ನಿನ್ನ ‘ಪ್ರೀತಿ’ಗೆ, ನನ್ನೊಳಗೆ ಬರಬಾರದೆ? ಅಂದೆ. ಅಂದದ್ದೆ ತಡ, ನಿನ್ನ ದುಃಖ ಮಂಜಾಗಿ ನನ್ನ ಕಾಲು ಕೊರೆಯಿತು. ನಿನ್ನೊಳಗಿನ ಕಹಿ ಹದ್ದಾಗಿ ನನ್ನ ಕುಕ್ಕಿತು ನಿನ್ನ ಒರಟುತನದ ಇರುವೆ ಕಂಡಲ್ಲೆಲ್ಲಾ ಕಚ್ಚಿತು- ಕಟ್ಟಕಡೆಗೆ ‘ಪ್ರೀತಿ’ ಒಳಗೆ ಬಂದೆ ಅ...

ಮತ್ತೆ ಬೆಳಗಾಗಿದೆ ಬೆಳಕಿನ ಸಮುದ್ರದಲ್ಲಿ ಜಗತ್ತು ಮುಖ ತೊಳೆದುಕೊಳ್ಳುತ್ತಿದೆ. ಸೂರ್ಯ ಮೈಮುರಿಯುತ್ತಿದ್ದಾನೆ. ಪೇಪರು ಕೊಡುವ ಪುಟ್ಟ ಹುಡುಗನಿಗೆ ಕರೆಗಂಟೆ ಎಟುಕುತ್ತಿಲ್ಲ ಹಾಲು ಕೊಡುವ ಮುದುಕ ಸಾವಿನ ಸುಖದಲಿ ಮೈಮರೆತಿರುವ ಹೆಂಗಸರನ್ನು ಬದುಕಿನ ...

ಎಲ್ಲಕ್ಕಿಂತ ಮೊದಲು ನನ್ನ ವಿಷದ ಹಲ್ಲುಗಳನ್ನು ಕಿತ್ತುಬಿಡು. ನನ್ನ ಸಣ್ಣತನದ ರೆಕ್ಕೆ ಆಕಾಶವನ್ನೆ ಗುಡಿಸುವಂತಿದ್ದರೆ ಅದನ್ನು ಕತ್ತರಿಸಿಬಿಡು. ದುರಹಂಕಾರದ ಮೀನು ಎಂದೆಣಿಸುವಿಯಾದರೆ ದಡಕ್ಕೆ ತಂದು ಬಿಸಾಡು. ನನಗೂ ಸಾಕಾಗಿದೆ ಈ ಯುದ್ಧ ಒಳಗೆ-ಹೊರಗ...

ಪ್ರೀತಿಪಾತ್ರರು ಸತ್ತಾಗೆಲ್ಲ ನನ್ನೊಳಗಿನ ಚೈತನ್ಯದ ಕಣವೊಂದು ಸುಟ್ಟು ಬೂದಿಯಾಗುತ್ತದೆ. ನನ್ನವನು ಮೈಮರೆತು ಮಲಗಿದ್ದರೂ ಕಳವಳಿಸುತ್ತಾ ಎದೆಬಡಿತ ಆಲಿಸುತ್ತೇನೆ. ನನಗನ್ನಿಸುತ್ತದೆ ಯಾರೋ ಹೊಂಚು ಹಾಕುತ್ತಿದ್ದಾರೆ ಬೆನ್ನಹಿಂದೆ....

ನಾನು ಪ್ರೀತಿಸಿದ್ದು ನನ್ನನ್ನೆ ನನ್ನ ಅಹಂಕಾರವನ್ನು ನನ್ನ ದುಃಖವನ್ನು ನನ್ನ ಕೆಟ್ಟತನವನ್ನು ಅದಮ್ಯವಾಗಿ ಪ್ರೀತಿಸಿದ್ದು ನಾನೆ. ಪ್ರೀತಿ ಬಟ್ಟಲು ತುಂಬುವ ಮೊದಲೆ ಆಸೆ ಬರುಕಿಯಂತೆ ಕುಡಿಯುತ್ತಿದ್ದವಳು ನಾನೆ. ಒಮ್ಮೆ ಮಾತ್ರ ನನಗೆ ಗೊತ್ತಿಲ್ಲದ ಹಾ...

