ಗೋಡ್ರು ಮುನ್ಸಿಕಂಡ್ರೋ ಎನಿಮಿ ಮಟಾಷ್

ಅಹಿಂದ ರ್‍ಯಾಲಿ ನಡೆಸಿ ಗೋಡ್ರ ಶಾಪಕ್ಕೆ ಗುರಿಯಾದ ಸಿದ್ರಾಮು ಮಾದೇವು ಜಾರ್ಕಿಹೊಳಿ ಅಧಿಕಾರದ ವಜನ್ ಕಳ್ಕೊಂಡು ವನವಾಸ್ದಗವರೆ. ವನವಾಸ ಅಂಬೋದು ಹದಿನಾಕು ವರ್ಸವೋ ನಾಕು ವರ್ಸವೋ ಮುಂದಿನ ಚುನಾವಣೆ ಹೊತ್ಗೇ ಮುಗಿತದೋ ಮೈಲಾರಲಿಂಗನೇ ಬಲ್ಲ....

ಕಾಗೆ ಸಂಗ ಮಾಡಿ ಗರುಡ ಪಕ್ಸಿ ಹಾಳಾತಂತೆ

ಗೆಸ್ ಮಾಡ್ದಂಗೆ ಆತ್ ನೋಡ್ರಿ. ಗೋಡ್ರನ ಎಗೆನೆಸ್ಟ್ ಮಾಡ್ಕೊಂಡೋರ ಆಯಸ್ಸಾರ ಲೆಸ್ ಆಯ್ತದೆ ಇಲ್ಲ ಪವರ್ರಾನ ಮಿಸ್ ಆಯ್ತದೆ. ಆಹಿಂದ ಸಮಾವೇಸ ಮಾಡಿ ಬೀಗ್ತಿದ್ದ ಸಿದ್ರಾಮುದೀಗ ತ್ರಿಸಂಕು ಸ್ಥಿತಿ. ಆವಯ್ಯ ಕುಂಟಿಕ್ಯಂಡು ಓಡಾಡಾದು ನೋಡಿದ್ರಂತೂ...

ಕಾಗೆ ಹೊಕ್ಕ ಮನೆಯಾತಲ್ರಿ ಸಾಹಿತ್ಯ ಪರಿಷತ್ತು

ಇನ್ನೊಂದು ತಿಂಗಳು ಹೊಳ್ಳಿತೋ ಡಂಬಾಯ ಸಾಯಿತಿ ಹರಕುಬಾಯಿ ಚಂಪಾ ಕ.ಸಾ.ಪ.ಕ್ಕೆ ಕಾಲಿಕ್ಕಿ ವರ್ಷ ಆಗ್ತದ. ಅವರು ಈತನಕ ಮಾಡಿದ ಸಾದ್ನೆ ಸಲುವಾಗಿ ಅವರ ಚೇಲಾಗಳು ಅದ್ದೂರಿಯಾಗಿ ವರ್ಷಾಬ್ಧಿಕ ಆಚರಿಸಲಿಕ್ಕ ರೆಡಿ ಆಗ್ಲಿಕತ್ತಾರಂತ ಎಲ್ಲೆಲ್ಲೂ ಖಬರ್...

ಚುನಾವಣೆಗೆ ನಿಂತ ಮಠಾಧೀಶರು

ಮಾತಿನ ಮಹಾದೇವಿ ಕನ್ನಡ ನಾಡು ಪಾರ್ಟೆಯಿಂದ ಚುನಾವಣೆಗೆ ನಿಲ್ಲುತ್ತೇನೆಂದು ಘೋಷಿಸಿದಾಗ ಜನರೇನು ಬೆಕ್ಕಸ ಬೆರಗಾಗಲಿಲ್ಲ. ಆಯಮ್ಮ ಕಳೆದ ಸಲ ನಡೆದ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದುಂಟು. ಯಾವಾಗಲೂ ಸುದ್ದಿಗದ್ದಲ ಮಾಡುವ ಈ ತಾಯಿ...

ಯಾರೇ ಕೂಗಾಡ್ಲಿ ಗೋಡ್ರೇ ಹೋರಾಡ್ಲಿ ಹುಬ್ಳಿ ಸಮಾವೇಶ ಆಗೇ ಹೋತಲ್ರಿ

ಅಧ್ವಾನೆದ್ದರೂ ಅಡ್ವಾಣಿ ಪಕ್ಷದ ಪದವಿಯನ್ನಾಗಲಿ ವಿರೋಧ ಪಕ್ಷದ ಸ್ಥಾನವನ್ನಾಗಲಿ ಬಿಡದೆ ಸತಾಯಿಸುತ್ತಾ ವಾಜಪೇಯಿ ಎಂಬ ಹಳೆಗುರಾಣಿಯ ರಕ್ಷಣೆ ಪಡೆಯುತ್ತಿರುವುದನ್ನು ಕಂಡು ಕೊತಕೊತನೆ ಕುದಿಯುತ್ತಿರುವ ಓಲ್ಡ್‌ ಆರೆಸ್ಸೆಸ್ಸಿನ ವಾನರ ಸೇನೆಗೀಗ ತೋರುತ್ತಿರುವುದು ಒಂದೇ ದಾರಿ. ಯಜ್ಞಯಾಗ...

