ಹಂದವೂರದಾಗ ಛಂದಽ ಛಂದದೊಲಿ ಹೂಡಿ| ಗಂದದ ಚಿಕ್ಕಿ ಪುಟೊ ಮಾಡಿ | ಸೋ || ನಂದೀ ಮನಾರಿ ಸೋ ||೧|| ಗಂಧುವದ ಚೆಕ್ಕಿ ಪುಡಿಮಾಡಿ ಮದುಮಗನ| ಅಕ್ಕ ಮಾಡ್ಯಾಳೊಂದಡಽಗೀಯ | ಸೋ || ನಂದೀ ಮನಾರಿ ಸೋ ||೨|| ಹಂದವೂರದಾಗೆ ಛಂದಽ ಛಂದದೊಲಿ ಹೊಡಿ| ಕಪ್ಪುರದ ಚೆಕ...

ಐದು ಅಕ್ಷರದಿಂದ ತೆಯದು ಗಂಧಾಽದಿಂದ| ಮಲ್ಲಿಗ್ಹೂವಿಽನ ಕ್ರಮಽದಿಂದ|| ಮಲ್ಲಿಗ್ಹೂವಿಽನ ಕ್ರಮದಿಂದ ತಂಗೆಮ ತನ್ನ| ರಾಯರ ಶೀಪಾದಾಽ ತೊಳಂದಾಳ ||೧|| ರಾಯರ ಮಗಳ ಬಂಽದು ಪಾದಪೂಜಿ ಮಾಡಟಿಸಗೆ| ಪಾದಲಿ ಕಂಡಾಳಽ ಪದಮವ|| ಪಾದಲಿ ಕಂಡಾಽಳೆ ಪದಮವ ರಾಯಿರ ನಿಮ...

ಸಣ್ಣ ಖಂಡಿಽಕ್ಹಿಡಿದು ಕನ್ನಿ ತಾ ಬರತಾಳಽಽ| ಚೆನ್ನಮಲ್ಲೈನ ನೆನಽವೂತ || ಚೆನ್ನಮಲ್ಲೈನ ನೆನವೂತೀ ಕಳಸಕಽಽ| ಛೆಂದಾಗಿ ನೂಲಾ ತೊಡಽಽಸವ್ವಾ ||೧|| ಹಸರ ಖಂಡಿಽಕ್ಹಿಡಿದು ಕುಸುಮಲ್ಲಿ ತಾ ಬರತಾಳಽಽ| ಬಸವೇಸುರನಿಂಗನ ನೆನವೂತ|| ಬಸವೇಸುರನಿಂಗನ ನೆನವೂತೀ...

ಶಂಡೀಗಿ ಕಡೆದಾರಲ್ಲ; ದೊಡ್ಡ ಶರಣ್ಯಾರು ನೆರದಾರಲ್ಲ| ಒಡ್ಡಿ ಬಾಜೆಂತ್ರೀಲಿ ಪುರವಂತನಾಡಸ್ತ ಐಸೀರಿಲೊಂಟ್ಹಾರಲ್ಲ ||೧|| ಹಡದೀಯ ಹಾಸ್ಯಾರಲ್ಲ| ಮ್ಯಾಲ ಮದುಮಕ್ಕಳ ನಡಿಸ್ಯಾರಲ್ಲ| ಖನ್ನಿ ಪಾರ್‍ವತಿದೇವಿಗಿ ಎಣ್ಣಿ ಪತ್ತಽಲುಡಿಸಿ ಸೋಬಾನ ಪಾಡ್ಯಾರಲ್ಲ ...

ಜಾಣ ಕುಂಬುರನ ಮನಿ ಯಾವ ಕಡಿಗಽದ ಕಪ್ಪುರದ ತಿಪ್ಪಿ ಎಡಽ ಬಲಽ| ಸೋ ||೧|| ಕಪ್ಪುರದ ತಿಪ್ಪಿ ಎಡ ಬಲ ಮಾಡಿಕೊಡು| ಜಾಣ ಕುಂಬಾರನಽ ಮನಿಽಗ್ವ್ಹಾದಽ| ಸೋ ||೨|| ಮುಂಜಾಳಿ ಕುಂಬಾರಣ್ಣಾ ಮಸರ ಬೋನುಂಡಾನ| ಹಾರ್‍ಯಾರಿ ಕೆಸರ ತುಳಽದಾನಽ| ಸೋ ||೩|| ಹಾರಿ ಹ...

