ಕ್ಷಮಿಸು ಗೆಳತಿ ನಾನಿಂದು
ಮಾಡಿದವಮಾನವ
ನಿನ್ನೆದುರು ನಾನು ಕ್ಷಣ
ಕ್ಷಣಕೂ ಅಲ್ಲ ಮಾನವ ||

ಅರಿಯದಾದೆ, ನಿನ್ನ ಎಲ್ಲರೆದುರು
ಅಸವಲ್ಲದವಳೆಂದರೂ
ನೀನು ವಹಿಸಿದ ಮೌನವಿಂದು
ಕೊಲ್ಲುತಿದೆ ನಾನೆಂಥವನೆಂದು ||

ನನ್ನ ಕ್ಷಮೆಗೆ ಸೂಚನೆ ನಿನ್ನಿಂದೇಗೆ
ನಿನ್ನ ಸ್ಥಿತಿ ನೆನೆದು ನನ್ನೆದೆ ಬೇಗೆ
ಜ್ವಾಲೆ ಹೊಮ್ಮಿಸುತಿದೆ ಘೋರಾಗಿ
ನಂದಿಸಬಲ್ಲದೆಲ್ಲ ನಿನ್ನೊಂದು ನಗೆ ||

*****