ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.
"ಎಲ್ಲಾ ಮರಕ್ಕು ಮೈ ತುಂಬಾ ಎಲೆ ನಂಗೇ ಯಾಕಿಲ್ಲ? ಮರಕ್ಕೆ ಕಾಯಿ ಹೂವು ಹಣ್ಣು, ನಂಗೂ ಬೇಕಲ್ಲ" "ಮರಕ್ಕೆ ಅಪ್ಪ ಅಮ್ಮ ಇಲ್ಲ ನಿನಗದು ಇದೆಯಲ್ಲ ಅದಕ್ಕೆ ಬೆಚ್ಚನೆ ಮನೆಯೂ ಇಲ್ಲ ಸ್ನೇಹಿತರೇ ಎಲ್ಲ"...
"ಮನೆಗೆ ಮಾತ್ರ ಕಿಟಕಿ ಇದೆ ನಮಗೆ ಕಿಟಕಿ ಇಲ್ಲ" "ನಮಗೂ ಕೂಡ ಕಿಟಕಿ ಇದೆ ನಿನಗದು ತಿಳಿದಿಲ್ಲ" "ನಮಗೆ ಕಿಟಕಿ ಎಲ್ಲಿ ಇದೆ?" "ಮನಸಿನಾಳದಲ್ಲಿ, ನೋಡಲಿಕ್ಕೆ ಬರದ ಹಾಗೆ ಎದೆಯ ಗೂಡಿನಲ್ಲಿ" "ಮನೆಗೆ ಕಿಟಕಿ...
ಅಮ್ಮನಿಗಿಂತಾ ದೇವರು ಇಲ್ಲ ಅಪ್ಪನಿಗಿಂತಾ ದೊಡ್ಡೋರಿಲ್ಲ ಟೀಚರ್‌ಗಿಂತಾ ಒಳ್ಳೇವ್ರಿಲ್ಲ ಅಲ್ವೇನೇಮ್ಮಾ? ನಾವು ಒಳ್ಳೇವ್ರಾಗ್ಲಿ ಅಂತ ವಿದ್ಯೆ ಬುದ್ದಿ ಬರ್‍ಲಿ ಅಂತ ಎಷ್ಟೊಂದ್ ಕಷ್ಟ ಪಡ್ತಾರಲ್ವೇ ಅಪ್ಪ ಅಮ್ಮ? ಬೆಳಿಗ್ಗೆ ಬೇಗ ಎದ್ಬಿಟ್ಟು ಪಾಠ ಎಲ್ಲಾ...
ಜಾತಿ ಗೀತಿ ಎಂಬುದೆಲ್ಲ ಸುಳ್ಳು, ಕಂದ ಸುಳ್ಳು. ಮೇಲು ಕೀಳು ಎಂಬ ಮಾತು ವಿಷ ಸವರಿದ ಮುಳ್ಳು. ನೀತಿ ನಡತೆ ಹೃದಯ ಇರುವ ಮಾನವನೇ ಹಿರಿಯ, ನಂಬಬೇಡ ಭೇದದ ವಿಷ ಕುಡಿಸುವಂಥ ನರಿಯ! ಸುತ್ತ...
"ಗಿಡ, ಮರ, ಪ್ರಾಣಿ ಎಲ್ಲ ನಮ್ಹಾಗೇನಮ್ಮಾ? ಹೊಡದ್ರೆ ಬೈದ್ರೆ ಅವಕ್ಕೂ ನೋವು ಆಗತ್ತೇನಮ್ಮ?" "ಹೌದು ಮರಿ, ಮರ ಗಿಡ ಎಲ್ಲಾ ನಮ್ಮಂತೇ ಪ್ರಾಣೀನ್ ಕೂಡ ನೋಡ್ಕೋಬೇಕು ಮನೇ ಮಕ್ಳಂತೆ." "ಮತ್ಯಾಕ್ ಅವು ನಮ್ಹಾಗೇನೇ ಮಾತನ್...