ಕೇಳಿರಣ್ಣ ಕೇಳಿರಿ

ಕೇಳಿರಣ್ಣ ಕೇಳಿರಿ ದೀನರ ವ್ಯಥೆಯ ನೋಡಿರಣ್ಣ ನೋಡಿರಿ ಹೀನರ ಕಥೆಯ || ಅಂತ್ಯಕಾಲದ ದೀಪ ಜನರಲ್ಲೆಜುಕೇಷನ್ನು ಎಂಥ ದುಸ್ಥಿತಿ ಗ್ಯಾಟಿನಿಂದಲ್ಲದಿನ್ನೇನು ತಲೆ ಕತ್ತರಿಸಿ ಪಾದಕೆ ನೀರೆರದರೇನು ಹೈಯರೆಜುಕೇಷನ್ನಿನ ಜೀವ ಉಳಿದೀತೇನು || ಡಾಟುಕಾಮಿನಿಂದ ಬದುಕೆಲ್ಲ...

ಕಾವ್ಯವೆಂದರೆ

ಏನೆನ್ನಲಿ ಏನೆನ್ನಲಿ ಎನ್ನ ಮನದಮನ್ವಂತರದ ಧಾರೆಗಿನ್ನು ನಾನು ಬರಿದೆ ಬರೆವರ ಪದದಿ ಕಟ್ಟುವುದೆಂತೀ ಬುದುಕಿನಕ್ಕರವ ನಾನು-ನೀನು || ಬರೆದುದೆ ಬದುಕಲ್ಲ ಬದುಕಿದ್ದು ತಾ ನಿಲುಕಲ್ಲ. ಕಾವ್ಯವೆಂದರೆ ಅದುವೆ ಜನನಮರಣದಾಚೆ ಈಚೆ ಬಾಳು || ಹೇಳುವರು-ಹೇಳಿದ್ದು,...

ಒಂದು ಹೆಣಕೆ ಎರಡು ಹೆಣ !

ಒಂದು ಹೆಣಕೆ ಎರಡು ಹೆಣವು ದಣಿವುದ್ಯಾತಕೆ ನಾಗಲಿಂಗಯೋಗಿ ತಾನು ತಿರುಗುವುದ್ಯಾತಕೆ ||ಪ|| ದುರಿತಭವದ ಯೋಗದಿಂದ ವಾದವ್ಯಾತಕೆ ವಾದದಿಂದ ಸಿದ್ಧಯೋಗ ಮಾಡುವುದ್ಯಾತಕೆ ||೧|| ನಾಗಲಿಂಗಯೋಗಿ ತಾನು ತಿರುಗುವುದ್ಯಾತಕೆ ಬಗಳಾಮುಖಿಯ ಮಗನಕೂಡ ರಗಳಿಯಾತಕೆ ||೨|| ಹಸಿವು ತೃಷಿಯಗಳನು...

ಮ್ಯಾಸ್ಸೆ ಫರ್ಗ್ಯುಸನ್

ನೀಲಿಹೂಗಳ ಬುಡ್ಡೆಸೊಪ್ಪನ್ನೋ, ಹೂಳೆತ್ತಿದ ಕೆರೆಮಣ್ಣನ್ನೋ, ಇಟ್ಟಿಗೆಗಳನ್ನು ತುಂಬಿಕೊಂಡೋ ಆ ಕೆರೆದಡದ ಮೇಲೆ ಸಾಗಿಹೋಗುವ ಮ್ಯಾಸ್ಸೆ ಫರ್ಗ್ಯುಸನ್ ಟ್ರ್ಯಾಕ್ಟರ್ ಅನ್ನು ಆಗಾಗ ನೋಡುತ್ತಿರುತ್ತೇನೆ. ಬಟವಾಡೆಯ ವಿಚಾರದಲ್ಲೋ, ಹೆಂಡಗಡಂಗಿನವನ ಜೊತೆ ಕಿರಿಕ್ ಮಾಡಿಕೊಂಡೋ-ಹೀಗೆ ಒಂದಿಲ್ಲೊಂದು ತರಲೆಗಳಲ್ಲಿ ಸಿಕ್ಕಿಕೊಂಡು...

ನಿನ್ನೊಂದು ನಗೆ

ಕ್ಷಮಿಸು ಗೆಳತಿ ನಾನಿಂದು ಮಾಡಿದವಮಾನವ ನಿನ್ನೆದುರು ನಾನು ಕ್ಷಣ ಕ್ಷಣಕೂ ಅಲ್ಲ ಮಾನವ || ಅರಿಯದಾದೆ, ನಿನ್ನ ಎಲ್ಲರೆದುರು ಅಸವಲ್ಲದವಳೆಂದರೂ ನೀನು ವಹಿಸಿದ ಮೌನವಿಂದು ಕೊಲ್ಲುತಿದೆ ನಾನೆಂಥವನೆಂದು || ನನ್ನ ಕ್ಷಮೆಗೆ ಸೂಚನೆ ನಿನ್ನಿಂದೇಗೆ...

