ಏಕೆ ಕಣ್ಣು ಹೀಗೆ ತೇವಗೊಂಡಿತು?

ಏಕೆ ಕಣ್ಣು ಹೀಗೆ ತೇವಗೊಂಡಿತು, ಏಕೆ ಮನವು ಕಳವಳದಲಿ ಮುಳುಗಿತು? ಇದ್ದಕಿದ್ದ ಹಾಗೆ ಏನೋ ಮಿಂಚಿತು ತಿಳಿಯದಿದ್ದರೇನು ಮನಕೆ ಹೊಳೆಯಿತು. ಯಾರ ದನಿಯೊ ಎದೆಯ ಹಾದುಹೋಯಿತು ಬಾನಿನಲ್ಲಿ ತಾರೆ ಸಂತೆ ಸೇರಿತು ಶ್ರುತಿಗೊಂಡಿತು ವೀಣೆ,...

ಏನೋ ಗಾನ ಚಿಮ್ಮುತಿದೆ

ಏನೋ ಗಾನ ಚಿಮ್ಮುತಿದೆ ಅಂಗಾಂಗದಲಿ ಏಕೋ ಮನ ಸೇರದು ದಿನದ ನಡೆಯಲಿ ಸ್ವರಗಳೇರಿ ಇಳಿಯುತಿವ ತಿಳಿಗಾಳಿಯಲಿ, ಮಧುರಗಂಧ ಹಬ್ಬುತಿದೆ ಮನದ ವನದಲಿ ಎಂಥ ನೃತ್ಯ ಒಲಿಯಿತಿಂದು ನನ್ನ ಚಲನೆಗೆ? ಕಲಿಯದೇನೆ ತಿಳಿಯುತಿದೆ ಎಲ್ಲ ಹೊಸ...

ಹೊಸ ಚೆಲುವನು ಹರಸಿ

ಹೊಸ ಚೆಲುವನು ಹರಸಿ - ಮೈಗೆ ಹೊಸ ಸೊಬಗನು ತೊಡಿಸಿ ಹಿಮದ ಶಾಪವಾಯು - ಬೀಸಿದೆ ಹಸಿರ ಉಸಿರ ನಿಲಿಸಿ ನೀಗಲಿ ಶಾಪವನು ಚೈತ್ರ ಪ್ರಕೃತಿಗಭಯ ನೀಡಿ, ಒಣರೆಂಬೆಯು ಹಸಿರ - ದನಿಸಲಿ ಲಜ್ಜೆಯನ್ನು...

ಯಾರೋ ತಾಪಸಿ ನೀನು ?*

ಯಾರೋ ತಾಪಸಿ ನೀನು? ರಂಭೆಯೆ ಕರೆದರು ತೆಪ್ಪಗೆ ಕೂತಿಹೆ ಎಂಥಾ ಮರುಳನೊ ನೀನು? ಅಮೃತವ ಹೀರಿ ಮುಪ್ಪನು ತೂರಿ ಅಪ್ಸರೆಶಯ್ಯೆಯ ಸೇರಿ ಸುಖಿಸಲು ತಾನೇ ಈ ತಪವೆಲ್ಲಾ ಭೋಗದ ಎಲ್ಲೆಯ ಮೀರಿ ಗೀತದಿ ಅರಳಿಸಿ...

ಯಾವ ಕಾಣದ ಭಾವಸೂತ್ರ

ಯಾವ ಕಾಣದ ಭಾವಸೂತ್ರ ಅರಿವನು ಮೀರಿ ಕಟ್ಟಿ ಎಳೆಯಿತು ನನ್ನ ನಿನ್ನ ಬಳಿಗೆ? ಏನೋ ಕೇಳಿತು ನಿನ್ನ ಕಣ್ಣು, ಮಾವಿನ ಹಣ್ಣು ಕಳಚಿ ಬಿದ್ದಿತು ನನ್ನ ಮಡಿಲಿನೊಳಗೆ ಮುಗಿಲು ಸಾಗುವ ಲಯಕೆ ತೂಗಿ ಬೆಳೆಯಿತು...

ಚಿಂತೆ ಏತಕೆ ಗೆಳತಿ?

