ಕೊಡಗಿನ ಸುಂದರ ಕತೆಗಾರ್ತಿ ಗೌರಮ್ಮ
ಕನ್ನಡದ ಕತೆಗಾರ್ತಿಯರಲ್ಲಿ ಸ್ವಂತಿಕೆಯ ದನಿಯನ್ನು ಅಲ್ಪಕಾಲದಲ್ಲೇ ಮೂಡಿಸಿದ ಇಬ್ಬರು ಅಲ್ಪಾಯುಷಿಗಳೆಂದರೆ ಶ್ಯಾಮಲಾದೇವಿ ಮತ್ತು ಗೌರಮ್ಮ ತತಕ್ಷಣ ನೆನಪಾಗುತ್ತಾರೆ. ಶ್ಯಾಮಲಾ ಅವರಿಗೆ ಹೋಲಿಸಿದರೆ ಗೌರಮ್ಮ ಕನ್ನಡದ ಓದುಗರಿಗೆ ಪರಿಚಿತರು. ಕನ್ನಡದ ಕತೆಗಳನ್ನು ಕಾಲಾನುಕ್ರಮಣಿಕೆಯಿಂದ ಓದುತ್ತಾ ಬಂದ...