
ಉಕ್ಕುವ ಕಡಲ ಮೋಹಿಸುವ ಅವಳ ಹಠಕ್ಕೆ ಬರ್ಫದ ಬೆಂಕಿಯ ಕುಡಿವ ಹುಚ್ಚು. ಸೀದು ಹೋದರೂ ಬಿಸಿಯುಸಿರ ಹಂಬಲದ ಪಾತ್ರೆ ಮತ್ತೆ ಮತ್ತೆ ತಿಕ್ಕಿ ತಿಕ್ಕಿ ಶುಭ್ರವಾಗಿಡುವುದೇ ಅವಳ ದಿವ್ಯ ಭಕ್ತಿ. ಕಪ್ಪು ಬಿಳುಪಿನ ಚಿತ್ರಗಳೇ ಎದೆಯ ಹಾಳೆಯ ಮೇಲೆ ಒತ್ತಡ ಹೇರಿ ...
ಬೆಳಕಿನ ಹನಿಗಳ ಮಂಡಲಕ್ಕೆ ಸನ್ನೆಕೋಲು ಹಾಕಿ ಮೀಟಿ ತೆಗೆದಿಟ್ಟುಕೊಳ್ಳಬೇಕು ಅನ್ನಿಸುತ್ತದೆ ಒಂದಿಷ್ಟು ಹಳತಾಗದ ಅದನ್ನೊಯ್ದು ನೆತ್ತಿಯ ಗೋಡೆಗೆ ಅಂಟಿಸಿಕೊಂಡರೆ ಚೆನ್ನ ಜ್ಞಾನದ ಗುಡಾರದ ಧ್ವನಿಯೊಂದರ ಮರ್ಮರ. ಮನೆ ಮುಂದಿನ ಚಪ್ಪರ ಬಿರುಗಾಳಿಗೆ ಬಿದ್...
ಸ್ತಬ್ಧರಾತ್ರಿಯಲ್ಲಿ ಕ್ಲೇಷಗೊಂಡಿದೆ ಗೋರಿಯಾಚೆಗಿನ ಮರ. ಎಲೆಗಳಲ್ಲಿ ರೌರವ ಮರ್‍ಮರ ಹುದುಗಿಸಿಟ್ಟ ಎದೆಯ ಹಾಡನ್ನು ನಿರ್ಜನ ನೆಲೆಯಲ್ಲಿ ಆಗಾಗ ಗುನುಗುತ್ತಾ, ನಿರುಮ್ಮಳ ನಗ್ನತೆಯ ಧರಿಸಿ ಬಯಲಾಗಬೇಕು. ವಿಷಣ್ಣತೆಯ ಹಿಂಡು ಹಿಂಡು ಕುರಿಗಳು ದಾರಿಯುದ್...
ಭಾಗ-೨ ಆತ ತನ್ನ ಹೆತ್ತಮ್ಮನನ್ನು ಒಬ್ಬ ಉತ್ಕಟ ಪ್ರೇಮಿಯಂತೆ ಪ್ರೀತಿಸುತ್ತಾನೆ. ತಾಯಿಯ ಪ್ರೀತಿಯ ಅಭಿಲಾಷೆಯಿಂದ ಹೊರಬರಲಾಗದೆ ತನ್ನನ್ನು ಆರಾಧಿಸಿ, ಪ್ರೀತಿಸಿದ ಬಾಲ್ಯದ ಗೆಳತಿಯಿಂದ ದೂರ ಸರಿಯುತ್ತಾನೆ. ಪ್ರೇಮ ಕಾಮದ ಹುಡುಕಾಟದಲ್ಲಿ ಅಸಂಬದ್ಧವೆನಿ...
ರಣ ಬಿಸಿಲು ಕೊಡೆ ಹಿಡಿದಿದೆ ನೆಲದ ಒಡಲಿಗೆ ಸಣ್ಣಗೆ ಬಿರುಕು ಕದಲದ ಭಂಗಿ, ನೆಟ್ಟ ನೋಟ ಏಕಸ್ಥ ಧ್ಯಾನ ಕಲ್ಲಾಗಿ ಕೂತು ಕಾಲವಾಗುವ ಬಯಕೆ ಕಾಯುವಿಕೆ ಎಂದರೆ ಇದೇ ಇರಬೇಕು. ಒಡಲು ಬಯಸಿದ ಹಸಿವು ಕಾಲಬುಡದಲಿ ಸಿಗುವುದೆಂದು ಮೇಯುವುದು ಮರೆತು ಹೋದರೆ ಬಂಜ...
