
ಜೀವ ಜೀವದ ಗೆಳೆಯ ನೀನು ಹೇಳಿಕೊಳ್ಳಲಾಗದ ಗೆಳತಿ ನಾನು || ನಿನ್ನ ನೋಟವು ಮನವು ತುಂಬಿದೆ ಏತಕೇ ಸುಮ್ಮನೆ ಕಾಡುವೆ ನೀನು || ಮಾತು ನಿಲ್ಲದು ಮೌನ ಸಹಿಸು ನಿನ್ನ ಕಾಣುವ ಹಂಬಲ ನಿಲ್ಲದು || ಉಸಿರು ಉಸಿರಲ್ಲಿ ಉಸಿರು ಹಸಿರಾಗಿ ನನ್ನಲ್ಲಿ ನಿಲ್ಲುವ ಪ್...
ಪ್ರಿಯತಮನೆ ನಾ ನಿನ್ನ ಪ್ರೇಮದುಮ್ಮಾನದಲಿ ಕಳೆದ ಆ ಸರಿದಿನಗಳ ನೆನೆದು ಬರೆದೆ ನನ್ನೆದೆಯ ಪುಟಪುಟಗಳಲಿ || ನನ್ನ ಅಂದಿನ ಕೆಳೆಯ ಭಾವವ ಅರಿಯಲಿಲ್ಲ ನೀನು ಮರೆತು ದೂರ ಹೋದೆ ಗೆಳೆಯಾ ನನ್ನ ಹೊಂಗನಸುಗಳ ಸೂರೆ ಮಾಡಿಽಽಽ || ನನಪುಗಳ ಸಿರಿ ಸೂರೆಯಲಿ ಗೆಳ...
ನಿನ್ನ ದನಿಯಲಿ ಉಸಿರು ಹಸಿರಾಗಿ ನಿನ್ನ ಸಿರಿವಂತಿಕೆಯಲಿ ನೊಂದು ಬೆಂದವರ ಹಾಡಾಗಿ ಗೆಳೆಯಾ ನನ್ನಲ್ಲಿ ನೀನು ನಿನ್ನಲ್ಲಿ ನಾನಾಗಿ || ನಿನ್ನ ದನಿಯಲಿ ಇಂಪು ತಂಪಾಗಿ ಶೃತಿಲಯದಿ ಕೂಡಿದ ಧನ್ಯತೆ ತುಂಬಿದ ಹಾಡಾಗಿ ಗೆಳತೀ ನನ್ನಲ್ಲಿ ನೀನು ನಿನ್ನಲ್ಲಿ ನ...
ಹೂನಗೆ ಬೀರಿದಾಗ ಹೂ ಮಳೆ ಗರೆದಾಗ ನನ್ನವಳ ಮೊಗವು ಅರಳಿತ್ತು || ಬಾನು ನಕ್ಕಾಗ ಬಾಳು ಹಸನಾದಾಗ ನನ್ನವಳ ಮನವು ಸೆಳೆದಿತ್ತು || ಮೌನ ಸೆಳೆದಾಗ ಮಾತು ಬರದಾಗ ನನ್ನವಳ ಭಾವವೂ ಹೊಳೆದಿತ್ತು || ಸ್ವಾತಿ ಮುತ್ತಿನ್ಹಾಂಗ ಪ್ರೀತಿ ಹೊಳೆದಾಗ ನನ್ನವಳ ಅಧರ ...
ಹೂ ನಗೆ ಬೀರಿದಾಗ ಹೂ ಮಳೆಗರೆದಾಗ ನನ್ನವನ ಮೊಗವು ಅರಳಿತ್ತು || ಬಾನು ನಕ್ಕಾಗ ಬಾಳು ಹಸನಾದಾಗ ನನ್ನವನ ಮನವು ಸೆಳೆದಿತ್ತು || ಮೌನ ಸೆಳೆದಾಗ ಮಾತು ಬರದಾಗ ನನ್ನವನ ಭಾವವೂ ಹೊಳೆದಿತ್ತು || ಜೀವ ಬೆಸೆದಾಗ ಜೀವನ ಮುಡಿಪಾದಾಗ ನನ್ನವನ ಕನಸು ಮಿನುಗಿತ...
ಮೋಹನ ಮುರಳಿ ಕೃಷ್ಣಾ ಬೆಳದಿಂಗಳಿನಾ ಸಂಜೆಯಲಿ ಕೊಳಲನಾದದ ಅಲೆಗಳು ರಾಧೆಯ ಮನವನು ಕಾಡುವುವು ಎಲ್ಲಿರುವೆ ಹೇಳು ಮುಕುಂದಾ || ಎಲ್ಲಿ ಹುಡುಕಿದರು ಕಾಣದಾಗಿರುವೆ ಕಾಣುವಾತುರದಿ ರಾಧೆಯ ಕಂಗಳು ಮುದ್ದಾಡುವಾತುರದಿ ಮನವು ವಿರಹದ ವೇದನೆಯಲಿ ರಾಧೆಯೂ || ಚ...
ತವರೂರ ಹಾದಿಯಲಿ ಹೂವು ಚೆಲ್ಲಿ ಎನ್ನ ಮನೆಯ ಬೆಳಗುವಲ್ಲಿ ಹೊನ್ನ ಕುಡಿಯ ತಾರೆಂದು ಒಡಲ ಮಡಿಲ ತುಂಬಿ ಬಾರೆಂದು ಹೇಳಿ ಹೋದಿರಿ! ಎನ್ನ ಸಖಾ ನಾನಿಲುವೇನೆ || ನಿಮ್ಮ ಮನೆಯ ಬೆಳಗುವ ದೀಪವೆಂದೂ ಆರದೆ ಉಳಿಸುವೆ ನಿಮ್ಮದೇ ಭಾವದುಸಿರಲಿ ನಿಮ್ಮ ಒಲವ ಕಾಯುವ...
ನನ್ನ ಎದೆಯ ಗೂಡಲ್ಲಿ ಮಾತನಿರಿಸಿದ ಪ್ರೇಮಿ ನೀನು ಪ್ರೀತಿಸುವೆ ಪ್ರೇಮಿಸುವೆ ಎಂಬ ಮಾತಿನೆಳೆಯಲಿ ಸೆರೆ ಸಿಕ್ಕ ರಾಧೆ ನಾನು ||ಪ್ರೀ|| ವಿರಹ ವೇದನೆಯಲಿ ಹಗಲಿರುಳು ಕಾದಿರುವೆ ನಿನಗಾಗಿ ನಾನು ಎನ್ನ ಮನವ ತಿಳಿಯದೇ ಹೋದೆ ನೀನು ||ಪ್ರೀ|| ಬರಿದಾಗುವುದ...








