ಮುಗಿಲಿನಲಿ ಮಳೆಬಿಲ್ಲ ಕಾಣುತಲೆ ನಾನು ನೆಗೆದು ಕುಣಿದಾಡುವುದು ಹೃದಯ ತಾನು! ಅಂತೆ ಇದ್ದುದು ಮೊದಲು ಚಿಕ್ಕಂದಿನಂದು; ಅಂತೆ ಇಹುದೀ ಮೆರೆವ ಯೌವನದಲಿಂದು, ಅಂತೆ ಇರಲೆನಗಿನ್ನು ಮುಪ್ಪಿನಲೆ ಮುಂದೆ- ಅಂತಿರದೆ, ಸಾವು ಬರಲಂದೆ! ಮನುಜನಿಗೆ ಮಗು ತಂದೆ &...

ಹೊಳೆ ಬೆಳಗಿ ಜಾರುವುದು, ಗಿಳಿ ನೆಗೆದು ಹಾರುವುದು. ಬೆಳೆದ ಹೊಲ ಬಿಸಿಲಲ್ಲಿ ಮಲಗಿರುವುದು; ತಿಳಿಯಾದ ಬಾನಿನಲಿ ಬಿಳಿಮುಗಿಲು ತೇಲುವುದು, ಮಳೆಸೋತ ದಳದಂತೆ ಕದ್ದಡಗಿತು! ಕರೆಯ ಹೊಂಗೆಯ ಮರದ ನೆರಳ ಸೋಂಪಿನೊಳೊರಗಿ ಕುರುಬಹಯ್ದನು ಕೊಳಲನೂದುತಿರಲು, ಕೊ...

ವಸಂತ ಬಂದ, ಋತುಗಳ ರಾಜ ತಾ ಬಂದ, ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ, ಚಳಿಯನು ಕೊಂದ, ಹಕ್ಕಿಗಳುಲಿಗಳೆ ಚೆಂದ, ಕೂವೂ, ಜಗ್ ಜಗ್, ಪುವ್ವೀ, ಟೂವಿಟ್ಟವೂ! ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ, ಇನಿಯರ ಬೇಟ; ಬನದಲ್ಲಿ ಬೆಳದಿಂಗಳೂಟ, ಹೊಸ ಹೊಸ...

ನರಮುಪ್ಪು ಯೌವನಕೆ ಒಲ್ಲದೊಡನಾಟ ; ಯೌವನವು ಸುಮ್ಮಾನ, ಮುಪ್ಪು ಮಿಡುಕಾಟ; ಯೌವನವು ಸಿರಿ ಸುಗ್ಗಿ ಮುಪ್ಪು ಬರಿ ಮಾಗಿ; ಯೌವನವು ಶೃಂಗಾರಿ, ಮುಪ್ಪು ತಲೆದೂಗಿ. ಯೌವನಕೆ ಚೆಲ್ಲಾಟ, ಮುಪ್ಪಿಗುಸಿರೆಳೆದಾಟ, ಹುಲ್ಲೆನಗೆ ಯೌನವು. ಹೆಳವು ಮುಪ್ಪು; ಯೌನದ ...

ಅಡವಿಮರದಡಿಯಲ್ಲಿ ನನ್ನೊಡನೆ ಕೆಡೆದಲ್ಲಿ ಇನಿಯ ಹಕ್ಕಿಯ ಕೊರಲ ತನ್ನ ಕೊರಲಲಿ ತಂದು ನಲಿವನಾರೈ- ಇತ್ತ ಬಾ, ಇತ್ತ ಬಾ, ಇತ್ತ ಬಾರೈ, ಎತ್ತ ನೋಡಿಲ್ಲೆಲ್ಲ, ಮತ್ತು ಹಗೆಯೊಂದಿಲ್ಲ, ಕೊರೆವ ಚಳಿ ಬಿರುಗಾಳಿಯಲ್ಲದಿಲ್ಲೈ. ಆಸೆಬಲೆಯನು ತೊಲಗಿ, ಬಿಸಿಲ ಕಾಯ...

