
ಬಿಳಿಹಳದಿ ತೆಳುವಾದ ಮಕಮಲ್ಲಿನುಡಿಗೆ ಜುಳುಜುಳು ಕಳಕಳದೊಯ್ಯಾರ ನಡಿಗೆ ಸವಿದೆರೆ ತಿಳಿನಗೆ ತೇಲುನೋಟ ಮುಗಿಲನೆಡೆಗೆ ನೋವರಿಯದೇಕಾಂತದಾನಂದ ತೀರದಲಿ ಸಂತೋಷಸಾಗರಲೀನ ಪ್ರಶಾಂತ ಕಾನನ ಸಾವಿರದ ಸೆಲೆಯುಕ್ಕಿ ಹೊಳೆಯಾಗಿ ಹರಿದಿದೆ ಹರೆಯ ನೆಲ-ಮುಗಿಲು ಮರ ತ...
ಕಣ್ಣು ಕಣ್ಣು ಕೂಡಿದಾಗ ಸರ್ಪಕಂಡ ಗರುಡ ಹಾಕಿದ ಹೊಂಚು ಸೆಣೆಸಿ ಸೆಳಕೊಳ್ಳುವ ಸಂಚು ಮಿನುಗುವ ಕಣ್ಣಮಿಂಚು ಕುಣಿಕೆ ಕಣ್ಣಿಯ ಸುತ್ತಿ ಎಣಿಕೆಯ ಹೆಣಿಕೆ ಹಾಕುತ್ತದೆ ತಿನಿಸು ಕಂಡ ನಾಲಗೆ ಚಾಚಿ ಸಿಕ್ಕರೆ ಸಾಕು ಸಂದು ಗಬಕ್ಕನೆ ತಿಂದು ಹಸಿವಿಂಗಿಸಲು ಕಾಯ...
ಇವಳು ಬಂದಾಗ ಇವಳ ನಡೆಯೊಡನೆ ನಾನೋಡಲಾರೆ ಇವಳ ಭಂಗಿಗಳ ನಾನಂಗವಿಸಲಾರೆ ಇವಳ ಮೌನ ಸಲ್ಲಾಪವ ನಾನಾಲಾಪಿಸಲಾರೆ ಇವಳ ವೇಷದೊಡನೆ ನಾನಾವೇಶಗೊಳ್ಳಲಾರೆ ಇವಳ ಗತಿಯೊಡನೆ ನಾ ನರ್ತಿಸಲಾರೆ ಇವಳ ಸಂಕೇತಗಳ ನಾ ಸಂಭಾವಿಸಲಾರೆ ಇವಳ ಮೋದವ ನಾ ಸಾಧಿಸಲಾರೆ ಇವಳ ಪಾ...
ನೀವು ಆಡಾಡ್ತಾ ಅಡವಿ ಬೀಳ್ತೀರೇನೋ ದೊಡ್ಡ ಆಟಂಬಾಂಬ ಪಟಾಕಿ ಹಾರುತ್ತದೆಂದು ಬೆಂಕಿ ಹಚ್ಚಿದಾಗ ನೀವು, ಕಿವಿ ಮುಚ್ಚಿಗೊಳ್ಳಲು ಜನ ಅದು ಸುರು ಸುರು ಎಂದು ಮೊದಲು ಬುಸುಗುಟ್ಟಿ ನಂತರ ಮದ್ದು ಮುಟ್ಟುವುದರೊಳಗೇ ಟಿಸ್ಸೆನ್ನುವುದೇನೋ! ತಳದೊಳಗಿಂದೇಳದೆ ಒ...
ಹಿಡಿಯಿರೋ ಅವನ ಮಾತು ಬಲ್ಲವರೆಲ್ಲರೂ ಹಿಡಿಯಿರೋ! ಮಾತುಮಾತಿನಲಿ ಅವನಿಗಾಗಿ ಗುಂಪು ಕೂಡಿದ ನೀವು ಅವ ನಮ್ಮವ ಅವ ನಮ್ಮವನೆಂದು ಗುಂಪು ಗುಂಪಾಗಿ ಗುದ್ದಾಡುತ್ತೀರಿ ಆ ಬ್ರಾಹ್ಮಣ್ಯ ಶಿಖಿಗೆ ಅತಿ ಆಚಾರಿಗಳಿಗೆ ಮತಾಂಧ ಅಭಿಮಾನಿಗಳಿಗೆ ಜನಿವಾರ ಶಿವದಾರಗಳ...







