ಚುಟುಕು ಬರೆಯಲು ಹೊಳೆಯಲಿ ಲಿಂಕು ಎರಡು ಸಾಲು ಬರೆದೊಡನೆ ಮುಗಿಯಿತು ಇಂಕು ಕುಣಿಯಲಾರದವಳೆಂದಳಂತೆ ನೆಲಡೊಂಕು ಇಲ್ಲಾ ನನ್ನ ಲೇಖನಿಯ ತುದಿಯೇ ಕೊಂಕು *****...

ಮಕ್ಕಳಿಗೆ ಹಾಕಬೇಕು ಶಿಕ್ಷಣದ ತಳಹದಿ ಯಾರೂ ಕದಿಯದ ವಿದ್ಯೆಯೆಂಬ ಶ್ರೀನಿಧಿ ಕೋಟಿ ಕೋಟಿ ಬೆಳ್ಳಿ ಬಂಗಾರ ನಶ್ವರ ನೀವು ನೀಡಿದ ವಿದ್ಯೆಯೊಂದೇ ಅಮರ *****...

ಕರೆದು ಸನ್ಮಾನ ಮಾಡಿದರೆ ಹಿಗ್ಗಬೇಡಿ ಮಾಡಲಿಲ್ಲವೆಂದು ಕೊರಗಬೇಡಿ ಜನಪ್ರಿಯರಾದರೆ ಕೈಮುಗಿದು ಸನ್ಮಾನ ಜನ ವಿರೋಧಿಯಾದರೆ ಉಗಿದು ಸನ್ಮಾನ *****...

ಬಂದಿದೆ ನೋಡಿ ಹೊಸ ನ್ಯಾನೋ ಕಾರು ಅಗ್ಗದ ಕಾರು ಕೊಂಡವರ ದರ್ಬಾರು ಬಡವರಿಗೂ ಬಂತು ಕಾರುಕೊಳ್ಳುವ ಕಾಲ ಕಾರಿನ ಜೊತೆ ಬೇಕು ಪೆಟ್ರೋಲಿಗೂ ಸಾಲ *****...

ಯಮನ ಪ್ರತಿನಿಧಿಗಳು ಕೊಳವೆಬಾವಿಗಳು ಬಾಯ್ದೆರೆದು ನಿಂತಿವೆ ಬಲಿತೆಗೆದುಕೊಳ್ಳಲು ಬಿದ್ದು ಹೊರಬಂದರೆ ಪುನರ್ಜನ್ಮ ಹೆಣವಾಗಿ ಬಂದರೆ ಮರುಜನ್ಮ *****...

ಸ್ವರ್ಗಕ್ಕಿಂತಲೂ ಚಂದ ಮಲೆನಾಡ ಭಾಗ ಹಿಂದಿನವರು ವರ್ಣಿಸುತ್ತಿದ್ದಾರಾವೈಭೋಗ ಹುಡುಕಿದರೂ ಸಿಕ್ಕವು ಮರಗಳ ಸಾಲು ಈಗವೆಲ್ಲಾ ಕಳ್ಳ ಖದೀಮರ ಪಾಲು *****...

ಇರಬೇಕು ಮನೆ ಮನೆಯಲ್ಲಿ ಮುದ್ದು ಮಗು ತುಂಬಿ ತುಳುಕುವುದು ಸಂತಸದ ನಗು ದಿನಗಳುರುಳುವುವು ಬಲು ಬೇಗ ಸಂತಸದ ಕ್ಷಣಗಳ ಸಿರಿವೈಭೋಗ *****...

1...26272829