ಇಡೀ ರಾತ್ರಿ ಎದ್ದು ಕೂಡುತ್ತೇನೆ ಬಿದ್ದ ಕೆಟ್ಟ ಕನಸಿನ ಅಬ್ಬರಕೆ. ಮನದ ಎಲ್ಲಾ ಚಿತ್ರಗಳನ್ನು ಅಳುಕಿಸಿದರೂ ಎದ್ದು ಬಂದು ನಿಲ್ಲುತ್ತದೆ ನಿನ್ನ ಮುಖ ಕನ್ನಡಿ ಚೂರುಗಳಾಗಿವೆ ಮನದ ಮಾತುಗಳು. ಹೂವಕಂಪ ನೆರಳಿಗೆ ಹಾಯ್ದು ಚಿಟ್ಟೆಯ ರೆಕ್ಕೆಯಲ್ಲಿ ಕೆಂಪು...

ನಮ್ಮ ನಡುವಿನ ಮಾತುಗಳೆಲ್ಲಾ ಮಾತಲ್ಲ ಗೆಳೆಯಾ ಅಲ್ಲಿರುವುದು ಮೌನದ ಪ್ರತಿಬಿಂಬ, ನದಿಯಲಿ ತೇಲುವ ದೋಣಿಯ ಗೆಣೆನಾದ ನೀಲಿ ಆಗಸದ ತೇಲುಚುಕ್ಕಿಗಳ ಬಿಂಬ ಮೆಲ್ಲಗೆ ಅರಳಿಸುತ್ತದೆ ಸೂರ್ಯಕಾಂತಿ ಕಣ್ಣಕಾಂತಿ, ತೊಟ್ಟಿಲಲಿ ಮುದ್ದು ಕಂದನ ಕೇಕೆ ನಮ್ಮ ನಡುವಿ...

ಅಶ್ವಯುಜ ಸೂರ್ಯ ಚಿಮ್ಮಿದಾಗಕಿರಣಗಳು ಬೆಳಕ ಬೀಜಗಳುರೆಂಬೆಕೊಂಬೆಗಳ ಪಣತಿಗಳಲಿಮಿಂಚುಗೊಂಚಲುಗಳು ಪತಂಗಗಳುಭೂಮಿ ಬಾನಂಗಳದಲಿ ಚಿನಕುರುಳಿಗಳು. ಸಂಭ್ರಮದ ಅಲೆಅಲೆಗಳಲಿ ತೇಲಿವೆನಮ್ಮೆಲ್ಲರ ಮಿನುಗು ಕಣ್ಣೋಟಗಳುಮಾತು ಹಾಡಿನ ಸಿರಿಶುಭದ ಸುಗ್ಗೀಪೇಟೆತುಂಬ ...

ಇಲ್ಲಿ ಹಸುರ ಹಸುರಿಗೆಚಿಗುರು ಹೂವ ಕಂಪುಬಳ್ಳಿ ಬಳ್ಳಿ ತೇಲಿ ಸೂಸಿಗುಂಗಿ ಗಾನ ಇಂಪು. ನೆರಳಕಾವ ಮುಗಿಲಮೋಡಇಣುಕಿ ಸೂರ್ಯ ಬೆಳಕ ಚೆಲ್ಲಿಇಬ್ಬನಿ ಹನಿ ಹನಿ ಮುತ್ತು ಹರಡಿದಂಡೆಯಾಗಿ ಸೇವಂತಿಗೆ ಮಲ್ಲಿಗೆ. ಮೆದು ಹಸಿರು ಎಳೆಹೆಸರುಚಾಪೆ ಹಾಸಿ ತಿಳಿಗಾಳಿಸ...

ಹಳಿಗಳ ಮೇಲೆ ಅಲೆದು ಅಲೆದು ತಿರುವಿನ ಪಯಣ ನನ್ನೊಳಗಿನ ಮಿತಿ ಮೀರಿ ಬೀಸುಗಾಳಿಗೆ ಉಸಿರಾಡಿದ ಕನಸುಗಳು ನಾನಿಳಿದ ನಿಲ್ದಾಣದ ತುಂಬ ಬರೀ ಅಪರಿಚಿತರು. ಯಾರೊಳಗೆ ಯಾರಿಲ್ಲ ಬರೀ ಕಣ್ಣೋಟಗಳು ಹೆಜ್ಜೆ ಹೆಜ್ಜೆಗೂ ತವಕಗಳು ಅರಳಿದ ಹೂವಿನಿಂದ ಒಮ್ಮೆಲೇ ಘಮ್ಮ...

