
ಮುತ್ತುಗಳ ಕಾವಣದಿ ಮುತ್ತಜ್ಜ ಕುಳಿತಿದ್ದ ಬೇಡಿದೆನು ಮುತ್ತನೊಂದು. ‘ಹೋದ ಮುತ್ತುಗಳೆಂತು ತಿರುಗಿ ಬರುವವು, ರಸಿಕ! ಅವು ನನ್ನ ಪ್ರಾಣಬಿಂದು!’ ಹೂವರಳ್ದ ತೋಟದಲ್ಲಿ ಹೂವರಸ ಕುಳಿತಿದ್ದ. ಹಾತೊರೆದೆ ಹೂವಿಗೆಂದು, ‘ಶೋಭೆಯಳಿಯದೆ ಹೇಳು, ಹೂವೆದೆಯ ಹಾದ...
`Who breaks a butterfly upon a wheel?’ -Pope ಚಳಿಗೆ ಕಾತರಗೊಂಡು ರಾಜವೀಧಿಯಲಲೆದು ನೆಲಕಂಟಗೊಂಡ ಬಣ್ಣದ ಚಿಟ್ಟೆಯ ನಸುಕಿನಲಿ ನೋಡಿದೆನು,- ಬಂಡಿಗಾಲಿಯದುರುಳಿ ಕೊಲಲದನು ಮಾಡಿ ಮೂರಾಬಟ್ಟೆಯ. ಬಣ್ಣ ಬಣ್ಣದ ಪಕ್ಕಗಳನು ಮಣ್ಣಾಗಿಸಿದ ನರ...