ಹಂಚಗೂಣಿ ಬೆಂಚಗೂಣಿ ಮುತ್ತಿನ ನಾಗುರಣಿ ಕುಸುಮಲ್ಲಿ ಭೂದೇವಿಗೆ|| ಮುತ್ತಿನ ಬಟ್ಬಿಟ್ಟು ಮುತ್ತೈದೆಯರೆಲ್ಲಾ ಎಣ್ಣಿ ಹೆಚ್ಚುನು ಬನ್ನಿಽರೆ ||೧|| ಗಂಜಿಽಯ ಸೀರ್‍ಯುಟ್ಟು ಗಂದಽದ ಬಟ್ಟಿಟ್ಟು ಪಿಲ್ಲೆ ಕಾಲುಂಗರಿಟ್ಟಽ || ಮುಡಿಸಣ್ಣ ಮುತ್ತಿಽನ ನತ್ತನಿ...

ದೇವ ದೇವರೆಣ್ಣಿ ಯಾವ ದೇವರೆಣ್ಣಿ| ಮನಿಯ ದೇವಽರ ಮೊದಲೆಣ್ಣಿ| ಹರಹರ ನಮ ಸಿವಗ ನೆಯ್ಯೆಣೆ ||೧|| ಬಾಲಽಗೆಣ್ಣಿ ಹಚ್ಚೊಟಿಗೆ ಬಾಗಿಲಿಗೆ ಬಿಸಿಲ್ಬಂದ| ನಾಲ್ವತ್ತ್ವಾಟಽದ ಎಲಿ ಬಂದ| ಹರಹರ…. ||೨|| ಕಂದಽಗೆಣ್ಣಿ ಹೆಚ್ಚೊಟಿಗೆ ಅಂಗಳಕ ಬಿಸಿಲ್ಬಂದ...

ಕಲ್ಲ ಪೂಜಿ ಮಾಡಲಕ ನನ್ನ್ಯಾರು ಕರಸ್ಯಾರ। ಸಾಲಮ್ಯಾಳಿಗಿ ಮನಿಯವಳ|| ಸುವ್ವಿ ಸುವ್ವಿ ಸುವ್ವಾಲೆ ||೧|| ಸಾಲಮ್ಯಾಳಿಗಿ ಮನಿಯಽಳ ತಂಗೆವ್ವಾ| ಕಲ್ಲ ಪೂಜಿಽಗಿ ಕರಸ್ಯಾಳ|| ಸು…. ||೨|| ಒಳ್ಳ ಪೂಜಿ ಮಾಡಲಿಕ್ಕ ನನ್ನ್ಯಾರು ಕರಸ್ಯಾರ| ಸಾಲ ಮ್ಯಾ...

ಹೆಣ್ಣ ಬೇಡಲಿ ಹ್ವಾದ್ರಽ ಹೆಣ್ಣೇನು ಮಾಡತಿರಲೆ| ಹೆಣ್ಹಾಲಾ ಬಾನಾಽ ಉಣತಿರಲೆ| ಹೆಣ್ಹಾಲಾ ಬಾನಾ ಉಣತಿರಲೆ| ಹೆಣ್ಣಿನ ತಾಯಿ| ಉಮ್ಮಾಽಯದ ನಗಿಯ ನಗತಿರಲೆ ||೧|| ಕೂಸ ಬೇಡಲಿ ಹ್ವಾದ್ರಽ ಕೂಸೇನು ಮಾಡತಿರಲೆ| ಕೂಸ್ಹಾಲು ಬಾನಾಽ ಉಣತಿರಲೆ| ಕೂಸ್ಹಾಲು ಬಾ...

ತಾಯಿ ತಂದಿಽ ಸತ್ತು ಇಂದಿಽಗ್ಹನ್ನೆರಡೊ ವರುಷ || ಇಂದಽ ನಮ ನೀಲ-ಗಂಗನ ಭಾವ ಬಂದಾನಽ | ಸೂಯಿ|| ಇಂದಽ ನಿಮ ನೀಲ-ಗಂಗನ ಖಳುವಬೇಕವ್ವಾ| ಸೂಯಿ|| * * * ಅಚ್ಚೀ ಬಿಂಡಿಽ ಬಿಽಡು ಇಚ್ಚಿ ಬಿಂಡಿಽ ಬಿಽಡು|| ನಡುವಿಽನ ಬಿಂಡ್ಯಾನ ಸೀರಿ ಉಟಿಗ್ವಾ ನಿಲಗಂಗಾ|...