
ಚೇತನ ಪ್ರತ್ಯೇಕ ಚಿದ್ಭೂತಿಯೇ, ನಲವೆ. ನಿನ್ನ ಹಸಿರಾರುವುದು ನುಡಿತೇರು ಹರಿಯೆ ಸೂಕ್ಷ್ಮ ನೀ, ದಿನಬಳಕೆ ನುಣ್ಣಮಾತಿದು ತೋರ ಅರಿದಿದಕೆ ನಲುಗಿಸದೆ ನಿನ್ನ ಹಿಡಿಯೆ. ಇದನರಿತೆ ಪೂರ್ಣಕಲಶಕೂರ್ಚಾ೦ಕುರಭೇರ ಮುದ್ರಾದಿ ತಂತ್ರಗಳ ಸಂಕೇತದಿ ಕಟ್ಟುವರ್ಥದ ಪ...
ಏಕಕಾಂಡದೊಳೆದ್ದು ಮೇಲೆ ಬಾನನು ತಾಗಿ ಥಟ್ಟನಲ್ಲಿಯೆ ತನ್ನ ಕಟ್ಟ ಕಳೆದ ಬಗೆ ಆಡುತಿಹ ಗರಿಗಳನು ದೆಸೆದೆಸೆಗೆ ಹರಹುತ್ತ ನಿಂತ ತೆಂಗಿನ ಮೇಲೆ ಹರಿವುದೆನ್ನ ಬಗೆ ನಡುವೆ ಗುಡಿಗೋಪುರದೊಲೆಸೆವ ಮಾಮರದೆಲೆಯ ತುರುಗಲೊಳು ತಂಗುವುದು ತವರ ಕಂಡಂತೆ ಗಗನದಮೃತದ ...
ನಂದಿದರು ದುಸ್ಸತ್ವದಮನಸತ್ವೋನ್ನತರು ರಾಮಕೃಷ್ಣಾದಿಗಳು ದಿವ್ಯಭೂತಿಗಳು ಮತ್ತೆಲ್ಲು ಕಾಣದಿಹ ಬೆಲೆಗಳನ್ನು ಮಾನುಷ್ಯ- ಜೀವಿತದಿ ನೆಲೆಗೊಳಿಸಿದಭವಬಂಧುಗಳು ಕರಣಗಳ ಪಾತ್ರದೊಳು ರುದ್ರರಭಸದಿ ಹರಿದು ಬಲುಕೇಡುಗಳ ಬಳೆವ ಸಂಮೋದಧುನಿಯ ಬಾಳ ಜಡೆಯೊಳು ತಳೆದ...
ಅಭಯವಿನಯಗಳೆಂಬ ಷಡ್ಜಪಂಚಮದೊಳಗೆ ಸದ್ಗುಣಸ್ವರಮೇಳ ಮೂಡುತಿಹುದು ಬಗೆಬಗೆಯ ಬೆರೆತದೊಳು ತೆರತೆರದ ರಂಜನೆಯ ಧೀರಾನುಭೂತಿಗಳ ರಸವ ತಳೆದು ಅಂಥಾತ್ಮಶೀಧುಗಳ ಸಿಂಧುವೆನಲೆಸೆವುದೀ ದೈವಸುಂದರಭಾವ ಜಾನಪದಿಕ ಅದರುತ್ಸವಂಗಳೇ ನಮ್ಮ ಹೃದಯೋತ್ಸವಗ- ಳದರೆಡೆಯೊಳೇ ...
ಎಲೆ ಮನವೆ, ಮುದಶೀರ್ಷ ಜ್ಞಾನತನು ಶಮಪಾದ ಪ್ರತ್ಯಕ್ಷಭವನಿವನ ಸಾರುತೇನೆರವೆ? ಆಸೆಭಯಲೋಭಗಳನಾಧರಿಸುವೆರೆಕೆಗಳ ಆಯ್ದಾಯ್ದು ತೋರ್ವುದರೊಳೇ ನಿನ್ನ ನಿಲವೆ? ಪತಿಪುತ್ರವಿತನೆಂಬ ಮಿತ್ರಬಾಂಧವನೆಂಬ ಭವವಿತ್ತ ಫಲಕಗಳ ತಿರುವುತ್ತ ನಿಂತು ಶೈವಕರುಣಾಂಶಗಳ ಎಳ...
