ಇದು ಎಂಥ ಶಾಪ

ಇದು ಎಂಥ ಶಾಪ ಈ ಯಕ್ಷನಿಗೆ ಪಾಪ ತನ್ನ ನಲ್ಲೆಯ ಬಳಿಯಿಂದ ದೂರವಿರಬೇಕಾದ ವಿರಹ ತಾಪ ಈ ಇಂಥ ಆಷಾಢ ದಿನಗಳಲ್ಲೇ ಹಾತೊರೆಯುವನು ಕಾತರಿಸುವನು ಒಂದು ಮೋಡವ ಕರೆದು ಕೋರುವನು ಮೋಡವೇ ಆಕಾಶದ ಪವಾಡವೇ...

ಹತ್ತವತಾರಗಳು ಆಗಿಹೋದರೂ

ಹತ್ತವತಾರಗಳು ಆಗಿಹೋದರೂ ಅವತಾರಗಳಿನ್ನೂ ಕೊನೆಗೊಂಡಿಲ್ಲ ಶತಕೋಟಿ ದೇವರುಗಳು ಬಂದು ಹೋದರೂ ದೇವರುಗಳಿನ್ನೂ ಮುಗಿದಿಲ್ಲ ಅವತಾರದವತಾರ ಇಲ್ಲಿ ಪ್ರತಿಯೊಬ್ಬನೂ ಯಾವ ಯಾವುದೋ ವರಾತ ಆರಂಭಿಸಿದ ಸ್ವಯಂಚಾಲಿತ ಲೀಲೆಯ ನಿಲ್ಲಿಸಲು ತಾನೆ ಮರೆತ ಯುಗದ ಗಾಲಿಗಳ ಮೇಲೆ...

ಬೆಳಕ ನೀ ನೋಡಬೇಕೆ

ಓಡುತಿರುವ ಗಾಡಿಯೊಳಗೆ ಇರುಳು ಹೆಪ್ಪುಗಟ್ಟುತಿದೆ ಒಳದೀಪಗಳನುರಿಸಿದರೆ ಹೊರಜಗವೇ ಮಾಯ ಕಿಟಕಿಗಾಜುಗಳ ಗೋಡೆಯಾಗಿ ಎಲ್ಲಿ ನೋಡಿದರೂ ಅಲ್ಲಿ ನೋಡಿದವನ ಮುಖವೆ ತೋರುವುದು ಲೋಕ ಮುಚ್ಚಿಕೊಳ್ಳುವುದು ಅಲ್ಲಿ ಹೊರಗೆ ಮಿನುಗುವ ಸಣ್ಣ ಮಿಂಚು ಹುಳಗಳೋ ಅಲ್ಲಿ ಮೇಲೆ...

ಅರ್‍ಧಕೆ ನಿಂತ ಹಾಡುಗಳೆ

ಅರ್‍ಧಕೆ ನಿಂತ ಹಾಡುಗಳೆ ಹಾಗೇ ನೀವಿರುವರೆ ಶಬ್ದ ಮರೆತವೊ ಅರ್ಥ ಸಿಗದಾದುವೊ ಹಾಗೇ ನೀವಿರುವರೆ ಅರ್‍ಧಕೆ ನಿಂತ ಇಮಾರತುಗಳೇ ಹಾಗೇ ನೀವಿರುವರೆ ಯಾರು ಕಲ್ಪಿಸಿದ್ದರೋ ಯಾರು ಬಯಸಿದ್ದರೋ ಹಾಗೇ ನೀವಿರುವರೆ ಅರ್‍ಧಕೆ ನಿಂತ ಪತ್ರಗಳೆ...

ತೇಲುತಿರುವ ಮುಗಿಲುಗಳಿಗೆ

ತೇಲುತಿರುವ ಮುಗಿಲುಗಳಿಗೆ ಬಳಿದನೊಬ್ಬ ಬಣ್ಣವ ಎಂಥ ಬಣ್ಣ ಅಂಥ ಬಣ್ಣ ಇನ್ನೆಲ್ಲೂ ಕಂಡುದಿಲ್ಲ ಹೂವುಗಳಿಗೂ ಹಚ್ಚಿಯಾಯ್ತು ಮರಗಳಿಗೂ ಮೆತ್ತಿಯಾಯ್ತು ಮಿಕ್ಕುದಿನ್ನು ಮಣ್ಣಿಗೆ ಚಂದವುಳ್ಳ ಹೆಣ್ಣಿಗೆ ಹಾರುತಿರುವ ಹಕ್ಕಿಗಳಿಗೆ ಇತ್ತನೊಬ್ಬ ರಾಗವ ಎಂಥ ರಾಗ ಅಂಥ...

