
ಗೋಧೂಳಿ ನಗಿಯಾಗ ಬೆಳ್ಳಿ ಚುಕ್ಕಿ ಹಾಡೋ ಹಾಡಿಗೆ ತೂಗ್ಯಾವೊ ಭೂಮಿ ತಾಯ ಒಡಲು ಒಡಲ ದನಿಯ ಕೇಳಿ ಮುಗಿಲ ಮಾಳಿಗೆಯ ಹತ್ತಿ ಇಳಿದು ಗಿಡ ಹೂ ಚಿಗುರಿ ಬಳುಕಿ ಹಾವು ಬಳ್ಳಿ ಆಗಸವ ಮುಟ್ಟಿ ತಾರೆ ಜೋಡಿ ಮೋಡಿ ಮಾಡಿ ಹನಿದಾವು ಮುತ್ತುಗಳ ಸಾಲು ಸಾಲು ತೆರೆದು ...
ನೇಸರದಾ ತಂಪಲ್ಲಿ ಈಶನಿಹನೋ ಬೇಸರವೇತಕೋ ಮನವೇ ಈಶ ಮಹೇಶ ಪ್ರಭು ಮಲ್ಲೇಶ ಈಶ ಲಿಂಗೇಶ ಸರ್ವೇಶನವನು ಬೇಸರವೇತಕೋ ಮನವೇ ಸತಿ ಶಕ್ತಿಯು ಸಸ್ಯ ಶ್ಯಾಮಲೆ ಜೀವ ಕೋಟಿಗೆ ಉಸಿರಾಗಿಹಳು ಬೇಸರವೇತಕೋ ಮನವೇ ರೆಂಬೆಕೊಂಬೆಗಳಲ್ಲಿ ಹಸಿರು ಎಲೆ ಬಣ್ಣ ಚಿತ್ತಾರ ನಾದ...
ನಿನ್ನ ನೀನು ನಡೆಯೇ ಮನವೆ ನಿನ್ನ ಬಾಳು ಜೇನು ನಿನ್ನ ಕರುಣೆ ಕಮಲದಂತೆ ನಡುವೆ ನೀನು ಅಮರನಂತೆ ಹಸಿರ ಹುಲ್ಲು ಹಾಸಿಗೆಯಂತೆ ಮಲ್ಗೆ ಹೂವು ಘಮ ಘಮದಂತೆ ತಾಯಿ ಒಡಲ ಬಳ್ಳಿ ನೀನು ಬೆಳೆಯ ನೀನು ಬಾಳಿನ ಬೆಳಕು ನಿಂತ ನಿಲುವು ಮಂದಹಾಸ ನಿನ್ನ ಬಾಳ್ವೆ ಸಮರಸ...
ಬಾಳಿನ ಬದುಕಿಗೆ ಆಸೆಯ ಕೊಟ್ಟವ ನೇಸರ ಬದುಕಿಗೆ ಬಣ್ಣ ಕೊಟ್ಟವ ಅವನಾರೇ ಗೆಳತಿ ಅವನಾರೇ ಆಸರೆ ಕೊಟ್ಟ ಬಂಧ ಬಂಧನ ನಡುವೆ ಪ್ರೀತಿಯ ನೇಯ್ಗೆ ನೈಯ್ದವ ಅವನಾರೇ ಗೆಳತಿ ಅವನಾರೇ ಸೆರೆಯಾದ ಪ್ರೀತಿಗೆ ಚೈತನ್ಯ ತುಂಬಿ ಸೋಬಾನೆ ಹಾಡಿಗೆ ಕೆಳೆಯ ಕಟ್ಟಿಹ ಅವನಾ...
ಕಾಡ ಬೇಡ ಗೆಳತಿ ಹೊನ್ನಾಡ ಬೇಡ ಬೆಡಗಿ ಒಲವಿನಾಸೆರೆ ಬಯಸಿ ಬರಸೆಳೆದು ಬಿಗಿದಪ್ಪಿ ಮುದಗೊಳಿಸಿ ನಿನ್ನ ಕರೆದಿದೆ ಕಾಡ ಬೇಡ ಗೆಳತಿ ನಿನ್ನತನ ನೆನೆದಾಗ ಉಸಿರುಸಿರು ನನ್ನ ಮನದಾಗ ಹೊನ್ನಾಡ ಬೇಡ ಹುಡುಗಿ ಅಕ್ಕ ತಂಗೀರು ನನ್ನ ಬೆನ್ನ ಮ್ಯಾಲೆ ನೀರು ಹೊಯ್...
