
ಹೊಗುವಾಸೆಯಿಲ್ಲ ಕಾಲ್ತೆಗೆವಾಸೆಯಿಲ್ಲ, ಸು- ಮ್ಮನೆ ಮೇಲನಿಟ್ಟಿಸಿ ನಿಲ್ಲುವಾಸೆಯೆನಗೆ ಬೊಂಬೆಗೂಡಿದ ತೆನೆಯ ಗೋಪುರದ ಬಾಗಿಲಿನ ಕತ್ತಲೆಯೊಳಿಣಿಕಿಣಿಕಿ ಏರಲೆನ್ನ ಬಗೆ ಆ ಕತ್ತಲೊಳಹೊಕ್ಕು ಮರಳಿ ಹೊರಹಾರುವೀ ಗಿಳಿಪಾರಿವಾಳಗಳ ಭ್ರಮಣೆಯನು ಕಂಡು ಅವ್ಯಕ್...
ಕರಣವಲಯದಿ ನಿಂತು ವಿಷಯವೈವಾಹಿಕದಿ ಪಡೆವ ಸೊಗಗಳನೊಲ್ಲದೆಯೆ ಮುಂದೆ ಸರಿದು ಮೈಜರೆದು ಮನಜರೆದು ಬುದ್ದಿ ತರ್ಕವ ಜರೆದು ಅದನೊಲ್ಲದಿದನೊಲ್ಲದಾವುದನೊ ತಿರಿದು ಊರಿಗೊಂದಿರುಳಂತೆ ನೆಲದಿ ನೆಲೆಯಿಲ್ಲದೆಯೆ ತಿರಿವ ತಿರುಕರ ಕಣಸೆ, ನಿನಗೆ ನೆಲೆ ಇಲ್ಲೆ? ಜಡ...
ಮನೆಯಲ್ಲ ಮಠವಲ್ಲ ರಾಜನರಮನೆಯಲ್ಲ ಇದು ನಾಟ್ಯ ಮಂದಿರ ಛಾತ್ರ ಸತ್ರವಲ್ಲ ಜೀವ ಬಯಸುವ ಭೋಗದುಪಕರಣವಲ್ಲವಿದು ಆವರ್ಥ ಘಟಿಸಿತೀ ತೆರ ಮಲೆಯ ಕಲ್ಲ? ಗೋಪುರದ ತುದಿಯಲ್ಲಿ ಬಾನನೆತ್ತುತ ನಿಂತು ಇರುಳಿನೊಳು ಮಿರುತಾರಗೆಯ ಮಾಲೆಗೊಳುತ ಮೋಡ ಮುತ್ತುವ ಜಡೆಗೆ ಜ...
ಅರಸಿ ತೀರದೊಲಾಸೆ ಕೆರಳೆ ನಾ ನಿಂತಿರುವೆ ಮಲೆದೇಗುಲದ ಹೊರಗೆ ತುಂಬನೇ ಬಯಸಿ ಅರಿವರಿತು ತೀರದಿಹ ಸೊಗಪಟ್ಟು, ತೀರದಿಹ ಅಳಲ ತಾಳುತ ತೀರದರಕೆಯನೆ ಮೆರಸಿ “ಅಣು ಬೃಹತ್ತುಗಳಲ್ಲಿ ಕುಗ್ಗಿ ಹಿಗ್ಗದ ತುಂಬೆ ಸೃಷ್ಟಿಯೆಷ್ಟುಂಡರೂ ತೀರದಿಹ ಸೊದೆಯೇ” ಎ...
ಅಲ್ಲಿರಲಿ ಇಲ್ಲಿರಲಿ ಎಲ್ಲಿರಲಿ ತಲೆಬಾಗಿ ನಾ ತೆರೆದ ಮಲೆದೇಗುಲದ ಬಾಗಿಲಿದಿರು ನಿಂತ ತೆರವಾಗುತಿದೆ ನನ್ನ ಕಂಗಳಿಗಾಗೆ ಅರೆ ಬಾನು ಮರ ಹಕ್ಕಿ ಹೊಳ್ಳ ಹೂ ಹೊದರು ಅಂತರಂಗದ ದೈವ ಮೂಲೆತಿರುಗಿನೊಳವಿತು ಸನ್ನೆಗೈದಂತೆಯೇ ಮೈಗರೆವ ಪರಿಗೆ ಒಂದು ನಗೆ ಒಂದು...
ಸಕಲ ಸಂದೇಹಗಳು ಬಳಲಿ ಬಳಿಗೈತಂದು ಬಿಡುವ ಬಯಸುವ ತವರೆ, ಮಲೆಯ ದೇಗುಲವೆ, ವಾಸ್ತವದೊಳಲೆದಿರವು ಪಡೆವರಿವಿನರಕೆಯಿಂ- ದೊಡೆವಽಶಾ೦ತಿಯು ಮದ್ದೆ, ಮುನಿಹೃದಯಫಲವೆ, ಒಂದೊಂದು ನಿಲವಿನೊಳಗೊಂದೊಂದು ಸೊಗವಳಲ ತೋರಿ ತಿರಿವೀ ಭವದ ನಿಶ್ಚಲಕೇ೦ದ್ರವೇ. ಋಜುಅನೃಜ...
“ಮಾತಾ ಸರ್ವಸ್ಯ ಲೋಕಸ್ಯ ಮಧುಸೂಧನಮಾನಿನೀ ದರ್ವೀಮಾದಾಯ ಬಾಲಸ್ಯ ದದೌ ಭಿಕ್ಷಾಂ ಗೃಹೇ ಗೃಹೇ” (ಯಾದವಗಿರಿ ಮಾಹಾತ್ಮ್ಯ) “ಭವತಿ ಬಿಚಾಂದೇವಿ”ಯೆಂದು ನಮ್ಮ ಮನೆಯ ಹೊಸಿಲ ಮುಂದು ದಂಡಕೋಲುಛತ್ರಿ ಹಿಡಿದು ಮನೆಯೊಡತಿಯ ತೊದಲಿ ಕರೆದು ಕಾಡಿಗ...







