ಕ್ರಿಮಿನಲ್ಲು ನನಕಣ್ಣು ಸಿವಿಲ್ಲು ಮಾಡಯ್ಯ ಶಿವಬಲ್ಲ ಸಿಹಿಬೆಲ್ಲ ಆಗಬೇಕು ಕೆನೆಬೆಲ್ಲ ಕೊಬ್ಬರಿಯ ಎದೆಯನ್ನು ನೀಡಯ್ಯ ರಾವಣನ ರಂಬಾಟ ನಿಲ್ಲಬೇಕು ಕರಿಯ ಬೆಕ್ಕಿನ ಕಣ್ಣು ಗಿಡದ ಮಂಗನ ಕಣ್ಣು ಬೇಲಿಮುಂಗಲಿ ಕಣ್ಣು ನಿಲ್ಲಬೇಕು. ಓ ಅಕ್ಕ ಓ ತಾಯಿ ನನ್ನವ...

ಮೂಲವತನದ ಮೌನ ಲೋಲನೆ ನಿನಗೆ ನಾ ಪಂಚಾಮೃತಂ ಮುಕ್ತಿಧಾಮದ ಮುಗ್ಧಲೀಲನೆ ಕೊಳ್ಳುಕೋ ದಿವ್ಯಾಮೃತಂ ಬಾಯಿ ಗಿಂಡಿಯು ದೇಹ ಹಂಡೆಯು ಆತ್ಮ ಕೆಂಡವ ಹಾಕಿದೆ ಮಾಯ ಕುಳ್ಳಿಗೆ ಮೋಹ ಕಳ್ಳಿಗೆ ಯೋಗ ಕೊಳ್ಳಿಯ ಹಚ್ಚಿದೆ ಕಣ್ಣ ಸುಟ್ಟು ಕೈಯ ಸುಟ್ಟು ನನ್ನ ಸುಟ್ಟು ...

[ಶಿಶುಗೀತೆ] ಡ್ಯಾಡಿ ನೀನೆ ಮಾಮಿ ನೀನೆ ಮಮ್ಮು ನೀಡುವ ದೇವನೆ ಚಿಗರಿ ನಾವು ಬಗರಿ ನಾವು ಚಿಮ್ಮಿ ಆಡಿಸು ತಂದೆಯೆ ಹಾಡು ನಮ್ಮದು ಹೆಜ್ಜೆ ನಮ್ಮದು ಹಣ್ಣು ಹೂವು ನಮ್ಮವು. ಮಳೆಯು ನಮ್ಮದು ಇಳೆಯು ನಮ್ಮದು ಪಕ್ಕ ಬೀಸಿ ಪುಟಿವೆವು ಮುಗಿಲು ನಮ್ಮದು ಗಗನ ...

ನಾಟಕಾ ಬಂದೈತೆ ಬಾರೇ ಅತ್ತೆವ್ವಾ ನಾಟಕಾ ಕಂಪೇನಿ ಬಂದೇತೆವ್ವಾ|| ಪುಗಸೆಟ್ಟಿ ಬಂದೈತಿ ಚೀಟಿಲ್ಲ ನೋಟಿಲ್ಲ ಕಟ್ಟವ್ವಾ ಜಡಿಮಾಲಿ ಬಾರೇಯವ್ವಾ ಪೀತಾಂಬ್ರ ತಾರವ್ವ ತೊಡಿಗಚ್ಚಿ ಹಾಕವ್ವ ಗೆಜ್ಜೀಯ ಕಟ್ಟವ್ವ ಬಾರೇಯವ್ವಾ ಪಾಸಿಲ್ಲ ಪಾಟಿಲ್ಲ ಕಟ್ಟಿಲ್ಲ ಮೆ...

ಪಂಚ ಕಳ್ಳರ ತಂದು ಮಂಚದಾ ಮೇಲಿರಿಸಿ ಈ ಮುಗ್ಧ ಗೋವುಗಳು ಮೆರೆಸಿರುವವು ಪಂಚ ಪೀಠವ ಕಟ್ಟಿ ಪಂಚ ಪಾಲಕಿ ಕಟ್ಟಿ ಅಡ್ಡಾಗಿ ಉದ್ದಾಗಿ ಎತ್ತಿರುವವು ಓ ಮುಗ್ಧ ಸೋದರರೆ ಅತಿಮುಗ್ಧ ಭಾವುಕರೆ ಈ ಚರ್ಮ ಚೀಲಗಳ ಹೊರುವಿರೇಕೆ ಆರತಿಯ ತಂದಿರುವ ಓ ಅಕ್ಕ ತಾಯಿಗಳೆ...

