆಯಾಗಿ ಬರುತಾಳೆ ಅಲೆಯಾಗಿ ಒಳಗಿಳಿದು ಭೋರ್‍ಗರೆಯ...

1...34567...10

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...