ತಿರೆಗವಿಯೊಳವಿತಿರುವ ಲೋಹಗಳ ರತ್ನಗಳ ಹೊರಬೆಳಕಿಗೊಪ್ಪಿಸುವ ರಕ್ತಿಯೊಸಗೆ ಹೃತ್ಕುಹರದೊಳಗವಿತ ಸದ್ಭಾವಪುಂಜಗಳ ಜಾಗರದಿ ನೆರೆಯಿಸುವ ಸೂಕ್ಕಿಯೊಸಗೆ ಮನದುಸಿರೆ ಹೊರಗುಸಿರನಾಗುವಂತೆಸಗುತಿಹ ನಿತ್ಯನೈಮಿತ್ತಿಕೋತ್ಸವಗಳೊಸಗೆ ಕರ್ಮಪ್ರವಾಹದೊಳು ತಾನೊಂದು ತ...
ಡಿಂಭದೊಳು ಕಾಂಬುದೆಂದಸಮಗ್ರವಲ್ಲವಿದು ಕುಂಭದೊಳಗಡಗಿದ್ದರೂ ಅಲ್ಪವಲ್ಲ ತೀರ್ಥ ಪ್ರಸಾದಗಳ ಜೀವಾನುಕರಣದೊಳು ಅದರಮರಭಾವಕ್ಕೆ ಮಾಲಿನ್ಯವಿಲ್ಲ; ಕರಣಗಮಸೌಲಭ್ಯವೀ ಮಹಾಭಾವಕೆನೆ ಎಲ್ಲ ಜೀವಕು ಇದುವೆ ತವರಾದುದೆನ್ನೆ ವಿವಿಧಾಕೃತಿಯ ಮೆರೆವ ವಿವಿಧವಿಧಿಗಳೊಳ...
ಅನ್ನೆವರಮರಿಯದಿಹ ತನ್ನ ದ್ಯುತಿಯುಚ್ಛೃತಿಯ ರತ್ನದೊಳು ಕಾಣುತ್ತ ನಲಿವುದಿನಕಿರಣ ತಾನೆಯರಿಯದ ತನ್ನ ಪ್ರಸ್ಫುರಚೇತವನು ಕಂಪಿನಲಿ ಕಂಡು ನಲಿವುದು ನೆಲದ ಹರಣ ತನ್ನಹಂಕಾರವನು ಶಮಿಸಿ ಮಮತೆಯ ತೊರೆದ ಸರ್ವಮುಕ್ತನೊಳೆ ಮೆರೆವುದು ಸರ್ವಮಮತೆ ತೋತೋರಿ ಮರೆಗ...
ಇನ್ನಾರುಮರಿಯದಿಹ ಅರಿಯಿಸಲುಮಾಗದಿಹ ಜೀವಾತ್ಮಸಂಸ್ಥೆಯಿದು, ಮಾತಿಲ್ಲ ತೆರೆಯೆ; ಗೀತನೃತ್ಯಾಭಿನಯ ಶಿಲ್ಪ ಕವಿತಾಚಿತ್ರ- ಗಳಿಗರಿದು ಈ ರಹಸ್ಯದ ಮುದ್ರೆಯೊಡೆಯೆ; ಪರಿಸರದ ಪರಿಸರದ ಪರಿಪರಿಯ ಬೆಲೆಗಳೊಳು ಆವ ಬೆಲೆಗೂ ತರದೆ ಉಳಿವುದಿದು ಕೊನೆಗೆ: ಜಗದಾವ ...
ಹೊಂಗಳಸ ಮಿರುಗುವೆಡೆ ಮೊನೆಗೂಡುವಾಗಸದ ಮೊಳಕಾಲಿನೊಳು ಸರಿವ ಬಿಸಿಲಿನಂಗಳದ ಸದ್ದಿರದೆ ತುಟಿಬೆರಳಿನೊಳು ಸುಳಿವ ಮಾರುತದ ಪಾವಿತ್ರ್ಯದೊಸಗೆಯನು ತಳೆದು ಬಹ ನೆಲದ ನೆನೆದೊಡನೆ ನೆರೆಗೊಳುವ ನೇತ್ರಾಂಬು ತೀರ್ಥಗಳ ಹೊಗೆವೊಳಗನೇರೆ ಬಹ ದಿವ್ಯ ಭಾವಗಳ ಸಿರಿಯ...







