ನಿನ್ನ ‘ಪ್ರೀತಿ’ಗೆ, ನನ್ನೊಳಗೆ
ಬರಬಾರದೆ? ಅಂದೆ.
ಅಂದದ್ದೆ ತಡ,

ನಿನ್ನ ದುಃಖ ಮಂಜಾಗಿ
ನನ್ನ ಕಾಲು ಕೊರೆಯಿತು.
ನಿನ್ನೊಳಗಿನ ಕಹಿ
ಹದ್ದಾಗಿ ನನ್ನ ಕುಕ್ಕಿತು
ನಿನ್ನ ಒರಟುತನದ ಇರುವೆ
ಕಂಡಲ್ಲೆಲ್ಲಾ ಕಚ್ಚಿತು-

ಕಟ್ಟಕಡೆಗೆ ‘ಪ್ರೀತಿ’
ಒಳಗೆ ಬಂದೆ ಅಂತು.
*****

ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)