ಹುಡುಗ ಹಾಡುತಿತ್ತು, ಮತ್ತೆ ಆಡುತಿತ್ತು, ನಡುನಡುವೆ ಓಡುತಿತ್ತು; ಹುಡಗ ಕೆಲೆಯುತಿತ್ತು, ಹಾಗೆ ಕುಣಿಯುತಿತ್ತು, ಏನೋ ತೊದಲಾಡುತಿತ್ತು. ಏನು ತಿಳಿಯತಿತ್ತೊ! ಏನು ಹೊಳೆಯುತಿತ್ತೊ! ಕೈಹೊಯ್ದು ನಗುತಲಿತ್ತು; ಏನು ನಿಟ್ಟಿಸುತಿತ್ತೊ! ಏನು ದಿಟ್ಟಿಸು...

೧ ಹೊಟ್ಟೆಯೇ ಮೊಟ್ಟಮೊದಲ ಚಿಂತೆಯು ಹೊಟ್ಟೆಯಲ್ಲಿ ಬಂದವರ ಚಿಂತೆಯು ಬೆನ್ನು ಬಿದ್ದು ಬಂದವರ ಚಿಂತೆಯು ಬೆನ್ನು ಹಿಡಿದ ವಿಧಿ ಬಿಡದ ಚಿಂತೆಯು ಕೈಯ ಹಿಡಿವರಾರೆಂಬ ಚಿಂತೆಯು; ಹಿರಿಯರಂಜಿಕೆಯ ಹಿರಿದು ಚಿಂತೆಯು ನೆರೆಯ ಹೊರೆಯವರ ಹೊರದ ಚಿಂತೆಯು ಬದುಕು ...

ನಗುವಿರಲಿ ಅಳುತಿರಲಿ ಎರಡನ್ನು ನಂಬೆ. ನಗೆ ನಂಜು ಅಳು ಮಂಜು ಇದೀತು ಎಂಬೆ. ಮಾತಿರಲಿ ಇರದಿರಲಿ ಎರಡು ಸಮ ತಾನು. ಇದು ಮರುಳು ಅದು ಹುರುಳು ಇರಲಾರದೇನು? ಹೊರಗೊಂದು ಒಳಗೊಂದು ಲಕ್ಷಣವು ಸಾಕು. ಹಾಗೇನು? ಹೀಗೇನು? ಲಕ್ಷ್ಯವೇ ಬೇಕು. *****...

ನನ್ನ ಪಾಡ ತೊಡುವಲ್ಲಿ- ದನಿ ಕುಗ್ಗಿತು, ಬಾತವು ಕಣ್ಣು; ನಿನ್ನ ನಾಡ ನೋಡುವಲ್ಲಿ- ಗಮಗಮ ಹೂ, ಸೀ-ಸವಿ ಹಣ್ಣು ಕೆಂಡ-ಬೆಂಕಿ ಕಂಡ ಅಲ್ಲಿ- ಬರಿ ಇದ್ದಿಲು, ಸುಟ್ಟಿಹ ಬೂದಿ; ಕತ್ತಲಲ್ಲಿ ಕಣ್ತೆರೆದರು- ಕಿಡಿ ಬೆಳಕಿಗು ಸುತ್ತಲು ಹಾದಿ; ನೆರೆಹಾವಳಿ ಮೆ...

ದೊಡ್ಡವರದೆಲ್ಲವೂ ದೊಡ್ಡದೆಂಬುವ ಮಾತು ಸುಳ್ಳಲ್ಲ! ಶ್ರವಣ ಬೆಳಗುಳದಲ್ಲಿ ಒಂದು ಸಾ- ವಿರ ವರುಷ ನಿಂತ ಗೊಮ್ಮಟ! ವಿಜಯನಗರದ- ಲ್ಲಿರುವ ಸಾಸಿವೆ ಗಣಪ! ವಿಜಯಪುರದೊಳಗೀಗು ಆಡಿದ್ದ ನಾಡಾಡಿ ಏಳೇಳು ಸಲ ನಲಿವ ಗೋಳಗುಮ್ಮಟ! ಚೆನ್ನ ಕೇಶವನ ಕಣ್ಣಿದಿರು ಕುಣ...

