ಖಾಲಿ ಆಕಾಶ
ಕತ್ತರಿಸುವ ಮೌನ
ಒಂಟಿಯಾಗಿ ಸುತ್ತವ
ಹದ್ದನ್ನು ನೋಡಿ
ಅಯ್ಯೋ ಅಂದೆ.

ಖಾಲಿ ಬಯಲು
ಕತ್ತರಿಸುವ ಮೌನ
ಅದೆ ಹದ್ದು ಒಬ್ಬಂಟಿ
ಕುಳಿತು ಇಡೀ ಬೇಟೆಯ
ಕಬಳಿಸುವುದ ಕಂಡೆ.

ಹೌದು
ಎಷ್ಟೊಂದು ಗಟ್ಟುಗಳು
ಒಂಟಿತನದ ಹಿಂದೆ….

*****