ಬಾಲ್ಯದಲ್ಲಿ ನಾನು ಯಾವಾಗಲೂ ಸುಳ್ಳಿನ ಮಿಠಾಯಿ ಮೆಲ್ಲುತ್ತಿದ್ದೆ. ಲಾಭ-ನಷ್ಟದ ಪರಿವೆಯಿಲ್ಲದೆ ಸುಳ್ಳಿನ ಮೊಗ್ಗುಗಳನ್ನು ಪೋಣಿಸಿ ಮಾಡುತ್ತಿದ್ದೆ. ಈಗನಿಸುತ್ತದೆ ಆವೊತ್ತಿನ ಪ್ರತಿಯೊಂದು ಸುಳ್ಳಿನಲ್ಲೂ ಮುಗ್ಧ ಹಂಬಲವಿತ್ತು ಕಲ್ಪನೆಯ ಅಪ್ರತಿಮ ಸೌಂ...

ಖಾಲಿ ಆಕಾಶಕತ್ತರಿಸುವ ಮೌನಒಂಟಿಯಾಗಿ ಸುತ್ತವಹದ್ದನ್ನು ನೋಡಿಅಯ್ಯೋ ಅಂದೆ. ಖಾಲಿ ಬಯಲುಕತ್ತರಿಸುವ ಮೌನಅದೆ ಹದ್ದು ಒಬ್ಬಂಟಿಕುಳಿತು ಇಡೀ ಬೇಟೆಯಕಬಳಿಸುವುದ ಕಂಡೆ. ಹೌದುಎಷ್ಟೊಂದು ಗಟ್ಟುಗಳುಒಂಟಿತನದ ಹಿಂದೆ…....

ಪ್ರತಿದಿನ, ಪ್ರತಿಕ್ಷಣ ಅದೇ ಕೆಲಸ; ಹುಟ್ಟಿನ ಮನೆಗೆ ಭೇಟಿ ಕೊಡುವುದು, ಸಂಭ್ರಮದ ತುಣುಕನ್ನು ಮೆದ್ದು, ತನ್ನದೊಂದು ಬೀಜ ನೆಟ್ಟು, ಗುಟ್ಟಾಗಿ ಓಡಿಬರುವುದು. ಮತ್ತೆ ಅದೇ ಕೆಲಸ ಕಾಯುವುದು ನೆಟ್ಟ ಬೀಜ ಫಲಕೊಟ್ಟು ಹಣ್ಣಾಗಿ ಕಳಚಿಕೊಳ್ಳುವುದನ್ನೇ ಕಣ್...

ಬೂದು ಬಣ್ಣದ ಚಳಿಗೆ ಮುಂಜಾವದ ತುಟಿಯೊಡೆದಿದೆ ಆಕಾಶ ಚಂದಿರನನ್ನು ಹಣೆಯಲ್ಲಿ ಧರಿಸಿ ನಸುನಗುತಿದೆ ಮಿಲ್ಲುಗಳಿಂದ ಹೊಗೆಯನ್ನೂ ಹುಣ್ಣುಗಳನ್ನೂ ಬಳುವಳಿಯಾಗಿ ಪಡೆದಿರುವ ಭದ್ರೆ ಮುದಿಸೂಳೆಯ ಹಾಗೆ ನಡುಗುತ್ತಿದ್ದಾಳೆ ಜಿಪುಣಶೆಟ್ಟಿ ಸೂರ್ಯನದು ತೂಕದ ವ್...

ನೋಡು- ಕಣ್ಣು ತುಟಿ ಮೂಗು ಕೈಯಿ ಮೈಯಿ ಏನಿಲ್ಲದಿದ್ದರೂ ಇದ್ದ ಹಾಗೆಯೇ ಕಾಣಿಸುವ ಚಂದ್ರನನ್ನು ಕಡೆಯ ಬಾರಿ ಎಂಬಂತೆ ನೋಡಿ ಬಿಡು. ಬೆಂಕಿಯನ್ನು ಬೆಳಕನ್ನು ಬಣ್ಣವನ್ನು ಬೆಡಗನ್ನು ತುಂಬಿಕೊಂಡಿರುವ, ನಿನ್ನೊಳಗೆ ಬೆರಗನ್ನು ಭಯವನ್ನು ಹುಟ್ಟಿಸಿದ ಆಕಾಶ...

1...1415161718...20