ಹಾರುತಿದೆ ನೋಡಿಲ್ಲಿ ” ಸೌಂದರ್ಯಸ್ವರ್ಗ ! ” ಹುಲ್ಲ ಮರೆಯಲ್ಲಿ, ಬೇಲಿ ಬದಿಯಲ್ಲಿ; ಮಿಣುಕುತಿದೆ ಆಕಾರ ಬಲು ಕಿರಿದು, ಜೀವ ಸ್ವರ್ಗ ! ನಲಿಯುತಾ ನೆಗೆಯುತಾ ಚಲುವು ಹಾರುತಿದೆ ಕಣವಿಲ್ಲಿ ಕ್ಷಣವಲ್ಲಿ; ಮಿಂಚುವೇಗ ! ಮುಳ್ಳು ರಾಶಿಯಲಿ, ಕಳ್ಳಿ...

ಬೇವು ವಿಷವಾದೊಡೆ ಅದರ ನೆರಳು ವಿಷವೇ ? ಮಾವು ರುಚಿಯಾದೊಡೇನದರ ನೆರಳು ರುಚಿಯೇ ? ಕೀಳು ಹೊಲೆಯನೆನಲು ಹಿರಿಮೆಗೆ ಸಾವೇ ? ಸಿರಿವ ಸಿರಿಯಾದೊಡೇ ಶೀಲದಲಿ ಸಿರಿಯೇ ? ತಿನಲಾಗದು ಬಲುಕೀಳು ಹುಲ್ಲೆನಲು ಸಲ್ಲುವದೇ ? ಬಿಡಲಾಗದು ಸಿಹಿ ಕಬ್ಬೆನಲದನೆ ಮೆಲಬಹ...

ನೈಜ ಶಿಲ್ಪಿ, ಸತ್ಯ ಕಲ್ಪಿ, ನಿಜಾತ್ಮ ರಕ್ಷಿ ನಿತ್ಯ ಶಿವನು ಸತ್ವ ಪೂರ್ಣನು ನ್ಯಾಯ ನಡೆಯ ಸ್ಥಿತಪ್ರಜ್ಞ ನಿಷ್ಕಲ್ಮಷಿ ಜ್ಞಾನ ಜಲಕಲಾಸಿ ವಿರಕ್ತನು ನ್ಯಕ್ಷ ವೃಕ್ಷ ಬೀಜ ನೆಡದ ಸೊಗಸು ರೂಪಿ ಜಾಢ್ಯ ತಿಮಿರ ಹೊದಿಕೆ ಅಳಿದ ವೀರನು ವೈರವಳಿದು ವಿಮಲನಾಗಿ...

ಓ ಎನ್ನ ಸೋದರಿ! ವೀರ ಭಾರತದ ನಾರಿ ! ಬಾ ಇಲ್ಲಿ ಹೊರಜಗಕೆ, ಶಾಂತಿ ಸಮತೆಯ ಎಡೆಗೆ ಹೋಗುವಾ ನಾವೆಲ್ಲ ಗಗನ ಗಡಿಯ ಮೀರಿ ಕರೆಯುತಿಹುದು ನೋಡಲ್ಲಿ ! ಬಾ ಭಾವಿನಾಡಿನೆಡೆಗೆ ನಿನಗಂದರವರಾರು ಅಬಲೆ ನೀನಿರುವಿ ಎಂದು ಅರಿಯಲಾರರೇ ಆದಿ ಅವತಾರ ಶಕ್ತಿ ಯಾರು ?...

ಹರನ ನಾಮವ ಹಿಡಿದು ದಿನಬೆಳಗು ಹಾಡುವಿ ಆ ಹರನು ಇನ್ನಾರು ತಿಳಿಯಲಾರಿ ಹೃದಯ ಗಂಗೆಯ ಹೊಳೆಯಲ್ಲಿ ತೇಲಿಬಿಟ್ಟಿರುವಿ ನಿಜಭಕ್ತಿ ತೊರೆದೀಶನನು ಕಾಣಲಾರಿ ಹರನೆಲ್ಲಿ; ನೀನೆಲ್ಲಿ; ಅವನ ಹುಡುಕುವಿಯೆಲ್ಲಿ ? ಅಹಂಕಾರದೊಳು ನೀ ಮರೆದು ಪೂಜಿಸಲು ನಿನ್ನ ಪತ್ರ...

1...2829303132...35