ದೇವರಗೂಡಿನ ದೀಪದ ಹಾಗೇ

ದೇವರ ಗೂಡಿನ ದೀಪದ ಹಾಗೇ
ಅಮ್ಮನ ಕಣ್ಣೂ ಕೂಡ,
ಅಮ್ಮ ತಬ್ಕೊಂಡ್ ಮುದ್ ಮಾಡಿದ್ರೆ
ತಿಂದ್ಹಾಗಿರತ್ತೆ ಫೇಡ!

ಅಮ್ಮ ಯೋಚ್ನೆ ಮಾಡ್ತ ಇದ್ರೆ
ಮೋಡ ಮುಚ್ಚಿದ ಸಂಜೆ,
ಕುಲು ಕುಲು ನಗ್ತ ಮಾತಾಡ್ತಿದ್ರೆ
ಬೆಳಗಿನ ಬಿಸಿಲಿದ್ಹಂಗೆ.

ಅಮ್ಮ ಬೈದ್ರೂ ಇಷ್ಟ ನಂಗೆ
ಸುಳ್ಳೇ ಅಳ್ತಿರ್‍ತೀನಿ!
ಬೇಜಾರಾಯ್ತ ನನ್ ಚಿನ್ನಂಗೆ
ಅನ್ನೋದ್ ಕಾಯ್ತಿರ್‍ತೀನಿ.

ಆಗ್ಲೂ ಅಳ್ತ ಹತ್ರ ಹೋದ್ರೆ
ಅಮ್ಮ ತಬ್ಕೋತಾಳೆ,
ಕೆನ್ನೆ ಸವರಿ ತಿಂಡಿ ತಿನ್ಸಿ
ಎಷ್ಟೊಂದ್ ಮುದ್ ಮಾಡ್ತಾಳೆ!

ಅಮ್ಮ ಬೈದ್ರೆ ಒಳ್ಳೇದೇನೆ
ತಿಂಡಿ, ಮುದ್ದು ಗಟ್ಟಿ!
ಅಪ್ಪಂದ್ ಮಾತ್ರ ಬಲೇ ಕಷ್ಟ
ತಿನ್ಬೇಕ್ ಏಟು ಬಿಟ್ಟಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೬೨
ಚಿತ್ರ: ಅಪೂರ್ವ ಅಪರಿಮಿತ Next post ಮತ ವಿಮತ

ಸಣ್ಣ ಕತೆ

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…