ಆನಿ ಬಂತಾನಿ ಯವೂರಾನಿ? ಸಿದ್ಧಾಪುರದಾನಿ ಇಲ್ಲಿಗ್ಯಾಕ್ ಬಂತು? ಹಾದಿ ತಪ್ಪಿ ಬಂತು ಹಾದಿ ಯಾಕೆ ತಪ್ಪಿತು? ಕಬ್ಬಿನಾಸೆ ಎಳೆಯಿತು ಬಾಲ ಬೀಸಿಕೊಂಡು ಊರ ನಡುವೆ ಬಂದು ಬಿಟ್ಟಿತು? ಪುಟ್ಟ ಪುಟ್ಟ ಕಣ್ಣು ಮುಖವೊ ತಟ್ಟೆ ಹೊನ್ನು ಮುಕ್ಕಿ ಬಿಡಬೇಕೆನಿಸುವಂ...

ಬನ್ನಿ ಓ ತಾರೆಗಳೆ ನೆಲಕಿಳಿದು ಬನ್ನಿ ಆಗಸದ ಕಾಂತಿಯನು ಭೂಮಿಗೂ ತನ್ನಿ, ಕೋಟಿ ಮೈಲಿಗಳಾಚೆ ಹೊಳೆವ ತೇಜಗಳೆ ಬಂದು ನಮ್ಮನು ಹರಸಿ ಕಾಂತಿಗೋಳಗಳೆ. ಸೂರ್ಯ ಚಂದಿರ ಮುಗಿಲ ಜೊತೆ ಬಾಳುವವರೆ ಗಾಳಿ ಉಯ್ಯಾಲೆಯಲಿ ತೂಗಿಕೊಳುವವರೆ, ಎಂದೂ ಆರದೆ ಉರಿವ ನಂದಾದ...

ಗುಂಡ ತುಂಬ ಸಾಧು ಹುಡುಗ ಹಸುವಿನಂತೆ ಸದಾ ಒಳ್ಳೇ ಮಾತು ಆಡಿದೋರ್‍ಗೆ ಸಾಕಿದ್ನಾಯಿ ಥರಾ! ಸ್ಕೂಲು ಚೀಲ ಭಾರ ಅಂದ್ರೆ ತಾನೇ ಅದನ್ನ ತರ್‍ತಾನೆ! ಸುಸ್ತು ಅಂದ್ರೆ ಹೆಗಲ ಮೇಲೆ ಹೊತ್ತು ತಂದು ಬಿಡ್ತಾನೆ! ಭಾರೀ ಡಬ್ಬಿ ತುಂಬ ತಂದ ತನ್ನ ತಿಂಡಿ ತೆಗೆದು ...

ತಪ್ಪೇನಾದ್ರೂ ನನ್ನಲಿದ್ರೆ ತೋರ್‍ಸಮ್ಮಾ ತೋರ್‍ಸಮ್ಮಾ, ತಪ್ ತೋರ್‍ಸಿದ್ರೆ ತಿದ್ಕೋತೀನಿ ಗುಡ್ ಬಾಯ್ ಆಗ್ತೀನ್ ಹೇಳಮ್ಮಾ ಸೋಪ್ಹಾಕ್ ಒಗದ್ರೆ ಕೊಳಕಾದ್ ಅಂಗಿ ಬೆಳ್ಳಗೆ ಆಗೋದಿಲ್ವಾಮ್ಮ? ಹಾಗೇ ಶುದ್ಧ ಆಗ್ತೀನ್ ನಾನೂ ಬುದ್ಧಿ ಮಾತು ಹೇಳಮ್ಮಾ ತಪ್ ತೋ...

ಹಕ್ಕೀ ಹಾಗೇ ನಾನೂನೂ ರೆಕ್ಕೆ ಬಿಚ್ಕೊಂಡು ಹಾರಾಡ್ಬೇಕು ಮೋಡದ ನಡುವೆ ಭೂಮಿ ನೋಡ್ಕೊಂಡು! ಮೀನಿನ ಹಾಗೇ ನಾನೂ ಪಿಳ ಪಿಳ ಕಣ್ಣನ್ ಬಿಟ್ಕೊಂಡು ಈಜ್ತಿರಬೇಕು ಮೈಮಿಂಚಸ್ತ ನೀರನ್ ಸೀಳ್ಕೊಂಡು! ಪುಟಾಣಿ ಕರುವಿನ ಹಾಗೇ ನಾನೂ ಬಾಲ ಎತ್ಕೊಂಡು ಓಡ್ತಿರಬೇಕು ...

