ಸತ್ತವರು ನಮ್ಮಿಂದ ಬಯಸುವುದೇನನ್ನು?

ರಸ್ತೆ ಬದಿಯಲ್ಲಿ ಕುಳಿತಿದ್ದ ಆತ್ಮವೊಂದನ್ನು ಕೇಳಿದೆ-ಸತ್ತವರು ಉಳಿದವರಿಂದ ಬಯಸುವುದಾದರೂ ಏನನ್ನು? ಆತ್ಮ ನುಡಿಯಿತು-ತಿಳಿದವರ ಹಾಗೆ ಮಾತಾಡದಿರುವುದು ತಿಳಿಯದ ಸಂಗತಿಗಳ ಬಗ್ಗೆ ಮುಖ್ಯವಾಗಿ ನಮ್ಮ ಕುರಿತು ನಿಜಕ್ಕೂ ನಾವು ಉತ್ತರಿಸಲಾರದ ಸಂದೇಹಗಳನ್ನು ಎತ್ತದಿದ್ದರೆ ಸಾಕು ನಾನೆಂದೆ-ಇಷ್ಟು...

ಸತ್ತವರಿಂದ ನಾವು ಬಯಸುವುದೇನನ್ನು?

ಬಸ್ಸಿನ ತುಂಬ ನೂಕು ನುಗ್ಗಲಿತ್ತು ಅಂಗಡಿ ಬೀದಿಗಳಲ್ಲೂ ಹಾಗೆಯೇ ಹಗಲಿಗೆ ಹೆಗಲು ತಾಗಿಸಿ ಅಲ್ಲೆಲ್ಲ ನೀವು ನಿಂತಿದ್ದಿರೆಂಬುದು ಗೊತ್ತು ಚಹದಂಗಡಿಯಲ್ಲಿ ಮೇಜಿನೆದುರು ಅಕಸ್ಮಾತ್ ಕೇಳುವಿರಿ ಬೆಂಕಿ ಮತ್ತದೇ ಮಾತು ಅದೇ ಕತೆ ಯಾರು ಯಾರನ್ನೋ...

ಈ ಸಲದ ಯುಗಾದಿ

ಕಳೆದ ಯುಗಾದಿಯಂತಲ್ಲ ಈ ಸಲದ ಯುಗಾದಿ ಕಳೆದ ಯುಗಾದಿ ಹುಸಿಮಳೆಯಂತೆ ಮಿಂಚಿ ಗುಡುಗಿ ಹೊರಟು ಹೋಯಿತು ನೆಲವನ್ನು ತೊಯ್ಯದೆ ಈ ಸಲದ ಯುಗಾದಿ ನಿಜಕ್ಕೂ ಹೊಸ ಯುಗವನ್ನು ತೆರೆಯುವುದು-ಎಂತಲೇ ಹೊಸ ತೀರ್ಮಾನಗಳ ಮಾಡೋಣವೆಂದು ಕುಳಿತರೆ...

ಬರೆಯದ ಕವಿತೆಗಳು

ಈ ಬಾರಿಯ ತಿರುವುಗಳಾ ಬಯಲಿನ ಹರಹುಗ- ಳೀ ಹುಡುಗಿಯ ಹುಬ್ಬುಗಳಾ ಸಂಜೆಯ ಮಬ್ಬುಗ- ಳಷ್ಟೆತ್ತರ ಬೆಟ್ವಗಳೀ ತೀರದ ತಗ್ಗುಗ- ಳಿನ್ನಿಲ್ಲ ಸಂಜೆಗಳು ಮತ್ತೀ ಬೆಳಕಿನ ಸುತ್ತಲ ಬೆತ್ತಲು ಆ ಕಣಿವೆಯ ಕೆಳಗಿನ ಕತ್ತಲು ಯಾವುದೊ...

ಮೂನ್ ಮೂನ್ ಸೇನಳಿಗೆ

ನಿನ್ನ ಅನರ್ಘ್ಯ ಸೊಬಗು ಸಿಡಿಮದ್ದಿನಂತೆ ಹೊಡೆಯುವುದರಿಂದ ಬಹುಪಾಲು ಜನರ ಎದೆ ತಲ್ಲಿಣಿಸುವುದಂತೆ ತತ್ತರಿಸುವುದಂತೆ ಕೈಕಾಲು ಕವಿಗಳಿಗೆ ಕೂಡ ಬರದು ಕವಿತೆಯ ಸಾಲು ಹೀಗಿರುತ್ತ ಕೇವಲ ನಿನ್ನ ಛಾಯಾಚಿತ್ರ ನೋಡಿಯೋ ಪರವಶನಾಗಿ ಸಂಪೂರ್‍ಣ ಮೈಮರೆವ ಮೊದಲೆ...

