ಶ್ರೀನಿವಾಸ ಕೆ ಎಚ್

ನಿವೃತ್ತಿ ಜೀವನ

ನಾನೀಗ ನಿವೃತ್ತ, ಈಗ ಇಷ್ಟೇ ಕೆಲಸ ಯಾವಾಗ ನೋಡು ಈಗಂದುಕೊಂಡದ್ದನ್ನು ಇನ್ನೊಂದು ಕ್ಷಣಕ್ಕೆ ಮರೆಯುವುದು, ಮರೆತಿದ್ದು ಏನೆಂದು ತಲೆ ಕೆರೆಯುವುದು ಹಗಲಿಡೀ ಕಂಡಕಂಡವರಿಗೆ ಕೊರೆಯುವುದು ರಾತ್ರಿಯೆಲ್ಲಾ ಗೊರೆಯುವುದು […]

ನೆನಪು ಮತ್ತು ಮರೆವು

ನೆನಪು ಮರೆವು ಎರಡೂ ದೇವರು ಕೊಟ್ಟ ವರದಾನ ಯಾವುದನ್ನು ನೆನಪಿಡಬೇಕು ಯಾವುದನ್ನು ಮರೆಯಬೇಕು ಎಂಬ ವಿವೇಕವನ್ನು ಜಾರಿಯಲಿಟ್ಟರೆ, ಆದರೆರಡೂ ಶಾಪವಾಗಿ ಬಿಡಬಹುದು. ದಾರಿ ತಪ್ಪಿ ಮರೆಯಬೇಕಾದ್ದನ್ನು ನೆನಪಿಟ್ಟು […]

ವೃದ್ದಾಪ್ಯ

ಮನೆ ತುಂಬ ಹಳೆ ಹಳೇ ಮುರುಕಲು ಸಾಮಾನುಗಳು ಜಿರಲೆ ತಿನ್ನುತ್ತಿರುವ ಆಲ್ಬಮ್ಮುಗಳು ಮೆದುಗೊಂಡ ಹಮ್ಮುಬಿಮ್ಮುಗಳು ಒಂದೊಂದು ಉಸಿರಿಗೂ ಒಂದಿಷ್ಟು ದಮ್ಮು ಕೆಮ್ಮುಗಳು ಏನು ಮಾಡಿದರೂ ಉತ್ತರವೇ ಸಿಗದ […]

ಸಾವಸುದ್ದಿ

ಇಂದು ಒಂದು ಕರಿಕಾಗೆ ಕೆರೆ ಅಂಚಿನ ನೀರಲ್ಲಿ ಕತ್ತುವರೆಗೆ ಮುಳುಗುವುದು, ಮೇಲೆದ್ದು ರೆಕ್ಕೆ ಬಡಿಯುವುದು, ಮತ್ತೆ ಮುಳುಗುವುದು, ಎದ್ದೆದ್ದು ರೆಕ್ಕೆ ಬಡಿಯುವುದು ಮಾಡುತ್ತಲೇ ಇತ್ತು. ಪ್ರಾಯಶಃ ಚೆನ್ನಾಗಿ […]

ಯಾವ ಹುತ್ತದಲ್ಲಿ ಯಾವ ಹಾವು

ಜೀವನದಲ್ಲಿ ಇದ್ದಿದ್ದೇ ನಲಿವೂ ನೋವೂ ಆದರೆ ಯಾವ ಹುತ್ತದಲ್ಲಿ ಯಾವ ಹಾವು ಸುಳಿಸುತ್ತಿ ಕುಳಿತಿದೆಯೆಂದು ತಿಳಿಯುವಷ್ಟರಲ್ಲಿ ಮೆತ್ತಗೆ ಹತ್ತಿರ ಬಂದು ಬೆನ್ನಹತ್ತಿ ಬಿಟ್ಟಿರುತ್ತದೆ ಸಾವು. *****

ದೂರ ಹತ್ತಿರ

ದೂರದಲ್ಲೆಲ್ಲೋ ಇದ್ದದ್ದು ಹತ್ತಿರಕ್ಕೆ ಹತ್ತಿರದಲ್ಲಿದೆಯೆಂದುಕೊಂಡದ್ದು ದೂರಕ್ಕೆ ಈ ದೂರ ಹತ್ತಿರ, ಅಮಾವಸ್ಯೆ ಹುಣ್ಣಿಮೆ ಇದ್ಯಾವುದೂ ನಿಜವಲ್ಲ; ಎಲ್ಲ ಮನಸೊಳಗೆ ಕನಸುಗಳ ತನ್ನಷ್ಟಕ್ಕೆ ಹೆಣೆವ, ಕ್ಯಾಮರಾದ ಝೂಮ್ ಲೆನ್ಸ್ಗಳ […]

ಬದುಕು

ಬದುಕೆಂಬುದೊಂದು ತೆರೆದ ವಿಶ್ವವಿದ್ಯಾಲಯ ದೇವರೇ ಕುಲಾಧಿಪತಿ ಬೇಕಿದ್ದನ್ನು ಆರಿಸಿಕೊಂಡು ನೀನೇ ಓದಿಕೊಳ್ಳಬೇಕು ಸಾವಕಾಶ: ಪಾಸಾಗಬೇಕೆಂದು ಅವಸರಿಸಬೇಡ ಹುಷಾರು ಇಲ್ಲಿ ಪಾಸಾದವರಿಗವಲ್ಲ; ಫೇಲಾದವರಿಗೆ ಮಾತ್ರ ಪ್ರವೇಶಾವಕಾಶ *****

ಮನಸ್ಸು

ಕೆಲವರದ್ದು: ಹೊಚ್ಚ ಹೊಸ ಹಸಿರುಟ್ಟ ಮೈತುಂಬ ಬೆಳ್ಳಿ ಮಲ್ಲಿಗೆಯ ಮುಡಿದ ನವಿರುಬಳ್ಳಿ ಹಲವರದ್ದು: ಮೈತುಂಬ ಮುಳ್ಳು ನಿಮಿರಿಸಿ ನಿಂತ ಮೈಲಿ ಮುಖದ ಪಾಪಸು ಕಳ್ಳಿ ಸುತ್ತ ಮುತ್ತಲೂ […]

ನೈತಿಕತೆ

ನನ್ನೊಳಗಿನ ನೈತಿಕತೆ ಪ್ರತಿ ಮಳೆಗಾಲದಲ್ಲೂ ಸೋರುತ್ತದೆ ಚಳಿಗಾಲದಲ್ಲಿ ನಡುಗುತ್ತದೆ ಬೇಸಿಗೆಯಲ್ಲಿ ಬೇಯುತ್ತದೆ ಅನುದಿನವೂ ನನ್ನನ್ನು ನಿಧಾನವಾಗಿ ಕೊಲ್ಲುತ್ತದೆ. *****