ಬೀಜ ಬಳ್ಳಿಯಾಗಿ
ಹರಿದಿ ಬಿರಿವುದು
ಮೂರು ತಿಂಗಳಲ್ಲಿ
ಹೊರಲಾಗದ
ಸೋರೆ ಕುಂಬಳ

ಕಾಯಬೇಕು
ಹತ್ತಾರು ವರುಷ
ಮೆಲ್ಲಲು
ಹೆಬ್ಬೆರಳಿನ ಗಾತ್ರದ
ನೆಲ್ಲಿ ನೇರಳೆ ಬೇಲ
*****

ಜರಗನಹಳ್ಳಿ ಶಿವಶಂಕರ್‍
Latest posts by ಜರಗನಹಳ್ಳಿ ಶಿವಶಂಕರ್‍ (see all)