ಹಸಿದ ಕತ್ತಿಗೆ ಕತ್ತುಕೊಡಲಿರುವ ನಿನಗೇನು ಗೊತ್ತು ಜೀವಕ್ಕೆ ಬಂದಿರುವ ಕುತ್ತು, ಆಪತ್ತು? ಗೊತ್ತಾದರೂ ನೀನೇನು ಮಾಡಲಾದೀತು? ಬಲಿಕೊಟ್ಟು ಬಲಪಡೆಯುವವರ ಸ್ವಾರ್ಥ ಅರ್ಥವಾಗಲಿಲ್ಲ ನಿನಗೆ ನಿನಗೆಂತು ಅರ್ಥವಾದೀತು? ಕಪಟ ನಗೆಯ ಹೊಗೆ ಮುಚ್ಚೀತು ಎಲ್ಲವನ...

ಒಮ್ಮೆ ನಕ್ಕು ಬಿಡು ಗೆಳತಿ ಅತ್ತಿರುವ ನಿನ್ನ ಕಣ್ಣುಕಂಡು ಬತ್ತಿರುವ ನನ್ನೆದೆಗೆ ತಂಪು ಗೈಯಲು ಹಾಡಬೇಡವೆಂದರೆಂದು ಹಾಡು ನಿಲ್ಲಿಸಿತೇ ಕೋಗಿಲೇ? ನಿನ್ನ ನಗುವೇ ಹಾಡಾಗಿತ್ತು ನನ್ನ ಪಾಲಿಗೆ ನಿನ್ನ ನಗುವಿನ ಮೆರವಣಿಗೆಯ ಸರಪಣಿಗೆಲ್ಲಿತ್ತು ಕೊನೆ? ನಿ...

ಕಾರಂತರಿಲ್ಲದ ಬಾಲವನಕ್ಕೆ ಹೋದಾಗಲೆಲ್ಲ, ತಂಗಾಳಿ ದೇಹವ ಸೋಕಿದಾಗಲೆಲ್ಲ, ಕಾರಂತರ ಕೈಯ ಬೆಚ್ಚನೆಯ ಸ್ಪರ್ಶವೇ ಮನದಲ್ಲಿ ಮನೆ ಮಾಡುತ್ತದೆ ಕಾರಂತರಿಲ್ಲದ ಬಾಲವನದ ಜೋಕಾಲಿಯನ್ನು ತೂಗಿದಾಗಲೆಲ್ಲ ಮಹಾಪುರುಷನ ಜೀವನವೊಂದು ನಿಧಾನವಾಗಿ ಜೀಕಲಾರಂಭಿಸುತ್ತದ...

ಮರದೊಳಗೊಂದು ರಥವಿದೆ ರಥದೊಳಗೊಂದು ಮರ ಅಮರವಾಗಿದೆ ಆ ಮರ ರಥವಾದ ಬಳಿಕ ಹೊಗಳಿದವರೆಷ್ಟು ಜನ ಕಲಾವಿದನ ಕಲಾ ಚಾತುರ್ಯವನ್ನು ಒಣಗಿದ ಮರಕ್ಕೆ ಪ್ರಾಣ ಇತ್ತವನ ಕೈಚಳಕವನ್ನು ಮರ, ಮರವೇ ಆಗಿದ್ದರೆ ಅದಕ್ಕೇನಿದೆ ಬೆಲೆ? ಶರಣು ಬರುತ್ತಿದ್ದರೇ ಜನ ಬರಡು ಮರ...

ಮಳೆಗಾಲದ ಕಾರ್ಮೋಡಗಳು ಚೆಲ್ಲಾಟವಾಡುತ್ತಿವೆ ಭಾವದೆಲ್ಲೆಯ ಮೀರಿ ಹಮ್ಮು-ಬಿಮ್ಮುಗಳ ಹಂಗಿಲ್ಲದೆ ಒಂದರ ಮೇಲೊಂದು ಏರಿ ಮಾಡುತ್ತಿವೆ ಸವಾರಿ ತುಂಬಿಕೊಂಡಿದೆ ಅದೆಷ್ಟೋ ಹನಿಗಳನ್ನು ತಮ್ಮ ಒಡಲೊಳಗೆ ದೂರದಿಂದ ಓಡಿಬಂದು ಅಪ್ಪಿಕೊಳ್ಳುತ್ತವೆ ಒಂದನ್ನೊಂದು ...