ಕುಣಿ ಕುಣಿ, ನವಿಲೇ, ಕುಣೀ ಕುಣೀ ಬಿಸಿಲಿಗೆ ಬೇಯುತ ಬಾಯ್ ಬಿಡುತಿದೆ ಇಳೆ, ಕುದಿವುದು ಮೋಡವು, ತೊಟ್ಟಿಡದಿದೆ ಮಳೆ, ಬತ್ತಿತು ಹಳ್ಳವು, ಅತ್ತಿತು ತೊರೆಹೊಳೆ, ತಾಪವ ನೀ ಮರೆ, ಕುಣಿ ಕುಣೀ || ೧ || ನಿನಗಿದೆ ಸಾವಿರ ಕಣ್ಣಿನ ಛತ್ರ, ಮೂಲೋಕಕು ಬೀಸಣಿ...

ಯಾರ ಬರುವ ಕಾಯುತಿರುವೆ? ಯಾರ ದೆಸೆಗೆ ನೋಯುತಿರುವೆ? ಯಾರಿಗಾಗಿ ಸಾಯುತಿರುವೆ? ಜೀವ ಜೀವವೇ! ದಿನಬೆಳಗೂ ನಿರುಕಿಸುವೆ, ದೆಸೆದೆಸೆಗೂ ಗಿರುಕಿಸುವೆ, ಮೊಗಮೊಗಗಳ ಪರಕಿಸುವೆ, ಜೀವ ಜೀವವೇ! ಕುಣಿವುದಾವ ಲಯಕೆ ನೀನು? ತುಡಿವುದಾವ ಜಗಕೆ ತಾನು? ಆಸೆ-ಬಸಿರ...

ಕವಿ:- ನನ್ನ ಹಾಡುಗಳನ್ನೆ ನೀನು ಕೇಳುತ ಕುಳಿತೆ, ನಿನ್ನ ಹಾಡನು ನಾನು ಕೇಳಲೆಂದು ಕುಳಿತೆ, ನನ್ನೀ ಹಿಗ್ಗು ಮರುದನಿಯ ಕೊಡುವಂತೆ ನಿನ್ನ ಕಣ್ಣಲಿ ಕಂಡೆ ಕುಣಿವುದೊಂದು. ರಸಿಕ:- ನನ್ನ ಕಂಗಳ ಕುಣಿತಗಳ ತಾಳಲಯದಲ್ಲಿ ಕಟ್ಟಿರುವೆ ನಿನ್ನ ನವ ಕಾವ್ಯವನ್ನ...

ಇಂದಿನರಸನಿಗೇಕೆ ನಾಳನಾಳುವ ಚಿಂತೆ? ಇಂದು ರಸವನು ಸವಿವುದವಗೆ ಸಾಜ. ಇಂದು ಮುಳುಗದೆ, ನಾಳೆ ಹೊತ್ತು ಮಾಡುವದೇನು? ಹೊತ್ತು ಮೂಡಲು, ಇಂದುಗಿಲ್ಲ ತೇಜ. ನಾಳಮೊಗವನು ಮುಸುಕದಿರಲಿಂದು, ಆ ನಿನ್ನೆ ಸತ್ತ ಹೊತ್ತಿನ ನೆರಳು ಇಂದು ಅಲ್ಲ. ನಾಳಿನ ಭವಿಷ್ಯಕ್...

ಮುತ್ತಲದ ನೆತ್ತರವ ಚಿಮ್ಮಿ ಚಿತ್ರಿಸುವ ಹೂ ಸುಗ್ಗಿಯೊಲುಮೆಯ ತಂದೆ ಅಂಚೆಗಾರ. ಅರಿತೊಂದು ಕುಡಿನೋಟ, ತಿಳಿದೊಂದು ಮುಗುಳುನಗೆ, ಬರುವ ಬೆಳಕಿನ ಬನದ ಸಂಚಕಾರ. ತನ್ನ ಸನ್ನಿಧಿಯಲ್ಲಿ ಜೀವಕೋಟಿಯಲೊಂದು ಜೀವ ಹೂ ಬಿಡಲು ಈ ಜನ್ಮ ಧನ್ಯ. ಒಂದರೆಕ್ಷಣದಲ್ಲಿ ...

1...34567...16