ಮುತ್ತಿನ ಹನಿಯ ಮಂಜು ಮರ್ಮರದ ಗಾಳಿ ಬೀಸಿ ಚಳಿಗಾಲದ ನೀಲ ಆಕಾಶ ಖಾಲಿ ಒಡಲೊಳಗಿನ ಏಕಾಂತದ ಮೌನಕೆ ಏನಾಗಿದೆ ಎಂಬುದು ಯಾರೂ ಕೇಳುವದಿಲ್ಲ. ಕವಿತೆ ಹಾಡುವದಿಲ್ಲ. ಆಕಾಶದ ಎತ್ತರಕೆ, ಅದಕೆ ಭೂಮಿಯ ಅನಿವಾರ್ಯತೆ ಹೊತ್ತ ಕಂಬಳಿಯಡಿ ಹೊರಳಾಡಿವೆ ಈ ನೆಲದ ಹಂ...

ಅವನ ಮಣ್ಣ ಪ್ರೀತಿ ಬಾಳಿಗೆ ಬಂಗಾರ ಸಿಂಗಾರ ದಿನಾಲೂ ಬೀಸುವ ಗಾಳಿಯ ನೆತ್ತಿ ನೇವರಿಸಿ ಮಣ್ಣನೊಡನೆ ಮಾತನಾಡಿ ಅವಳ ಹಿಗ್ಗಿಸಿ ರೋಮಾಂಚನಗೊಳಿಸುತ್ತಾನೆ ಗಂಧವತಿ ಅವಳು ಎದೆ ತೆರೆದು ಹಸಿರು ಸೂಸುತ್ತಾಳೆ. ಮೆದುವಾದ ಅವಳು, ಅವನು ಬಿತ್ತಿದ ಬೀಜಕೆ ಬಸಿರಾ...

ಈ ಬೀದಿಯಲಿ ಎಷ್ಟೊಂದು ಗೂಡಂಗಡಿಗಳು ಹೊಟ್ಟೆ ಉಬ್ಬಿದ ಬಸುರಿಯಂತೆ ತುಂಬ ತುಂಬಿಕೊಂಡಿವೆ ಗಿಜ ಗಿಜ ಸಾಮಾನುಗಳು ಸಂಜೆ ಸೂರ್ಯ ಸುಮ್ಮನೆ ಇಣುಕಿದ್ದಾನೆ. ಜನರ ಪಾದದ ಗುರುತುಗಳು ಒಂದರ ಮೇಲೊಂದು ಹೊಂದಿಕೊಂಡಿವೆ ಗೆರೆಯಂತೆ ಕಾಣುವ ರಸ್ತೆಯಲಿ ಮಕ್ಕಳ ಕೈ ...

ಈ ದೇಶದಲಿ ನ್ಯಾಯ ನಿರ್ಣಯಕೆ ಬಂದ್ ಆಚರಣೆ ಪ್ರಜೆಗಳ ತುಟಿಗಳಿಗೆ ಹೊಲಿಗೆ ಹಾಕಿ ಬಿಗಿ ಬಂಧನ ಪ್ರತಿ ದಿನದ ಒಂದು ಹೊತ್ತಿನ ಊಟಕೆ ಪರದಾಡುವ ಕೂಲಿಗೆ ಯಾವ ಆದೇಶ ಬೆಚ್ಚನೆಯ ಭರವಸೆ ಹುಟ್ಟು ಹಾಕೀತು ದೂರಾದುಷ್ಠರ ಆಡಳಿತದ ಕಪಿ ಮುಷ್ಠಿಗೆ ನಲುಗಿದ ಅವರಿವ...

ಈ ಭೂಮಿಯ ಆವರಣದಲಿ ನನ್ನ ನಿನ್ನ ಪಾದದ ಗುರುತುಗಳು ದಾಖಲಾಗುವುದಿಲ್ಲ ಯಾವುದೂ ಕಾರಣವಾಗುವುದಿಲ್ಲ. ಹಾಗೆ ತನ್ನನ್ನ ತಾನೆ ಬದುಕು ಚಲಿಸುತ್ತದೆ ಬೇರೆಯವರ ಹೆಜ್ಜೆಗಳ ಮೇಲೆ ಹೆಜ್ಜೆ ಊರುತ್ತ. ದಾರಿ ಯಾವುದೆಂದು ಯಾರೂ ತಿಳಿದಿರುವದಿಲ್ಲ ಮತ್ತೆ ಒಂದು ಹ...

1...1314151617...21