ನಮ್ಮನೆ ತೆಂಗಿನ ಮರಕ್ಕೆ ಎಂಟು ವರ್ಷ ಆಯ್ತಂತೆ, ಆದ್ರೂ ಎಷ್ಟೊಂದ್ ಎತ್ರ! ಮೊದ್ಲು ಪುಟ್ಟಕ್ಕಿತ್ತಂತೆ ನನಗೂ ಈಗ ಅಷ್ಟೇ ವರ್ಷ ಆದ್ರೂ ಚಿಕ್ಕೋನು, ನಾನ್ಯಾಕ್ ಮತ್ತೆ ಆಗ್ಲೇ ಇಲ್ಲ ಮರದಷ್ಟ್ ದೊಡ್ಡೋನು? ಅಪ್ಪನ್ ಕೇಳ್ದೆ ಗದರಿಸಿ ಹೇಳ್ದ ನನಗೀಗ್ ಬಿಡ...

ನೀರನು ಚೆಲ್ಲುವ ಮೋಡಕ್ಕೆ ಭೇದ ಬುದ್ಧಿ ಇಲ್ಲ, ಬಿಸಿಲನು ಸುರಿಸುವ ಸೂರ್ಯನಿಗೆ ಪಕ್ಷಪಾತವಿಲ್ಲ, ಪರಿಮಳ ಹರಡುವ ವಾಯುವಿಗೆ ಜಾತಿ ಪಂಥವಿಲ್ಲ, ಮಾನವರಲ್ಲಿ ಮಾತ್ರವೆ ಇಂಥ ಏರು ತಗ್ಗು ಎಲ್ಲ. ಎಲ್ಲರ ಮೈಲೂ ಹರಿಯುವುದು ರಕ್ತ ಮಾತ್ರವೇನೇ, ಚಳಿ ಮಳೆ ಗಾ...

ಪ್ರಾಣಿಗಳಿಂದ ಕಲೀಬೇಕಾದ್ದು ಭಾಳ ಭಾಳ ಇದೆಯಪ್ಪ! ಸ್ಕೂಲಿಗೆ ಹೋಗ್ದೆ ಇದ್ರೂನೂ ಅವುಗಳ ಬುದ್ಧಿ ಚುರುಕಪ್ಪ! ನಾವ್ ಹಾಕೋದು ಕೊಂಚ ಅನ್ನ ಆದ್ರೂ ಅದನ್ನ ನೆನಪಿಟ್ಟು ನಾಯಿ ಮನೇನ ಕಾಯುತ್ತೆ ನಿದ್ದೆ ಕೂಡ ಬಿಟ್ಬಿಟ್ಟು! ಇರುವೆ ಎಷ್ಟೊಂದ್ ಸಣ್ಣನೆ ಪ್ರಾ...

ಒಂದು ದಿನ ಕಿಟ್ಟು ಮನೆಯಲ್ಲೆ ಕೂತಿದ್ದ, ಮನೆಬೆಕ್ಕು ಬಿರ್ಜುವಿನ ತಲೆ ಸವರುತಿದ್ದ ತನ್ನ ಕಷ್ಟವ ನೆನೆದು ಅವನಿಗಳು ಬಂತು “ಯಾಕಳುವೆ ಕಿಟ್ಟು?” ಅಂತ ಬಿರ್ಜು ಕೇಳ್ತು “ಬಿರ್ಜು ನೀ ಎಷ್ಟೊಂದು ಅದೃಷ್ಟವಂತ! ಗೊತ್ತಿಲ್ಲ ನಿನಗೆ ...

ಅಜ್ಜೀ ಅಜ್ಜೀ ಯಾವಾಗ್ಲೂ ನಾನ್ ನಿನ್ ಜೊತೇನೇ ಇರ್‍ತೀನಿ ನಿನ್ಹಾಗೇನೇ ನಾನೂನೂ ಏಕಾದಶೀ ಮಾಡ್ತೀನಿ. ನಿನ್ಹಾಗೇನೇ ಬೆಳಿಗ್ಗೆ ಪಾವು ಉಪ್ಪಿಟ್ ಮಾತ್ರ ತಿಂತೀನಿ ಹಾಲನ್ ಕುಡಿದು ಕಣ್ಮುಚ್ಚಿ ಮಿಣಿ ಮಿಣಿ ಜಪ ಮಾಡ್ತೀನಿ ದೇವರ ಪ್ರಸಾದ ಅಂತ ನಾಲ್ಕೇ ರಸಬ...

1...4950515253...68