
ಧನ್ಯಭೂಮೀ- ಮಾನ್ಯರೂಪೀ, ಕನ್ಯೆಭಾರತಿ ಪುಣ್ಯೆಯೇ! ಏಸುಕಾಲದಿ ಮಾಸದಳಿಯದೆ ಕೋಶಸಲಹಿದೆ-ತಾಯಿಯೆ? ಆರ್ಯಮೊಗಲರ ವೀರ್ಯತೇಜರ ಶೌರ್ಯದಿಂದಲಿ ಸಲಹಿದೆ- ರಾಶಿಜನಗಣ ಆಶ್ರಯಾ ನಿನ್ನ ಲೇಸು ಪಡೆದರು-ಅಲ್ಲವೇ? ನೆನೆವೆ ಅಂದಿನ ಮುನಿಜನ ಮನ, ನಿನ್ನ ವೈಭವ-ವೈಭವ...
ಮಾಮರದ ಕೊನರೆಲೆ ಅಂಚಿನಲಿ ಮಿನುಗುವ ಸಿಹಿಮಾವು ಒಂದು ನೋಡಿ, ಕಣ್ಣರಳಿ ಮನವುರುಳಿ ತನ್ನಲ್ಲೆ ಚಿಂತಿಸಿತು- ಬೀಳಿಸಲೆ ಬೇಕು ಎಂದು! ಮರ ಏರಿ ಇನಿವಣ್ಣ ಕೈಯ್ಯಾರೆ ತರಲೆಂದು ಯೋಚಿಸಿದೆ ತಲೆಯನೆತ್ತಿ; ಬೆಳೆದಿತ್ತು ಎತ್ತರಕೆ ತೆಂಗು ಕೌಂಗನು ಮೀರಿ ನೋಡಿ...
ಪಡುವಣ ದಿಗಂತದಲಿ ಅಗ್ನಿದೇವನ ಒಂದು ಕಾಲ್ಚೆಂಡು ಮೇಲ್ಹಾರಿ ಕೆಳಬೀಳ್ವುದೊ! ಬ್ರಹ್ಮಗಿರಿ ಎಂದೆಂಬ ಬೆಟ್ಟದಾ ಅರುಗಾಗಿ ದಿನಕರನು ಇಣಿಕಿಣಿಕಿ ಮರೆಸೇರ್ವನೊ! ಎಲ್ಲಿಂದ ಯಾವೆಡೆಗೆ? ಯಾವೂರು ಪೋಗ್ವನೊ ಅಗ್ನಿಯಾ ಚಂಡು ಈ ಕೆಂಬಣ್ಣದೀ; ಪಡುವಣದ ಪ್ರಾಂತದ...
ಕರ್ಮದ ಬಾಳಿಗೆ ಮಣ್ಣಿಟ್ಟು ನೋಡಿದೆ ಜೀವದ ಒಳಗುಟ್ಟು! ಧರ್ಮಕೆ ಕಸಿಯನು ನಾ ಮಾಡಿ ತಿಂದೆನೊ ಪಾಪದ ಹಣ್ಣು ಇಡಿ; ಮೂಡಲ ಸೂರ್ಯನು ಅಲ್ಲಿರನು ಮನುಜನು ಬುದ್ದಿಯ ತಾಳಿರನು! ಗಂಟೆಯ ಮುಳ್ಳದು ತಿರುಗಾಡಿ ಲೋಕಕೆ ಕಲಿಪುದು ಬಲುಮೋಡಿ. ಸುತ್ತಲು ಮಂಜಿನ ನೆನ...
ಚಂದ್ರಮುಖಿಯು ನೀನು ಎಂದು ಬೆಡಗುಗಾರ್ತಿ ಚೆಲುವೆಯೆಂದು ಸಂದ ಜೀವದಾತ್ಮ ಗೊಂಬೆಯೆಂದು ಪೇಽಳಿ- ಇಂದು ತರವೆ ಇನಿಯ ಇನಿತು ಕೊರಗಿಸುವುದೊ! ನೀರೆ ನೀನೆ ಶೂರೆ ಎಂದು ಎನ್ನ ಮೋಹ ಕಲಶವೆಂದು ಸಾರೆ ಸರಸಿ ತೀರದಲ್ಲಿ ಚೆನ್ನು ಮುತ್ತು- ಮೀರಿದೊಂದಾನಂದದಿತ್ತ...
