
(ಒಂದು ಸಾಂಪ್ರದಾಯಿಕ ಭಾವನೆಯ ಉತ್ಪ್ರೇಕ್ಷೆ) ೧ ರಾತ್ರಿ ಸತೀಪತಿ ಚಂದಿರನು-ಕತ್ತಲೆಯೆಂಬಾ ಕುಲಟೆಯಲಿ ಇರುಳೆಲ್ಲವು ರತನಾಗಿರುತ-ಪರಿಪರಿಯ ಸರಸವಾಡುತಲಿ ಜಗಕಿಂದು ಮೊಗವ ತೋರಿಸಲು-ಬಗೆಯೊಳು ನಾಚಿಕೆಯೊಂದುತಲಿ, ‘ಮಲಗಿದ ಜನರೇಳುವ ಮೊದಲು ಮರೆಯಾಗುವೆ’ ...
ಏನು ಮುನ್ನಿನ ಜನ್ಮದಲಿ ಪುಣ್ಯಗೈದಿರುವೆ ಇಂಚರದ ಕೊಳಲೆ ನೀನು ? ಗಾನಲೋಲನ ಕೈಯ ಸೇರಿ ಕುಣಿದಾಡಿಸಿದೆ ಕಮಲೋದ್ಧವಾಂಡವನ್ನು! ಆರೋಹಣ ಸ್ವರದಿ ಸುಪ್ತಿಯಲ್ಲಿಹ ಜಗವ ಜಾಗೃತಿಯನೊಂದಿಸಿದೆಯೊ ! ಅವರೋಹಣ ಸ್ವರದಿ ಎಚ್ಚತ್ತ ಜಗದ ಬಗೆ- ಯನ್ನು ನಿನ್ನೆಡೆಗೆಳ...
ಕೊಳಲ ನುಡಿಸು ಕಿವಿಯೊಳನಗೆ ಚೆಲುವ ಮೋಹನಾ! ಕೊಳಲ ನುಡಿಸಿ ಪ್ರೇಮಸುಧೆಯ ಮಳೆಯ ಸುರಿಸಿ ಹೃದಯ ತಾಪ ಕಳೆದು ತಿಳಿವಿನೆಳಬಳ್ಳಿಯ ಬೆಳೆಯಿಸಿ ಬೆಳಗೆನ್ನ ಮನವ…. ಚೆಲುವ ಮೋಹನಾ! ೧ ಎಳೆಯತನದಿ ಹಸುಗಳ ಜಂ- ಗುಳಿಯ ಕಾಯಲೆಂದು ಬನಕೆ ಗೆಳೆಯರೊಡನೆ ಹೋಗ...
ಬಾಡದಿರುವಲರಂತ ಬಗೆಯನ್ನು ಮಾಡಿದರೆ ಬೈಯುವೆನೆ ನಿನ್ನ ತಾಯೇ ? ಹಾಡುತಿಹ ಕೊಳಲಂತ ಕೊರಳನ್ನು ಮಾಡಿದರೆ ಕುಂದಿಡುವನೇನು ತಾಯೇ ? ಮೂಡುವಾ ನೇಸರಿನ ತರ ಮೆಯ್ಯ ಮಾಡಿದರೆ ಮುಚ್ಚರಿಪರಾರು ತಾಯೇ, ಕೋಡುಗಲ್ಲಂತೆನ್ನ ಮನವ ನೆಲೆನಿಲಿಸಿದರೆ ಮುನಿವೆನೇ ಲೋಕಮ...








