ತಿಂಗಳ ಬೆಳಕು ಚೆಲ್ಲಿದ ಹಾಗೆ
ಅಂಗಳ ತುಂಬ ಮಲ್ಲಿಗೆ ಹಾಗೆ
ಬಾ ನೀನು ನನ್ನ ಬಳಿಗೆ
ಇರು ನನ್ನ ಒಟ್ಚಿಗೆ

ಮಂಜು ನೆಲವ ತೊಯ್ದ ಹಾಗೆ
ಸಂಜೆ ಗಾಳಿ ಸುಯ್ದ ಹಾಗೆ
ಬಾ ನೀನು ನನ್ನ ಬಳಿಗೆ
ಇರು ನನ್ನ ಒಟ್ಟಿಗೆ

ಹಾಡಿನೊಳಗೆ ಇಂಪಿನ ಹಾಗೆ
ಕಾಡಿನೊಳಗೆ ಕಂಪಿನ ಹಾಗೆ
ಬಾ ನೀನು ನನ್ನ ಬಳಿಗೆ
ಇರು ನನ್ನ ಒಟ್ಟಿಗೆ

ಮೈಯ ಕೂಡೆ ಮನಸಿನ ಹಾಗೆ
ಮನಸಿನ ಕೂಡೆ ಕನಸಿನ ಹಾಗೆ
ಬಾ ನೀನು ನನ್ನ ಬಳಿಗೆ
ಇರು ನನ್ನ ಒಟ್ಟಿಗೆ
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)