ಲಿಂಗಮ್ಮನ ವಚನಗಳು – ೯೧

ಅಯ್ಯ, ಕಿಚ್ಚಿನೊಳಗೆಬೆಂದ ಕಾಯಕ್ಕೆ ಅಚ್ಚುಗ ಉಂಟೆ? ತಾನುತಾನಾದ ಬಳಿಕ ಮೂವ ಹಂಗುಂಟೆ? ಮನವು ಮಹದಲ್ಲಿ ನಿಂದ ಬಳಿಕ ಮರವೆಯುಂಟೇ? ತನುವ ಮರೆದಂಗೆ, ಇನ್ನಿದಿರೆಂಬುದುಂಟೆ? ಬೆಳಗ ಕಂಡವಂಗೆ ಕತ್ತಲೆಯ ಹಂಗುಂಟೆ? ಇವೆಲ್ಲವನು ಹಿಂಗಿಸಿ, ಈ ಮಹದಲ್ಲಿ...

ಲಿಂಗಮ್ಮನ ವಚನಗಳು – ೯೦

ಅಯ್ಯ, ನಾ ಮರ್ತ್ಯದಲ್ಲಿ ಹುಟ್ಟಿ, ಕಷ್ಟ ಸಂಸಾರಿ ಎನಿಸಿಕೊಂಡೆ. ಕತ್ತಲೆಯಲ್ಲಿ ಮುಳುಗಿದೆ. ಕರ್ಮಕ್ಕೆ ಗಿರಿಯಾಗುತಿದ್ದರೆ, ಹೆತ್ತ ತಾಯಿ ಎಂಬ ಗುರುಸ್ವಾಮಿ ಎನ್ನ ಕೊರಳಿಗೆ ಗಂಡನೆಂಬ ಲಿಂಗಕಟ್ಟಿದನು. ತಂದೆ ಎಂಬ ಜಂಗಮಲಿಂಗವು ಎನ್ನ ಪ್ರಾಣಕ್ಕೆ ಪ್ರಸಾದವ...

ಲಿಂಗಮ್ಮನ ವಚನಗಳು – ೮೯

ಮನವ ಗೆದ್ದೆವೆಂದು ತನುವ ಕರಗಿಸಿ, ಕಾಯವ ಮರಗಿಸಿ ನಿದ್ರೆಯ ಕೆಡಿಸಿ, ವಿದ್ಯೆಯ ಕಲಿತೆನೆಂಬ ಬುದ್ಧಿಹೀನರಿರಾ, ನೀವು ಕೇಳಿರೋ, ನಮ್ಮ ಶರಣರು ಮನವನೆಂತು ಗೆದ್ದರೆಂದರೆ, ಕಾಮ, ಕ್ರೋಧವ ನೀಗಿ, ಮೋಹ ಮದ ಮತ್ಸರವ ನಿಶ್ಚೈಸಿ, ಆಕೆ...

ಲಿಂಗಮ್ಮನ ವಚನಗಳು – ೮೮

ಕಂಗಳ ಮುಂದೆ ಮಾಣಿಕವಿದ್ದು, ಕಾಣಲರಿಯರಯ್ಯ. ಬಾಗಿಲ ಮುಂದೆ ಹಾಲಸಾಗರವಿದ್ದು, ಒರತೆಯ ನೀರಿಗೆ ಹಾರುವರಂತೆ, ಕಂಗಳ ಮುಂದೆ ಮಹಾಶರಣಿನಿದ್ದು, ಕತ್ತಲೆ ಎನಲೇಕೆ? ಇನ್ನು ಬೇರೆ ಲಿಂಗವನರಸಿಹೆನೆನಲೇಕೋ ಆ ಮಹಾಶರಣ ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. *****

ಲಿಂಗಮ್ಮನ ವಚನಗಳು – ೮೭

ಆಗದಾಗದು ಮರ್ತ್ಯದ ಮನುಜರಿಗೆ ಶಿವಸುಖ. ಅದೆಂತೆಂದರೆ ಕಾಳು ವಿಷಯದಲ್ಲಿ ಬಿದ್ದು ನುಡಿವುತ್ತ, ಮರವೆ ನಡೆವುತ್ತ, ಮರವೆ ಮುಟ್ಟುತ್ತ, ಮರವೆ ಕೇಳುತ್ತ, ಮರವೆ ನೋಡುತ್ತ, ಮರವೆ ಇಂತು ಮರಹಿನೊಳಗಿರ್ದು, ಅರುಹ ಕಂಡಿಹೆನೆಂಬ ಅಣ್ಣಗಳಿರಾ, ನೀವು ಕೇಳಿರೋ....