ಏಳುಲೋಕದಲೇಳು ಕಡಲಲಿ ಏಳು ಪರ್ವತ ಬಾನಲಿ ಏಳು ಸಾವಿರ ದೇಶದಿ, ಸುತ್ತಿ ಹಾರ್ವುದು ನೋಡಿ ನೆಡೆವುದು ನಿಮಿಷ ನಿಮಿಷಕೆ ಕ್ಷಣದಲಿ ಕವಿಯ ಮನಸ್ಸದೊ ಹಾರ್ವುದು! ಚಂದ್ರಲೋಕದ ಸುತ್ತು ತಿರುಗುತ ಸೂರ್ಯಕಾಂತಿಯ ನೋಡಿತು! ವಿಶ್ವಗೋಳವ ತಿರುಗಿಸಿ- ಪಾತಾಳದಾಳಕ...
ತಟಪಟ ತಟ್ಟುತ ಒಟ್ಟಿನಲಿ ಕೋಲಿಂ ಕೆಲವರು ಹೊಲದಲ್ಲಿ, ಕಿಣಿಕಿಣಿ ಮಣಿಯಿಂ ಕುಣಿಸುತಲಿ, ಗಲಗಲ ಬಾಲರ ಒಲಿಸುತಲಿ. ಡಂ ಢಂ ಡಾಂಬರ ಗಡಗಡಿಸಿ ಪೆಂಪಾಪೆಂಪೆಂದು ಪೇಳಿರಿಸಿ, ಲಲ್ಲಾಲ್ಲೆನ್ನುತ ಸೊಲ್ಲನೊಂದು ಬಾಯೊಳು ಸಾಯಲು ಹಾತೊರೆದು! ರತ್ನದ ಚಿನ್ನದ ಬಣ್...
ಅಯೋಧ್ಯೆ ರಾಜ್ಯದಲಿ ಇನಕುಲದ ಖ್ಯಾತಿಯಲಿ ಧರ್ಮಾಭಿಮಾನದಲಿ ಬಾಳಿದನು ನೋಡಾ. ದಶರಥನೆಂದಾತನೀ ನೃಪ ಶ್ರೇಷ್ಠನೆಂಬಂತೆ ಪಾಲಿಸುತ ದೇಶವನು ಆಳಿದನು ಕೇಳಾ. ರಾಜಾಧಿರಾಜನೂ ಭುವನೈಕ ವಂದ್ಯನೂ ಸಿರಿಲೋಲ ಮಾನ್ಯನೂ ರವಿಕುಲದ ಪ್ರಭುವು; ಎಂದೆನಿಸಿ ತ್ರಿಪತ್ನಿ...
ಮನದ ಕಾಂಕ್ಷೆ ಒಲವಿನೆಣಿಕೆ ಆಳ ಅಳೆದು ನೋಡಲಾರೆ, ವಿಶ್ವವ್ಯಾಪಿ ಎಮ್ಮ ಮುದವು ನಿಲ್ವುದೆಲ್ಲಿ ಎಣಿಸಲಾರೆ! ಕತ್ತಲಂತೆ ಸುತ್ತಲೆಲ್ಲ ಮನಕೆ ಭಾರ ದೇಹಸರ್ವ ತಿಂಬೆದೆಲ್ಲ ಅರುಚಿ ಕೇಳು, ಯಾರ ಇದುರು ಪೇಳ್ವುದಲ್ಲ!! ಮಂಜುಗಟ್ಟಿ ನೇತೃದ್ವಯವು ಬೆಂದಮನವ ಸ...








