
ಇನ್ನೂ ಅರ್ಥಾಗಲಿಲ್ಲೇನ್ನಿನ್ಗೆ? ನಾಕಕ್ಸರಾ ಬಾಯಾಗಿಟಗಂಡು ನಾಕ ಸಾಲು ತಲಿಯಾಗಿಟಗಂಡು ನಾಕ ಕಾಸು ಕೈಯಾಗಿಟಗಂಡು ಯಾಕ ಮೆರೀತಿಯಲೇ! ಬಾಯಾಗೇ ಅಂತ್ರಕ್ಕೇಣೀ ಹಾಕಿ ಸಮತಾ ಸೋದರತಾ ಗಾಂಧೀತಾತಾ ಅಂತಾ ಒಳ್ಳೇ ನಾಣ್ಣೆಗಳನ್ನ ಒದರಿ ಒದರಿ ಒಡಕು ಬೋಕೀ ಮಾಡಿ...
ಯಾವುದಕ್ಕೂ ಬಗ್ಗದ ಕುಗ್ಗದ ಕಲ್ಲಾದರೆ ನೀನು ಮಳೆಗೆ ಬಳಿದು ಹೋಗುವ ಬಿಸಿಲಿಗೆ ಬೂದಿಯಾಗುವ ಮಣ್ಣು ನಾನು ನೀನು ನಿರ್ವಿಕಾರ ಅಚಲ ನಾನು ನೀರಿನೊಡನೆ ವಿಕಾರವಾಗುವ ಕೆಸರು ಹುಡಿಯಾಗಿ ಗಾಳಿಯಲ್ಲಿ ಸಂಚಲ ನೀನು ನೆನೆದುಕೊಂಡು ಗಟ್ಟಿಯಾದೆ ನಾನು ಒತ್ತಡಗಳಿ...