ಹಿಂದೊಮ್ಮೆ ಕೂಡಾ ಹೀಗೆ ಆಗಿತ್ತಲ್ಲ. ಗಂಟುಗಂಟಾಗಿ ಸಿಕ್ಕು ಬಿದ್ದು ಅ- ಕ್ಷರದ ತಾರೆಗಳೆಲ್ಲ ನೆಲಕ್ಕೆ ಚೆಲ್ಲಿದಂತೆ ಜ್ಞಾನಪಾತ್ರೆಯ ಎದುರು ಹಸಿದ ಕಂಗಳು ಮೂರ್‍ಚೆಗೊಂಡ ಮನಸ್ಸು ನಗ್ನವಾಗಿ ನಿಂತುಬಿಟ್ಟವು ಕಾಲ ಚಲಿಸಲಿಲ್ಲ. ಆದರೆ ಮಜ್ಜಿಗೆಯೂಡಿದ ಮ...
ಅದೆಷ್ಟೋ ಸಣ್ಣ ದೊಡ್ಡ ಚಿತ್ರ ವಿಚಿತ್ರ ಆಕಾರದ ಸಂಖ್ಯೆಗಳು ಮುಖಬಲೆಗಳು, ಸ್ಥಾನಬೆಲೆಗಳು ಗೋಜಲಿನ ಗೂಡನ್ನು ಕಂಡಾಗಲೆಲ್ಲಾ ವತರ್‍ತುಲಾಕಾರದ ಭೂಮಿತೂಕದ ಶೂನ್ಯಕ್ಕೆ ಶರಣಾಗುತ್ತದೆ ಮನ. ಅಸ್ಮಿತೆಯ ಹಂಗೇ ಇಲ್ಲದೇ ಮನೆಯಂಗಳದ ಮೂಲೆಯಲ್ಲಿ ಅಡಿಕೆ ಸಿಪ್ಪ...
ಆಳದ ನೆಲೆಯಲ್ಲಿ ಕವಲುಗಳ ಕುಸುರಿ ಕುಂದುವುದಿಲ್ಲ ಅಧಿತ್ವದ ಸೊಗಸು ಜಡತ್ವ ಮೂಡದ ಜಗಮಗಿಸುವ ಬೆಳಕು. ಸ್ವಯಂಸ್ಪೂತರ್‍ತಿ ಸೆಲೆಯ ಅರಗಿಸಿ ದಕ್ಕಿಸಿಕೊಳ್ಳಬೇಕು. ಹರಳೆಣ್ಣೆ ಗಾಢವಾಗುರಿದರೆ ಕಡುಕಪ್ಪು ಕಾಡಿಗೆ ಚಿತ್ರ ಬರೆಯುತ್ತದೆ ಮುಚ್ಚಳದ ಅಂಚಿಗೆ. ...
ಹಾದಿ ಬೀದಿಯ ಗುಂಟ ತಂಪು ನೆರಳಿನ ಸಾಲು ತಂಗಾಳಿ ತೀಡಿ, ಮುಂಗುರುಳು ಮೋಡಿ ಮಲ್ಲಿಗೆಯ ನರುಗೆಂಪು ಬಾನಾಡಿ ನುಡಿ ಇಂಪು ಹಡೆದವ್ವ್ನ ನೆನಪು ನೂರ್ಕಾಲ ತೌರೂರ ಬಾಳೆ ತೊಯ್ದಾಟ ನೋಡು ಕಣ್ಣೂರ ಮನೆಯಲ್ಲಿ ಹನಿಗೂಡಿ ಹಾಡು ಕಣ್ಣಕಾಡಿಗೆಗಿಂತ ಮಣ್ಣವಾಸನೆ ಚೆ...








