
ನೀ ಮೊನ್ನೆ ಅಚಾನಕ್ಕಾಗಿ ಪತ್ರ ಬರೆದೆ ಅದರ ತೇವ ನನ್ನ ತೋಯಿಸಿತು ಕಣ್ಣು ನೀರಿನ ಕೊಳವಾಯ್ತು ಮಂಕಾದೆ. ಯಾಕೆ ಹೀಗೆ ಮೋಡದಲಿ ತೇಲಿ ತೇಲಿ ಬಂದೆ ಬರ್‍ರನೆ ಮಳೆ ಸುರಿಸಿ ಮನೆ ಮಠ ಮನಸ್ಸನ್ನೆಲ್ಲಾ ರಾಡಿ ನೆನಪಿನ ಊಟೆಗಳಿದ್ದವು ನನ್ನಲಿ. ಗಾಳಿ ಮಳೆ ಚಳಿ...
ಸಮುದ್ರದ ಗೀತೆ ಮುಗಿಯುವದಿಲ್ಲ ಲೆಕ್ಕ ಪುಸ್ತಕದಲಿ ಬಾಕಿ ಕೊಡಬೇಕಾಗಿದೆ ಋತುಗಳು ಬದಲಾಗುತ್ತವೆ ಬಿಡುಗಡೆಯ ಕನಸುಗಳು ಕಾಣಬೇಕಾಗಿದೆ. ಮಾತನಾಡಿದ ಮಾತುಗಳು ಹಿಂದೆ ತೆಗೆದುಕೊಳ್ಳುವದಕ್ಕೆ ಬರುವುದಿಲ್ಲ. ನೀಲ ಗಗನದ ಹೊಳೆವ ಚಿಕ್ಕಿಗಳು ಹೊನ್ನ ಮರಳಿನಲಿ...