ಮದರಾಸು ನಗರದಲ್ಲಿ ಸೇರಿದ ೨೯ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಳಿಸಿದ ಹಾರೈಕೆ. ದ್ರಾವಿಡಗಣ-ತ್ರಿಪದಿ, ಕುರಳು ಧಾಟಿ ೧. ಕನ್ನಡನುಡಿಪಯಿರ್ ಮುನ್ನಡೆ ತೆನೆತುಂಬಿ, ಪೊನ್ನಡಕಿಲ್ಗಂ ಪೊನ್ನ ಕ್ಕೆ. ೨. ಬೀಡುಂ ಬಯಲ್ ಮಲೆ ಕುಡಿವಾಳ್ಕೆ ಕರ್‍ಬು ಜೇನ...

ಶ್ರೀಯವರು ತಮಿಳು ಸಾಹಿತ್ಯದ ಸಾರವನ್ನು ಕನ್ನಡಿಗರಿಗೆ ಒದಗಿಸಿಕೊಡಬಯಸಿ ಒಂದೆರಡು ಮಹಾಗ್ರಂಥಗಳನ್ನು ಕನ್ನಡಕ್ಕೆ ಇಳಿಸಿದ್ದರು. ನಮ್ಮ ದುರ್ದೈವದಿಂದ ಎಲ್ಲವೂ ಗೆದ್ದಲಪಾಲಾಗಿ ಒಂದೆರಡು ತುಣುಕುಗಳು ಮಾತ್ರ ಉಳಿದಿವೆ. “ಶಿಲಪ್ಪದಿಗಾರಂ”...

(ಮಯಿ ಸಂನ್ಯಸ್ಯ ಯುದ್ಧ್ಯಸ್ವ) ಮಂಗಳಂಗಳನಿಳೆಯ ಸರ್‍ವ ಜ ನಂಗಳಿಗೆ ನಲಿದೀವ ನಿತ್ಯನೆ, ಮಂಗಳಾತ್ಮನೆ, ಕೃಪೆಯ, ಮುಕ್ತರ ಬೀಡೆ, ಕಾಪಾಡು. ಕಂಗೆಡುವ ಮದದುಬ್ಬಿನಲಿ ರಣ ದಂಗಣದ ಕಾಳ್ಗಿಚ್ಚನೆಬ್ಬಿಸಿ ಭಂಗಪಡುವ ದುರಾಸೆಯಡಗಿಸಿ ನಡಸು ಮಕ್ಕಳನು. ಹಿಂದೆ ಅ...

(ಸಾವಿರ ವರ್ಷದ ಹಬ್ಬದಲ್ಲಿ) ಪದಿನೂರು ನೆರೆಯೆ, ಪಿರಿದೊಸಗೆ ಮೆರೆಯೆ, ಪುಲಿಗೆರೆಯ ತಿರುಳ ಕನ್ನಡದ ಪುರುಳ ರಸರಸದ ಬಾವಿ ಮನೆಮನೆಗೆ ತೀವಿ ತನ್ನೆರಡು ಪಾಟ್ಟು ಮೆಸೆಯೆ, ನೆಲನೊಸೆಯೆ, ತನ್ನ ಸೆರಪೇ ಸೆರಪು, ತನ್ನ ತೇಜಮೆ ತೇಜಮ್ ಎನೆ ಬೆಳಪ ಪಂಪನ್ ಎಮ್...

[ಮೈಸೂರು ವಿಶ್ವವಿದ್ಯಾನಿಲಯದ ಬೆಳ್ಳಿಯ ಹಬ್ಬದ ಕವಿಸಮ್ಮೇಳನದಲ್ಲಿ ಓದಿದ್ದು] ಓಂ, ಸಹ ನಾವವತು ; ಸಹ ನೌ ಭುನಕ್ತು; ಸಹ ವೀರ್‍ಯಂ ಕರವಾವಹೈ ; ತೇಜಸ್ವಿನಾವಧೀತಮಸ್ತು ; ಮಾ ವಿದ್ವಿಷಾವಹೈ. ಓಂ ಶಾಂತಿಃ ಶಾಂತಿಃ ಶಾಂತಿಃ ೧ ಮೊತ್ತಮೊದಲೇ, ಬೆಳಕಾಗಲೆಂ...