ಲಿಂಗಮ್ಮನ ವಚನಗಳು – ೮೬

ತುಂಬಿದ ಕೆರೆಗೆ ಅಂಬಿಗ ಹಂಗೋಲಹಾಕಿ, ಬಲಿಯ ಬೀಸಿದಂತೆ ತುಂಬುತ್ತ ಕೆಡೆವುತ್ತಲಿದ್ದ ಲಿಂಗವ ನೋಡಿ ಕೊಡೆವೆಂದು ಜಂಗಮದ ನೆಲೆಯ ಕಾಣದೆ ಸಂದು ಹೋದರಲ್ಲ ಈ ಲೋಕವೆಲ್ಲವು ಲಿಂಗದ ನೆನೆಯ ಕಾಂಬುದಕ್ಕೆ ಹರಿಗೋಲನೆ ಹರಿದು, ಹುಟ್ಟ ಮುರಿದು,...

ಲಿಂಗಮ್ಮನ ವಚನಗಳು – ೮೫

ಜಂಗಮವೇ ಗುರು, ಜಂಗಮವೇ ಲಿಂಗ, ಜಂಗಮವೇ ಪ್ರಾಣವೆಂದರೆ, ಇಲ್ಲವೆಂಬ ಅಂಗಹೀನರಿರ ನೀವು ಕೇಳಿರೋ. ಜಂಗಮವು ಗುರುವಲ್ಲದಿದ್ದರೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರವ ಹಿಂಗಿಸುವನೆ? ಜಂಗಮ ಪ್ರಾಣವಲ್ಲದಿದ್ದರೆ, ಪ್ರಾಣಕ್ಕೆ ಪ್ರಸಾದವ ಕೊಡುವನೆ? ಜಂಗಮವು...

ಲಿಂಗಮ್ಮನ ವಚನಗಳು – ೮೪

ಮಾಯದ ಬೊಂಬೆಯ ಮಾಡಿ, ಕಂಗಳಿಗೆ ಕಾಮನ ಬಾಣವ ಹೂಡಿ, ನಡೆನುಡಿಯೊಳಗೆ ರಂಜಕದ ತೊಡೆಗೆಯನೆ ತೊಡಿಸಿ, ಮುಂದುಗಾಣಿಸದೆ ಹಿಂದನರಸದೆ. ಲಿಂಗವ ಮರಹಿಸಿ, ಜಂಗಮವತೋರಿಸದೆ, ಸಂದೇಹದಲ್ಲಿ ಸತ್ತುಹುಟ್ಟುವ, ಈ ಭವ ಬಂಧನಿಗಳೆತ್ತ ಬಲ್ಲರೋ ಈ ಶರಣರ ನೆಲೆಯ?...

ಲಿಂಗಮ್ಮನ ವಚನಗಳು – ೮೩

ಜಂಗಮವೆ ಜಗತ್ಪಾವನವಯ್ಯ! ಜಂಗಮದ ನೆನಹೆ ಲಿಂಗವಾಯಿತ್ತು. ಅವರ ತನುವೆ ಎನ್ನ ಕಾಯವಾಯಿತ್ತು. ಅವರ ದರ್ಶನವೆನಗೆ ಪರುಷವಾಯಿತ್ತು. ಆ ಪರುಷವಿಡಿದು ಮನ ಲಿಂಗದಲ್ಲಿ ಬೆರಸಿ, ಕನಸು ಕಳವಳಿಕೆ ಹೆಸರುಗೆಟ್ಟು ಹೋದವಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****

ಲಿಂಗಮ್ಮನ ವಚನಗಳು – ೮೨

ನಿರ್ಮಳವಾದ ದೇಹದಲ್ಲಿ ಇನ್ನೊಂದು ಕಲ್ಪಿಸಲುಂಟೆ? ಲಿಂಗವಾದ ತನುವಿನೊಳಗೆ ಜಂಗಮದ ನೆನಹಲ್ಲದೆ, ಇನ್ನೊಂದರ ನೆನಹುಂಟೆ? ಪ್ರಸಾದವಾದ ಕಾಯದೊಳಗೆ ತನ್ನ ಪ್ರಾಣಲಿಂಗದ ನೆನಹಲ್ಲದೆ, ಇನ್ನೊಂದರ ನೆನಹುಂಟೆ? ಈ ಸರ್ವಂಗವು ಲಿಂಗವಾಗಿ, ಜಂಗಮವೆ ಪ್ರಾಣವಾಗಿ, ಅವರ ಪಾದದಲ್ಲಿ ನಾ...
cheap jordans|wholesale air max|wholesale jordans|wholesale jewelry|wholesale jerseys