ಚಂದನ ಗೀತ

ಇಳಾ ನಿನ್ನ ಮಹಾ ಕಾವ್ಯಕೆ ಇದುವೆ ನನ್ನಯ ಪಲ್ಲವಿ ಬಾನುವಿನ ಪ್ರಣಯ ಪರಿಧಿ ಕಾಣಬಲ್ಲವನೇ ಭವಿ?|| ನಿನ್ನ ಅವನ ಆಂತರ್ಯದ ಅರಿವಿನರಿವು ದುಸ್ತರ ಅಂತರಂಗದಂತರಾಳದಾಳ ಎನಿಎನಿತೊ ಬಿತ್ತರ|| ಅವನ-ನಿನ್ನ ಮೌನ `ವಿಶ್ವ' ಜಗದ ಜಗಕೆ...

ಉತ್ತರಾಧಿಕಾರಿ

ಅಮರಪ್ಪನವರು ತಮ್ಮ ಇಡೀ ಆಯುಷ್ಯವನ್ನು ರಾಜಕೀಯದಲ್ಲೇ ಕಳೆದರು.  ಅಧಿಕಾರದ ಸುಖ ಅನುಸರಿಸುವರು.  ಸಾಕಷ್ಟು ಧನ, ಕನ, ಸಂಪತ್ತು ವರ್ಧಿಸಿಕೊಂಡರು.  ದೆಹಲಿ, ಬೆಂಗಳೂರು, ಸ್ವಂತ ಊರು ಎಲ್ಲೆಂದರಲ್ಲಿ ಬಂಗ್ಲೆ ಪ್ಲಾಟು ಹೊಂದಿದ್ದರು. ದೇಶದ ರಾಜಕಾರಣಕ್ಕೆ ಅನಿವಾರ್ಯವೆನ್ನುವಂತಿದ್ದ...

ಕುಲಕರ್ಣಿ ಕೊಟ್ಟ ಪಾವಲಿ ರೊಕ್ಕ

ಕುಲಕರ್ಣಿ ಕೊಟ್ಟ ಪಾವಲಿ ರೊಕ್ಕದೀ ಬ್ರಹ್ಮನೆಲಗಾಂಬುದ್ಯಾಂಗಲೋ ಮನಸೇ ಬಲುದಿನದ ಸಲಗಿಯಲಿ ಸಾಲಿ ಬರಸಿದ ಸ್ನೇಹ ತಿಳಿದು ಇಲ್ಲಿಗೆ ಬಂದೆಲ್ಲೇ ಮನಸೇ ||೧|| ಪೊಡವಿಯೊಳು ಗುಡಗೇರಿ ಹಿರಿಯ ಪೋಲೀಸ- ಗೌಡ ಕರೆದರೆ ಇಲ್ಲಿಗೆ ಬಂದೆಲ್ಲೇ ಮನಸೇ...

ಸಿಲ್ವರ್ ಮರಗಳ ದೊಡ್ಡ ಕಾಡು

ಅಲ್ಲಿ-ಚರ್ಚಿನಲ್ಲಿ, ಸಿಲ್ವರ್ ಮರಗಳ ದೊಡ್ಡ ಕಾಡು ಬೆಳೆದುಕೊಂಡಿದ್ದರಿಂದ ವರ್ಷಾ ವರ್ಷ ಅವುಗಳನ್ನು ಕಡಿದು, ಸವರಲಾಗುತ್ತಿತ್ತು. ಆ ಆಶ್ರಮಕ್ಕೆ ನರ ನಾಡಿಗಳೇ ಇಲ್ಲದ ಕ್ರಿಮಿನಲ್‌ಗಳು, ನಿವೃತ್ತ ಸೂಳೆಯರು, ಎಲ್ಲಾ ವಿಧದ ಅಂಗವೈಕಲ್ಯ, ಮನೋವೈಕಲ್ಯಗಳಿಂದ ನರಳುವ ದಿಕ್ಕಿಲ್ಲದ...

ನಿನ್ನ ನೆನಪು

ನಿನ್ನ ನೆನಪನ್ನು ನೆನಪೆನ್ನಲೆ ? ಇಲ್ಲ, ನೆನಪೂ ನಾಚಿತಲ್ಲ ! ನಿನ್ನ ನೆನಪನ್ನು ನೀನೇ ಎನ್ನಲೆ ? ಇಲ್ಲ, ಅದೂ ಎಂದಿತು ಒಲ್ಲೆ ! || ಜಗದ ಯಾವುದಕೆ ಹೋಲಿಸಲಿ ನೀನವಕೆ ಸಮವಲ್ಲ ಮೊಲ್ಲೆ...