
ಪಡುವಣದ ಕಡಲಿನೊಳು ಪರಮಾಪ್ತ ಪರಧಿಯೊಳು ನೇಸರನ ಮಡಿ ಸ್ನಾನ ಚಿಮ್ಮಿಸಿದೆ ಧರೆಯೊಳಗೆ ಕೆಂಬಣ್ಣ ಹೊಂಬಣ್ಣ ನೀರಿನಾಳದಲಿ ಫಳಫಳನೆ ಮಿಂಚಿ ಮತ್ಸ್ಯಗಳು ಕುಣಿದಿರೆ ಅಂಬುಧಿಯ ತಟದೊಳಗೆ ಕೌಪೀನ ಕಳಚಿ ಮರಿ ಮತ್ಸ್ಯಗಾರರು ಉಬ್ಬರಿಸ ಅಲೆಯೊಳಗೆ ಜೋಕಾಲಿ ಆಡುತಿ...
ಹೆಚ್ಚಿಗೇನು ಬಯಸಿರಲಿಲ್ಲ ಆ ಜನ ಅಂಬಲಿಗೆ ಅನ್ನ ಬೆರೆಸಿ ಕುದಿಸಿಟ್ಟು ಕುಡಿದರೆ ಅಷ್ಟೇ ಸಾಕು ಅಮೃತದ ಪಾನ ಒಡೆಯನ ಗದ್ದೆಗೆ ಒಂದಿಷ್ಟು ಗೊಬ್ಬರ ಎರೆದರೆ ಸಾಕು ಆದಿನ ಎಸೆದ ಎರಡಾಣೆಗೆ ತೃಪ್ತ ಮನ ಹೊತ್ತು ಮರೆ ಸರಿಯೇ ತಿಂಗಳಿಣುಕುತ್ತಿರೆ ಒಂದಷ್ಟು ಬ...
ಅಲ್ಲಿ ವಿದ್ವತ್ತಿನದೇ ಮೇಲುಗೈ ದ್ವೈತಕ್ಕೂ ಅಲ್ಲ, ಅದ್ವೈತಕ್ಕೂ ಅಲ್ಲ ಅಸಲಿಗೆ ದ್ವೈತ ಅದ್ವೈತಗಳೇ ಇಲ್ಲ, ಎಲ್ಲ ವಿದ್ವತ್ತಿನ ಕರಾಮತ್ತು ಹೊಸತು ಹುಡುಕುವ ಪರಿ ಪರಿಪರಿಯಾಗಿ ಇನ್ನೊಂದೆಡೆ ಕಾಂಚಾಣದ ಕುಣಿತ ಸತ್ಯಕ್ಕೂ ಸ್ಥಳವಿಲ್ಲ ಜ್ಞಾನಕ್ಕೂ ಬೆಲೆಯ...
ಬೀಜ ಬೇರೂರಿ ಕುಡಿ ಇಡುತ್ತಿರುವಾಗಲೇ ಹತ್ತಿಕೊಂಡಿತ್ತು ಗೆದ್ದಲು ಬಿಡಿಸಿಕೊಳ್ಳಲು ಹರಸಾಹಸಗೈದರೂ ತಪ್ಪಿಸಿಕೊಳ್ಳಲು ಆಗಲೇ ಇಲ್ಲ ಗೆದ್ದಲು ಹಿಡಿದ ಬೀಜ ಸಾಯುವುದೇ ದಿಟ ಎಂದುಕೊಂಡರೂ ಹಾಗಾಗಲಿಲ್ಲ ಉಳಿವಿಗಾಗಿ ಹೋರಾಟ ತುಸು ಉಸಿರುವವರೆಗೂ ಚಿಗುರಿಕೊಂ...
ಜಟಿಲ ಬದುಕಿನ ಯಕ್ಷ ಪ್ರಶ್ನೆಗಳು ಹೊಡೆಮರಳಿ ಕಾಡುವವು ಯಾಕೋ? ಸಮೃದ್ಧ ಸಂಸಾರ ಎಂದುಕೊಂಡರೂ ಅತೃಪ್ತಿ ಅನಾಸಕ್ತಿ ಮುಲುಗುವುದು ಯಾಕೋ? ಬಿಗಿವ ಬಿಗಿಸುವ ಬಗಿವ ಬಗ್ಗಿಸುವ ಸಂಬಂಧ ಅನುಬಂಧಗಳು ಬಾಯಾರಿ ಕಾಂಚಣಕ್ಕೆ ಕುಣಿಯುವವು ಯಾಕೋ? ಜನನ ಮರಣದ ಗುಟ್ಟ...