ಸುವ್ವಿ ಸುವ್ವ ಲಾಲೀ ಹಾಡೆ ತಂಗಾಳಿ ಸುವ್ವಿ ಸುವ್ವ ಲಾಲೀ ಹಾಡಿ ತಂಪಾಗಿಸಿ ನನ್ನ ಮನಸನು ಓಲಾಡಿಸು ತಂಗಾಳಿ ನಿನ್ನ ಬಯಸಿ ಬಯಕೆಗಳ ಚಿಗುರಲಿ ಹೊಸ ಗೀತೆಯ ಬರೆದು ವಸಂತನ ಕರೆದು ನನ್ನ ಮನಸನು ತೂಗಿಸು ತಂಗಾಳಿ ಆ ಮರದ ಹೂವು ಈ ಮರದ ಹೂ ಗೊಂಚಲು ನನ್ನ ಮ...
ಬಲ್ಲೆ ನಾನು ನಿನ್ನ ಅಂತರಂಗವ ಬಲ್ಲೆನೆಂದರಿಯದೆ ಬರಿದಾದ ಭಾವಗಳ ತುಡಿವ ಮನದಾಳಗಳ ಬಲ್ಲೆನೆಂದರಿಯದೆ ಕನಸುಗಳ ತಂದೆ ನೀನು ಅಂತರಂಗದಲಿ ಸುಳಿದ ನೋಟ ಕಪ್ಪೆ ಚಿಪ್ಪಿನಲಿ ಅಡಗಿದೆ ಮಾಯೆ ನೀನು ಮೌನ ಮಾತಾಗಿದೆ ಪ್ರೇಮ ಮಸುಕಾಗಿದೆ ಹಸೆಮಣೆ ಹಾಡಿದಂತೆ ಚೈತ...
ತಪ್ಪಾಯ್ತು ನನ್ನದೂ ಶಾಶ್ವತವಲ್ಲದ ಪ್ರೀತಿಯ ನೆನೆದು ಇಹದ ಮೋಹ ದಲ್ಲಿ ಬೆಸೆದು ನೊಂದನೂ ಗುರುವೇ ದಾರಿ ತೋರೆನಗೆ ಅವನಿಲ್ಲದ ಹಾಡು ಪಾಡು ಇವನಿಲ್ಲದ ಕಡಲು ನಿನ್ನ ಅಭಯ ಕಡಲ ದೋಣಿಯಲಿ ನಾನು ದಡವ ಸೇರಿಸು ಗುರುವೇ ದಾರಿ ಕಾಣಿಸೂ ಅವನೊಂದು ಬಣ್ಣದ ಕೊಡ ...
ಜೋಗದ ಜೋಗಿ ನೀನು ಏಕೆ ಕಾಡುವೆ ನನ್ನನ್ನು ನೀನು ನೀನಾಗಿರಲು ಜೋಗಿ ನನಗಿಲ್ಲ ಚಿಂತೆ ಏನು ಹೋಗು ಹೋಗೆಲೋ ಜೋಗಿ ಮುಂದಕೆ ಹೊಟ್ಟೆಗಿಲ್ಲದೆ ಕಟ್ಟೆಯೇ ಆಸರೆ ಆಗಿದೆ ಏನೆಂದು ಹೇಳಲೋ ಜೋಗಿ ಏನನ್ನು ಕೊಡಲೋ ಜೋಗಿ ಜೋಗಿ- ಜೀವನ ನಿನ್ನದ ಅವ್ವ ಭಾವನ ನಿನ್ನದ...
ಕತ್ತಲು ಕಳೆಯಲು ಬೆಳಕು ಮೂಡಬೇಕು ಸುಂದರ ವನದಲಿ ಹೂವುಗಳು ಅರಳಿರಬೇಕು ಕಳೆಯ ಚಿಗುರಲಿ ಪ್ರೀತಿ ತುಂಬಿರಬೇಕು ಪ್ರೀತಿ ಒಲುಮೆಯಲಿ ಪ್ರೇಮ ಚುಂಬನವಿರಬೇಕು ವಿರಹದ ನೋವಲ್ಲಿ ನೆನಪುಗಳು ಮಿಡಿಯಬೇಕು ಮಿಡಿದ ಭಾವನೆಗಳಲಿ ಸ್ವಪ್ನ ಸುಂದರವಾಗಿರಬೇಕು ಸುಂದರ...