ಕನ್ನಡ್ವೆ ಸತ್ಯ ಕನ್ನಡ್ವೆ ನಿತ್ಯ ಆದ್ರೂವೆ ಇಂಗ್ಲೀಷ್ ಅತ್ಯಗತ್ಯ

ಅಪ್ಪ ಹಾಕಿದ ಆಲದ ಮರ ಅಂತ ನೇಣು ಹಾಕ್ಕಬೇಕು ಅಂತಿರೇನು ಅಂತ ಹಲವು ಸಾಯಿತಿಗೋಳು ಇದ್ವಂಸರು ವಾದಿಸ್ಲಿಕ್ಕುತ್ತಾರೆ. ಹಂಗೆ ಸೆಂಟ್ ಪರ್ಸೆಂಟ್ ಮಮ್ಮಿ-ಡ್ಯಾಡಿಗಳು ತಮ್ಮ ಹೈಕಳಿಗೆ ಇಂಗ್ಲೀಸ್ ಕಲಿಸುವ ಆತುರದಾಗವರೆ. ಕನ್ನಡದ ಮೇಷ್ಟ್ರುಗಳೇ ವ್ಯಾಕರಣ...
ವಾಮನ

ವಾಮನ

[caption id="attachment_7278" align="alignleft" width="300"] ಚಿತ್ರ: ವಾಡ್ರಿಯಾನೊ[/caption] ಕಾದ ಹೆಂಚಿನ ಮೇಲೆ ಪೂರಕೆಯಿಂದ ಸವರುತ್ತಾ ಹಣೆ ಮೇಲಿನ ಬೆವರನ್ನು ಸೆರಗಿನಿಂದ ಒತ್ತಿಕೊಂಡ ಕೌಸಲ್ಯ ದೊಡ್ಡ ಪಾತ್ರೆಯಲ್ಲಿದ್ದ ಹಿಟ್ಟನ್ನು ಸವುಟಿನಿಂದೆತ್ತಿ ಹೆಂಚಿನ ಮೇಲೆ ಎರಡು ಮೂರು...

ಆಡ್ವಾಣಿ ಒಬ್ಬರೇ ಅಲ್ಲ ಟೋಟಲಿ ರಾಜಕಾರಣಿಗಳ ಗ್ರಹಗತಿನೇ ನೆಟ್ಟಗಿಲ್ರಿ

ಪಾಕಿಸ್ತಾನಕ್ಕೆ ಟೂರ್ ಹೋಗಿ ಬಂದ ಮ್ಯಾಗೆ ಯಾಕೋ ನಂ ಅಡ್ವಾಣಿ ಸ್ಥಾನಮಾನ ಶೇಕ್ ಆಗಲಿಕ್ ಹತ್ತೇತಿ. ಬರೋಬ್ಬರಿ ಹೇಳ್ಬೇಕಂದ್ರೆ ಯಾಕೋ ಇತ್ತಿತ್ಲಾಗೆ ರಾಜಕಾರಣಿಗ ನಸೀಬೇ ಖೊಟ್ಟಿ ಆಗಾಕ್ ಹತ್ತೇತ್ ನೋಡ್ರಿ. ಅಟ್ ದಿ ಫಸ್ಟ್...

ಅಧಿಕಾರ ಕೈನಲ್ಲಿದ್ದಿದ್ದರೆ ರಾಮಮಂದಿರ ಎಂದೋ ಕಟ್ಟುತ್ತಿದ್ದೆ

ಘಟ್ಟದ ತಗ್ಗಿನ ಮಳೆ ಜಡಿಯಹತ್ತಿತ್ತು. ಮುರುಕಲು ಛತ್ರಿ ಹಿಡಿದು ಆಷ್ಟ ಮಠಗಳ ಕೋಟೆಗೆ ನುಗ್ಗಿ, ಪೇಜಾವರ ಯತಿವರ್ಯರ ಸಂದರ್ಶನ ಬಯಸಿ ಅವರ ದಿವಾನ್‌ಖಾನೆಗೆ ಅಡಿಯಿಟ್ಟೆ. ಹಿರಿಕಿರಿ ವಟುಗಳ ಮಧ್ಯೆ ಹಲಸಿನ ಹಪ್ಪಳ ಹುರಿಗಾಳು ಮೆಲ್ಲುತ್ತಾ...

ಅಡ್ವಾಣಿ ಮುಪ್ಪಾಗಿ ಗರತಿಯಾದ ಪರಸಂಗ

ಸಂಘ ಪರಿವಾರವೆಂಬ ವಾನರ ಸೇನೆಯ ಮುಂದೆ ಲಕ್ಷ್ಮಣನಂತಹ ಲಾಲ್‌ಕೃಷ್ಣ ಅಡ್ವಾಣಿ ಅಪರಾಧಿ ಮುಖಭಾವ ಹೊತ್ತು ಹುಬ್ಬುಗಂಟಿಕ್ಕಿಕೊಂಡು ಕಟಕಟೆಯಲ್ಲಿ ನಿಂತಿದ್ದಾರೆ. ಶ್ರೀರಾಮನಂತಹ ವಾಜಪೇಯಿ ನಿಲ್ಲಲೂ ತ್ರಾಣವಿಲ್ಲದೆ ನ್ಯಾಯಪೀಠದಲ್ಲಿ ಆಸೀನರಾಗಿ ಪೈಲ್ಸ್‌ ರೋಗಿಯಂತೆ ಫೋಜ್ ಕೊಡುತ್ತಿದ್ದಾರೆ. ಲಾಲ್‌ಕೃಷ್ಣ...