ಚಿಂತೆ ಏತಕೆ ಗೆಳತಿ? ಜೀವ ಭಾವ ಹೆಗಲ ಹೂಡಿ ನೋವು ನಲಿವ ಕೀಲ ಮಾಡಿ ಸಾಗುತಿಹುದು ಬಾಳಿನ ಗಾಡಿ ಮೇಲು ಕೀಳು ಎನುವುದುಂಟೆ? ಹಳಿದು ಉಳಿದ ಹಮ್ಮು ಉಂಟೆ? ಬದುಕೇ ಸಾವಿನ ಒಲೆಯ ಕುಂಟೆ...

ಯಾವುದು ಸಿಹಿಯೂಟ?

ಯಾವುದು ಸಿಹಿಯೋ ಯಾವುದು ಕಹಿಯೋ ನೀನಿಲ್ಲದೆ ರುಚಿ ಎಲ್ಲಿ? ಯಾವುದು ಸ್ವರವೋ, ಯಾವುಮ ಶ್ರುತಿಯೋ ನೀನಿಲ್ಲದೆ ಅರಿವೆಲ್ಲಿ? ಸುತ್ತ ಇದ್ದರೂ ನದಿ ವನ ಕಾಡು ಆ ಚೆಲುವಿಗೆ ನಾ ಕುರುಡ; ನೀನಿದ್ದರೆ ಮರುಭೂಮಿಯಾದರೂ ಅಮೃತಕೆ...

ತಾಗದಿರಲಿ ಮುನಿಯ ಕೋಪ

ತಾಗದಿರಲಿ ಮುನಿಯ ಕೋಪ* ಕಾಡದಿರಲಿ ಶಾಪ ಕಾಯುತಿರುವ ಪ್ರೇಮಿಯ ತೋಳಿನಲ್ಲಿ ಬೀಳು ನಲ್ಲನೆದೆಯ ಕಂಪಿಸುವ ಮೊಲ್ಲೆಯಾಗಿ ಏಳು ಕಾsಳಾಗಿ ಹೋsಳಾಗಿ ಮುಚ್ಚಿ ಬಿಚ್ಚಿ ಆಡು ಮೇವಾಗಿ ಮೊಗೆಯಾಗಿ ದಾಹಗಳಿಗೆ ಊಡು ಪ್ರಿಯನ ಬಯಕೆಯುತ್ಸವಕೆ ಕಳಶಗಳನು...

ನಿನ್ನ ಕನಸುಗಳಲ್ಲಿ ಮುಳುಗಿಹೋದೆನು

ನಿನ್ನ ಕನಸುಗಳಲ್ಲಿ ಮುಳುಗಿಹೋದೆನು ನಾನು ಎತ್ತಿ ಕಾಪಾಡುವರು ಯಾರು? ಸವೆನೆನಪಿನಾಳದಲಿ ಹುಗಿಮ ಹೋಗಿರುವೆನು ಅಗೆದು ತೆಗೆಯುವರಿಲ್ಲವೇನು? ನಿನ್ನ ಬಯಕೆಯ ಗಾಳಿ ಹಾರಿಸಿತು ನನ್ನ ಹಿಡಿದು ನಿಲ್ಲಿಸುವವರು ಯಾರು? ಕ್ರೂರ ವಿರಹಾಗ್ನಿಯಲಿ ಬೇಯುತಲೆ ಇರುವೆ ನೀರೆರದು...

ಕಪ್ಪು ಬಣ್ಣದ ಕೃಷ್ಣ ಎಷ್ಟು ಚಂದವೋ ನೀನು!

ಕಪ್ಪು ಬಣ್ಣದ ಕೃಷ್ಣ ಎಷ್ಟು ಚಂದವೊ ನೀನು! ಕಪ್ಪಿನ ಮಹಿಮೆಯ ತಿಳಿದೆ ಈಗ ಮುಗಿಲಾಳ ಕಡಲಾಳ ಎಲ್ಲ ಕಪ್ಪಲ್ಲವೆ ರತ್ನಗಳಲಿರುವಂತೆ ನೀಲರಾಗ? ಕಪ್ಪ ಮೋಡಗಳೆಲ್ಲ ಒಟ್ಟಾಗಿ ಕೂಡಿವೆ ದಟ್ಟೈಸಿ ನಡುವೆ ಮಿಂಚೆದ್ದಿದೆ, ಕಪ್ಪ ಕೋಗಿಲೆ...