ಕೊನೆಯ ತೀರ್ಪಿನ ದಿನ

ದೈವ ದೇವರು ಸ್ವರ್ಗ ನರಕ ಎಲ್ಲವೂ ಕಟ್ಟುಕತೆ ಆರಂಭದಿಂದ ಕೊನೆಯ ತೀರ್ಪಿನ ತನಕ ಎಂದೇಕೆ ಎಲ್ಲ ತಿಳಿದವನಂತೆ ತಿಳಿಯದವರ ಬೆಪ್ಪಾಗಿಸುವೆ ? ಮಾಡದಿದ್ದರೆ ಬೇಡ ನಮ್ಮ ನಜರಿನಲಿ ನಿನ್ನ ನಮಾಜು ನಿನಗೆ ನಿನ್ನದೇ ಆವಾಜು...
ಮುಖಗಳು ಮತ್ತು ಮುಖವಾಡಗಳು

ಮುಖಗಳು ಮತ್ತು ಮುಖವಾಡಗಳು

ಚಿಕ್ಕಂದಿನಿಂದಲೂ ನನಗೆ ಮುಖವಾಡಗಳೆಂದರೆ ಕುತೂಹಲ, ಭಯ ಮತ್ತು ಆಶ್ಚರ್ಯಕರ ಸಂಗತಿಗಳಾಗಿದ್ದುವು. ನನ್ನ ಮೊದಲ ಕವನ ಸಂಕಲನದ ಹೆಸರು ‘ಮುಖವಾಡಗಳು’ ಎಂದೇ. ಈ ಸಂಕಲನದಲ್ಲಿ ಅದೇ ಹೆಸರಿನದೊಂದು ಕವಿತೆಯಿದೆ. ಮಣ್ಣಿನ ಮುಖಗಳಿವೆ ಕಬ್ಬಿಣದ ಮುಖಗಳಿವೆ-ಹೀಗೆಂದೇನೋ ಕವಿತೆ...

ಸೂರ್‍ಯನಿಗೆ

ಉದಯಾಸ್ತಮಾನದ ಮಧ್ಯೆ ವರ್ಧನೆ ಕ್ಷಯ ಮರ್ತ್ಯರಿಗೆ ಚಕ್ಷುಗಳಿಂದ ನೋಡುವುದರಿಂದ ನಮ್ಮ ದೃಷ್ಟಿ, ಮನಸ್ಸಿನಿಂದ ಚಿಂತಿಸುವುದರಿಂದ ನಮ್ಮ ಜ್ಞಾನ, ಭೂಮಿಯಲ್ಲಿ ಬದುಕುವುದರಿಂದ ನಮ್ಮ ಆಯಸ್ಸು- ಸೀಮಿತ. ಸೀಮಾಬದ್ಧರು ನಾವು. ಶಕ್ತಿಗ್ರಹ ನೀನು ಬೆಳಗು ಸಂಜೆಗಳ ನಿರಂತರ...

ಫಿಲ್ ನ ವಿಧಾನ

ಫಿಲ್ (ಅರ್ಥಾತ್ ಫಿಲಿಪ್ ಕಾರ್ನಬಿ) ಶೆಲ್ಫಿನಲ್ಲಿ ಪುಸ್ತಕಗಳ ನಡುವೆ ತಲೆಬುರುಡೆಯೊಂದನ್ನ ಇರಿಸಿಕೊಂಡಿದ್ದಾನೆ. ಸಾಹಿತ್ಯದ ವಿದ್ಯಾರ್ಥಿ ಫಿಲ್ ತುಂಬಾ ಓದುತ್ತಾನೆ- ಶೇಕ್ಸ್‌ಪಿಯರ್, ಮಿಲ್ಟನ್, ಲಾರೆನ್ಸ್, ಇತ್ಯಾದಿ ಇತ್ಯಾದಿ ನಾಟಕದ ಹುಚ್ಚು ಬೇರೆ. ತಾನೇ ಕೆಲವು ಬೀದಿ...

ವ್ಯಾಪಾರಿಗಳು

ಬರುವುದಿಲ್ಲವಿನ್ನೆಂದರೆ ಬರುತಿದ್ದರು ದೂರ ದೇಶದ ವ್ಯಾಪಾರಿಗಳು ವಿಧ ವಿಧ ಸರಕನು ತುಂಬಿದ ಹೇರು ಎಳೆಯಲು ಅರಬೀ ಕುದುರೆಗಳು ಊರಿನ ಮುಂದೆಯೆ ಡೇರೆಯ ಹಾಕಿ ಹೂಡುವರಿವರು ಬಿಡಾರ ಗಲ್ಲಿ ಗಲ್ಲಿಗೂ ಬರುವರು ಹುಡುಕಿ ಮಾತೇ ಮಾಯಾ...