ತಾರನೆ ಶ್ರೀರಾಮ

ತಾರನೆ ಶ್ರೀರಾಮ ಸೀತೆಯು ಬಯಸಿದ ಮಾಯಾಮೃಗವ ತಂದೀಯನೆ ಆ ರಾಮ ಪರ್‍ಣಕುಟಿಯ ಸುತ್ತಲು ಕುಣಿಯುವುದಿದು ಜಿಂಕೆಯ ಹಾಗಿರುವುದು ಆದರು ಎಂಥಾ ಜಿಂಕೆಯಿದು ಬಂಗಾರದ ಜಿಂಕೆಯಿದು ಕಿನ್ನರ ಲೋಕದ ಜಿಂಕೆಯಿದು ಇಂದ್ರ ಲೋಕದ ಜಿಂಕೆಯಿದು ಸೂರ್ಯ...

ಮುಖವ ಕನ್ನಡಿಯಲ್ಲಿ

ಮುಖವ ಕನ್ನಡಿಯಲ್ಲಿ ನೋಡುವಿರಿ ನೋಡಿ ಬಗೆಬಗೆಯಲ್ಲಿ ತೀಡುವಿರಿ ಮನವ ಯಾವುದರಲ್ಲಿ ನೋಡುವಿರಿ ಮನದ ಡೊಂಕನು ಎಂತು ತಿದ್ದುವಿರಿ ಅಂತರಾತ್ಮದ ಬೆಳಕಿಲ್ಲದೆ ನದಿಯಲಿಳಿದು ಮೈಯ ತೊಳೆಯುವಿರಿ ಕೆಸರು ಕೊಳೆಯನ್ನು ಅಲ್ಲಿ ಕಳೆಯುವಿರಿ ಮನವ ಯಾವುದರಲ್ಲಿ ತೊಳೆಯುವಿರಿ...

ಮಾತುಮಾತಿಗೆ

ಮಾತುಮಾತಿಗೆ ಸಿಟ್ಟುಮಾಡಿದಿರಿ ಪಾತ್ರೆ ಪಗಡೆಗಳ ಒಡೆದುಹಾಕಿದಿರಿ ಕಂಡಕಂಡವರಿಗೆ ಕೆಂಡವಾದಿರಿ ಸಿಟ್ಟು ನಾಶಕೆ ಮೂಲವೆಂದ ನಮ್ಮ ಬುದ್ಧನ ಕೇಳಿದಿರ ಅದು ಬೇಕು ಇದು ಬೇಕು ಎಲ್ಲ ಬೇಕೆಂದಿರಿ ಎಷ್ಟು ದೊರಕಿದರು ಇನ್ನಷ್ಟು ಬೇಕೆಂದಿರಿ ಸಾಕೆಂಬ ಪದವನ್ನೆ...

ಹಾಲಿಂದ ಮಾಡಿದರೊ

ಹಾಲಿಂದ ಮಾಡಿದರೊ ನಿನ್ನ ಮಲ್ಲಿಗೆ ಹೂವಿಂದ ಮಾಡಿದರೊ ಈ ಇಂಥ ಅಂದವ ಹೇಗೆ ಮಾಡಿದರೋ ಕಸ್ತೂರಿಯಿಂದ ಮಾಡಿದರೊ ಚಂದನದಿಂದ ಮಾಡಿದರೊ ಪಾರಿಜಾತದ ಗಂಧದಿಂದ ಮಾಡಿದರೊ ಈ ಮೈಯ ಸೌಗಂಧವ ಹೇಗೆ ಮಾಡಿದರೋ ಬಿದಿರೆಲೆಯಿಂದ ಮಾಡಿದರೊ...

ಏನ ಮೋಹಿಸಲೋ

ಏನ ಮೋಹಿಸಲಿ ನಾನೇನ ಮೋಹಿಸಲಿ ಹೂವ ಮೋಹಿಸಲೋ ಗಂಧವ ಮೋಹಿಸಲೋ ಹೂಗಂಧ ಒಂದಾದ ಬೆಡಗ ಮೋಹಿಸಲೋ ಹೆಣ್ಣ ಮೋಹಿಸಲೋ ಸೌಂದರ್ಯ ಮೋಹಿಸಲೋ ಹೆಣ್ಣು ಸೌಂದರ್ಯ ಒಂದಾದ ಸೊಬಗ ಮೋಹಿಸಲೋ ಭೃಂಗವ ಮೋಹಿಸಲೋ ನಾದವ ಮೋಹಿಸಲೋ...