ಹರಿದ್ವಾರ

ಹೃಷೀಕೇಶದಲಿ ಮುಳುಗಿ ಹರಿದ್ವಾರದಲೆದ್ದವನೆ ದೇವಗಂಗೆಯ ಆಳವೆಷ್ಟು ಹೇಳು ? ಚರಾಚರಗಳನೂ ಪ್ರೀತಿಸುವ ಯಾತ್ರಿಕನೆ ಕಪ್ಪೆ ಮೀನುಗಳಿಗೆ ಚೆಲ್ಲಿದೆಯ ಕಾಳು ? ಯಾವ ದೇವರ ಗುಡಿಗೆ ಯಾವ ಗೋಪುರಗಳಿಗೆ ಎಷ್ಟೆಷ್ಟು ಬಾರಿ ಬಂದೆ ಸುತ್ತು? ತೊಯ್ದ...

ಒಬ್ಬ ವಿಯೆಟ್ನಾಮೀ ಸುಂದರಿಗೆ

ಎಲೆ ವಿಯಟ್ನಾಮಿನ ಸುಂದರಿಯೆ ನಿನ್ನ ಹೆಸರು ಹುಣ್ಣಿಮೆಯೆಂದು ಹೂವೆಂದು ಹಸಿರು ಹುಲ್ಲಿನ ಬೆಟ್ಟವೆಂದು ಪ್ರಾತಃ-- ಕಾಲದ ಬೆಳಕೆಂದು ಸ್ವಪ್ನವೆಂದು ಪ್ರೇಮವೆಂದು ಎಲ್ಲಿರಲ್ಲೂ ಇರುವ ಅಸೂಯೆ- ಯೆಂದು ನಿದ್ರಿಸುವ ಜ್ವಾಲಾಮುಖಿಯೆಂದು ಹೊತ್ತಿ ಉರಿಯುವ ಕಾಡೆಂದು ಹೇಳಿದ್ದಿ....
ಕೀಟ್ಸ್ ಎಂಬ ಕವಿ

ಕೀಟ್ಸ್ ಎಂಬ ಕವಿ

ಇಪತ್ತೈದರ ಹರೆಯದ ಒಬ್ಬ ಕವಿ. ಆತ ಮೂರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾನೆ. ಮೊದಲ ಸಂಕಲನಕ್ಕೆ ವಿಮರ್ಶಕರದು ಸಾಮಾನ್ಯವಾದ ಉತ್ತರ. ಎರಡನೆಯ ಸಂಕಲನವನ್ನು ಅವರು ಹರಿದು ಚಿಂದಿ ಚಿಂದಿ ಮಾಡುತ್ತಾರೆ. ಮೂರನೆಯದರ ಗತಿ ಏನಾಯಿತೆಂದು ನೋಡುವುದಕ್ಕೆ...

ಇಬ್ಬರು ಇಮಾಮರು

ಬಡಾ ಇಮಾಂ ಬಾರಾದಲ್ಲಿ ಬಡಾ ಇಮಾಮ ಛೋಟಾ ಇಮಾಂ ಬಾರಾದಲ್ಲಿ ಛೋಟಾ ಇಮಾಮ ಕುಳಿತಿದ್ದಾರೆ ನೋಡಿ ಎಂಥ ಠೀವಿಯಲ್ಲಿ ಇನ್ನು ಯಾರೂ ಇರದ ರೀತಿಯಲ್ಲಿ ಬಡಾ ಇಮಾಮನ ಉಂಗುರಕ್ಕೆ ವಜ್ರದ ಹರಳು ಛೋಟಾ ಇಮಾಮನಿಗೆ...

ಛೋಟೀವಾಲ

ಎಲ ಎಲಾ ಛೋಟೀವಾಲ! ಹತ್ತು ಅವತಾರಗಳ-- ನೆತ್ತಿಯೂ ಸಾಲದೆ ಹನ್ನೊಂದನೆಯ ಅವತಾರವ- ನೆತ್ತಿಬಿಟ್ಟೆಯಲ! ಹುಟ್ವಿಸಿದ ದೇವರು ಯಾರಿಗೂ ಹುಲ್ಲು ಮೇಯಿಸನಯ್ಯ ಒಂದೊಂದು ಜೀವಕೂ ಬದುಕುವ ಒಂದೊಂದು ಉಪಾಯವನವನು ಕರುಣಿಸುವನಯ್ಯ! ಕೆಲವರನು ಕುಣಿಸುವನು ಕೆಲವರನು ಮಣಿಸುವನು...