ನೀನೇಕೆ ಆಸೆಗೆ ದಾಸನಾಗಲಿಲ್ಲ? ಮೀಸೆಯ ತಿರುವಿ ಮೆರೆಯಲಿಲ್ಲ? ಕಾಮದ ಜ್ವಾಲೆಯ ತಾಪಕ್ಕೆ ಮಣಿದು ಇನ್ನಷ್ಟು ತುಪ್ಪವ ಎರೆಯಲಿಲ್ಲ? ಅಧಿಕಾರದ ಗದ್ದುಗೆಯೆಂಬ ಗುದ್ದಿಗೂ ತಲೆಬಾಗಲಿಲ್ಲ ನೀನು ಅಪ್ಪನ ಅತಿಮೋಹದ ಉರಿಯ ಗುರಿಗೆ ನೀನಾದೆಯಾ ಜೇನು? ಹಂಗಿನ ಗು...

ನನ್ನಮ್ಮ ಪಡುವಣದ ಸೂರ್ಯನಂತೆ ಬಾಳ ಹಗಲಿನಲಿ ಬೆಳಕು ಕೊಟ್ಟವಳು ತನ್ನ ತಾನೇ ಕಡಲಲಿ ಮುಳುಗಿಸಿಕೊಂಡವಳು ಬಾಳ ಮುಸ್ಸಂಜೆಗೆ ತಂಪು ತಂದವಳು ನನ್ನಮ್ಮನ ಕೋಪ, ವರ್ಷಕ್ಕೊಮ್ಮೆ ಕಾಣಿಸುವ ಗ್ರಹಣದಂತೆ ಅಪರೂಪ ಬಂದಾಗ ತರುವ ಭಯ ಅರೆಕ್ಷಣದಲ್ಲೇ ಮಾಯ ಕಂಡದ್ದು...

ನಿನ್ನ ಕಣ್ಣ ಕಾಂತಿಯಲ್ಲೇ ಪ್ರಪಂಚ ಬೆಳಗಿರುವಾಗ ಬೆಳಕಿನ ಹಂಗೇಕೆ ಬಾಳ ದಾರಿಯಲಿ ಕತ್ತಲಿನ ಗುಂಗೇಕೆ ಎನ್ನ ಮನದಲಿ ನಿನ್ನ ಮುಖದ ಕನ್ನಡಿಯಲ್ಲಿ ನನ್ನ ನಗುವಿನ ಪ್ರತಿಬಿಂಬ ನಿನ್ನ ಕಣ್ಣೀರು ಹರಿದಿದೆ ನನ್ನ ಕಣ್ಗಳಲಿ ಮುಖ ಬಾಡಿದೆ, ಮನಸ್ಸು ಮರುಕಪಟ್ಟ...

ಮುಂಜಾವಿನ ಚುಮುಚುಮು ಚಳಿಗೆ ಸೂರ್ಯನ ಬೆಚ್ಚನೆಯ ಸ್ಪರ್ಶ ನೇಸರನ ಹಸಿಬಿಸಿ ಮುತ್ತಿಗೆ ಪಾಲುದಾರಳಾದ ಭೂಮಿಗೆ ಹರ್ಷ ಚಳಿಗಾಳಿಯ ಚಲನೆಗೆ ಜಡವಾಗಿದೆ ನಿಸರ್ಗ ಚಿಂವ್ ಚಿಂವ್ ಕೂಗುತ್ತಾ ಸ್ವಾಗತಿಸಿದೆ ಬೆಳಕನ್ನು ಪಕ್ಷಿ ವರ್ಗ ಕೆಂಪು ಗುಲಾಬಿ ಅರಳಿ ನಿಂತ...

ಇದೋ ನೋಡಿ ಚಿತ್ತ-ಪಟ ಗಾಳಿಯಲ್ಲಿ ಓಲಾಟ ಬಾನೆತ್ತರಕ್ಕೆ ಹಾರಾಟ ಹಿಡಿತ ಬಿಟ್ಟರೆ ಅದರದೇ ಚೆಲ್ಲಾಟ ನಮ್ಮ ಊಹೆಯನ್ನು ಮೀರಿ ಎತ್ತರೆತ್ತರಕ್ಕೆ ಹಾರಿ ಬಾನಂಗಳವನ್ನು ಏರಿ ಮಾಡುತ್ತದೆ ಸೀಮೋಲ್ಲಂಘನ ಒಮ್ಮೆ ಆಕಡೆಗೆ ಸೆಳೆತ ಮತ್ತೊಮ್ಮೆ ಈ ಬದಿಗೆ ಎಳೆತ ಎಳ...