ಹಣ್ಣು ಕಾಯಿ ಹೂಗಳ ತಾಯಿ ಬೇರು ತಂದೆ ನೀರು ಕತ್ತಲಕೋಣೆ ನೆಲ ಮನೆಯೊಳಗೆ ತಾಯಿ ದುಡಿಯುವ ಯಂತ್ರ ಕಡಲೊಳಗೆ ಕಾಳಗ ನಡೆಸಿ ಮುಗಿಲೊಳಗೆ ಪರಿಶುದ್ಧವಾಗಿ ತಂದೆ ಗೆದ್ದು ಬರುವ ಕರ್‍ತಾರ ಇಬ್ಬರ ಪಾತ್ರ ಕಾಡು ನಾಡು ನಗುವ ಸಮೃದ್ಧ ಹಸಿರ ಸಂಸಾರ *****...

ದೊಡ್ಡ ದೊಡ್ಡ ಮರಗಳು ನೀಡುವ ಹಣ್ಣುಗಳು ಹಲಸು ಮಾವು ಉಳಿಯಲಾರವು ಒಂದೆರಡು ವಾರಗಳು ಸಣ್ಣ ಸಣ್ಣ ಪೈರುಗಳು ನೀಡುವ ಕಾಳುಗಳು ರಾಗಿ ಜೋಳ ಧಾನ್ಯಗಳು ಉಳಿಯುತ್ತವೆ ಹತ್ತಾರು ವರ್‍ಷಗಳು *****...

ಕಾಶ್ಮೀರದ ಸೇವು ಕನ್ಯಾಕುಮಾರಿಯ ಮಾವು ನಮ್ಮೂರಿನ ಅಂಜೂರ ಹೊರ ದೇಶದ ಕರ್‍ಜೂರ ಎಲ್ಲದರಲ್ಲು ಎಂಥ ರುಚಿ ಇವು ಮಣ್ಣು ಹಡೆದ ಮಕ್ಕಳು ಹೀಗೆ ಇರಬೇಕಲ್ಲವೆ ನಾವು ನಮ್ಮ ನಮ್ಮ ಮಕ್ಕಳು *****...

1...891011