ಇನ್ನೊಂದು ಮುಖಾಮುಖಿ

ಮನೆಯ ಹಿಂದಿನ ಗಲ್ಲಿಯಲ್ಲಿ ಮುಸ್ಸಂಜೆಯ ಸಮಯದಲ್ಲಿ ಎದುರಾಯಿತೊಂದು ಬೆಕ್ಕು ಮೂಡಿತ್ತು ಅಲ್ಲಲ್ಲಿ ಸುಕ್ಕು "ಸಾರ್!" ಎಂದು ತಡೆಯಿತು "ಸಿಗಲಿಲ್ವೆ ನನ್ನ ಗುರುತು? ಮುಖಾಮುಖಿಯಂಥ ಪದ್ಯ ಕನ್ನಡದಲ್ಲಿ ಸದ್ಯ ಇನ್ನೊಂದಿಲ್ಲ ಸಾರ್ ಒಂದೆಂಟಾಣಿ ಕೊಡಿ ಸಾರ್!"...

ನಿಕರಾಗುವಾ: ಪಾಪಬೋಧೆ

ತಿರುವನಂತಪುರ ೬೬. ಸಾಂಡಿನಿಸ್ಟಾ ಚಳುವಳಿಯ ಬಗ್ಗೆ ಮಾತಾಡುತ್ತ ನಡೆದಿದ್ದವು. ಅವಳು ಸೀರೆಯನ್ನು ಮೊಣಕಾಲತನಕ ಎತ್ತಿಹಿಡಿದಿದ್ದಳು. ಅಕ್ಕಪಕ್ಕದ ಆಂಗಡಿಬೆಳಕಲ್ಲಿ ಇಬ್ಬರೂ ಧಾರಾಳ ತೊಯ್ದಿದ್ದೆವು. ಇಷ್ಟು ವರ್ಷಗಳ ನಂತರ ನನಗೀಗ ಏಕೆ ಈ ನೆನಪು ಇಷ್ಟು ದೂರದ...
ತರಂಗಾಂತರ – ಹಿನ್ನುಡಿ

ತರಂಗಾಂತರ – ಹಿನ್ನುಡಿ

ಹಿನ್ನುಡಿಯ ಅಗತ್ಯವಿದೆಯೆ? ಇದೆ ಅಂದರೆ ಇದೆ, ಇಲ್ಲ ಅಂದರೆ ಇಲ್ಲ. ತನ್ನ ಬರಹದ ಕುರಿತು ಲೇಖಕ ಏನು ಹೇಳಿಕೊಂಡರೂ ಅದು ಓದುಗರ ಮನಸ್ಸನ್ನು ನಿರ್ದೇಶಿಸುವ ಕಾರಣದಿಂದ ಕೆಲವರು ಏನನ್ನೂ ಹೇಳದೆ ಸುಮ್ಮನೆ ಇರುತ್ತಾರೆ. ಇದೇ...
ತರಂಗಾಂತರ – ೧೨

ತರಂಗಾಂತರ – ೧೨

ಬಂಗಾರು ಚೆಟ್ಟಿಯನ್ನು ಕೊಂದೇ ಬಿಡುತ್ತೇನೆ ಇವತ್ತು ಎಂದುಕೊಂಡು ಮುಂದೆ ಧಾವಿಸುತ್ತಿರುವ ದೀಕ್ಷಿತನನ್ನು ಹೇಗಾದರೂ ಮಾಡಿ ತಡಯಲೇಬೇಕೆಂದು ವಿನಯಚಂದ್ರನಿಗೆ ಅನಿಸಿತು. ದೀಕ್ಷಿತನ ಕೈಯಲ್ಲಿ ತೆಂಗಿನಕಾಯಿ ಒಡೆಯುವಂಥ ಕತ್ತಿಯಿತ್ತು. ವಿನಯಚಂದ್ರ ಮೆಟ್ಟಲಲ್ಲಿ ಬಿದ್ದು ತುಳಿತಕ್ಕೊಳಗಾಗಿರುವ ಡೋರ್ ಮ್ಯಾಟನ್ನೇ...

ವ್ಯಸನಕೋಣೆ

ವ್ಯಸನಕೋಣೆಯಲಿ ನಮ್ಮ ಕಥಾನಾಯಕಿ ಬಿಳಿಯ ವಸನಧಾರಿ ಮಲಗಿರುವಳಂತೆ ಯಾರಿಗೂ ತಿಳಿಯ- ದವಳ ಬೇಸರದ ಮೂಲ ಘನ ಸರಕಾರವೇನೂ ಸುಮ್ಮನೆ ಕೂತಿಲ್ಲ ಕೈಕಟ್ಟಿ ಮನೆಯ ಸುತ್ತಲೂ ನಿಲ್ಲಿಸಿದೆ ಕಾವಲಿಗೆಂದು ಗಟ್ಟಿ ಗೂಢಚಾರರ ಜಾಲ ಸುಮ್ಮನೆ ಓಡಾಡುವವರ...