ಮೃತ್ಯು

ಪ್ರತಿದಿನ, ಪ್ರತಿಕ್ಷಣ ಅದೇ ಕೆಲಸ; ಹುಟ್ಟಿನ ಮನೆಗೆ ಭೇಟಿ ಕೊಡುವುದು, ಸಂಭ್ರಮದ ತುಣುಕನ್ನು ಮೆದ್ದು, ತನ್ನದೊಂದು ಬೀಜ ನೆಟ್ಟು, ಗುಟ್ಟಾಗಿ ಓಡಿಬರುವುದು. ಮತ್ತೆ ಅದೇ ಕೆಲಸ ಕಾಯುವುದು ನೆಟ್ಟ ಬೀಜ ಫಲಕೊಟ್ಟು ಹಣ್ಣಾಗಿ ಕಳಚಿಕೊಳ್ಳುವುದನ್ನೇ...

ರಸ್ತೆ ಹೋಗುವುದೆಲ್ಲಿಗೆ?

ಬೂದು ಬಣ್ಣದ ಚಳಿಗೆ ಮುಂಜಾವದ ತುಟಿಯೊಡೆದಿದೆ ಆಕಾಶ ಚಂದಿರನನ್ನು ಹಣೆಯಲ್ಲಿ ಧರಿಸಿ ನಸುನಗುತಿದೆ ಮಿಲ್ಲುಗಳಿಂದ ಹೊಗೆಯನ್ನೂ ಹುಣ್ಣುಗಳನ್ನೂ ಬಳುವಳಿಯಾಗಿ ಪಡೆದಿರುವ ಭದ್ರೆ ಮುದಿಸೂಳೆಯ ಹಾಗೆ ನಡುಗುತ್ತಿದ್ದಾಳೆ ಜಿಪುಣಶೆಟ್ಟಿ ಸೂರ್ಯನದು ತೂಕದ ವ್ಯವಹಾರ ಒಂದೊಂದೆ ಕಿರಣ...

……ಹೋಗಿ ಬಿಡು

ನೋಡು- ಕಣ್ಣು ತುಟಿ ಮೂಗು ಕೈಯಿ ಮೈಯಿ ಏನಿಲ್ಲದಿದ್ದರೂ ಇದ್ದ ಹಾಗೆಯೇ ಕಾಣಿಸುವ ಚಂದ್ರನನ್ನು ಕಡೆಯ ಬಾರಿ ಎಂಬಂತೆ ನೋಡಿ ಬಿಡು. ಬೆಂಕಿಯನ್ನು ಬೆಳಕನ್ನು ಬಣ್ಣವನ್ನು ಬೆಡಗನ್ನು ತುಂಬಿಕೊಂಡಿರುವ, ನಿನ್ನೊಳಗೆ ಬೆರಗನ್ನು ಭಯವನ್ನು ಹುಟ್ಟಿಸಿದ...

ಕವಿಗೋಷ್ಠಿಯಲ್ಲಿ….

ಢಣಢಣ ಗಂಟೆ ಬಾರಿಸಿತು ಎಲ್ಲರೂ ಸಾಲಾಗಿ ಕುಳಿತರು ಬಣ್ಣ ಬಣ್ಣದ ಕವಿತೆಗಳು ಒಂದೊಂದಾಗಿ ವೇದಿಕೆಗೆ ಬಂದವು. ಕೆಲವು ಕವಿತೆಗಳು ಹೂಗಳಂತೆ ಅರಳಿದರೆ ಮತ್ತೆ ಕೆಲವು ನದಿಗಳಂತೆ ಹರಿದವು. ಕೆಲವು ಕವಿತೆಗಳು ನಕ್ಷತ್ರಗಳಂತೆ ಮಿನುಗಿದರೆ ಮತ್ತೆ...

ಹಸಿವು

ಮುತ್ತಿನ ಹನಿಗಳನ್ನುಕೆಂಡದ ತುಟಿ ಹೀರಿತು. ಮುಗುಳು ನಕ್ಕ ಚಿಗುರನ್ನುನೆಲ ನಿಷ್ಕರುಣೆಯಿಂದ ನುಂಗಿತು. ಹಸಿದ ಒಡಲು ಬಾದಾಮಿಕಣ್ಣುಗಳನ್ನೂ ಬಿಡಲಿಲ್ಲ. ಒಂದು ಹಿಡಿ ಮೆದುಳುಜಗತ್ತಿನ ನಾಡಿಯಾದನೀರು, ನೆಲ, ಆಕಾಶಕೊನೆಗೆ-ಪ್ರೇಮವನ್ನೂ ಧೂಳಾಗಿಸಿತು. ತಾಯಿಯ ವಾತ್ಸಲ್ಯಪೂರಿತಕಣ್ಣುಳ್ಳ ಸೂರ್ಯನನ್ನೇ ಕೇಳಿದೆ-ನಿನಗೇನಾದರೂ ಹೇಳುವುದಿದೆಯೇ?...

ಪ್ರೇಮ ಮತ್ತು ದುಃಖ

ಬಣ್ಣದ ಸಂಜೆಯನ್ನು ನೋಡುತ್ತಾ ನಿಂತಿದ್ದೆ- ನೋಡುತ್ತಿರುವಂತೆಯೆ ಸಿಡಿಲ ಚೂರೊಂದು ಉರಿದು ಕಪ್ಪಾಯಿತು. ಮೊರೆಯುವ ಕಡಲನ್ನು ನೋಡುತ್ತಾ ನಿಂತಿದ್ದೆ- ನೋಡುತ್ತಿರುವಂತೆಯೆ ತತ್ತರಿಸುವ ಅಲೆಯೊಂದು ಎತ್ತರಕೆ ನೆಗೆದು ಕೆಳಗೆ ಬಿತ್ತು. ಹೆಮ್ಮರವೊಂದನ್ನು ನೋಡುತ್ತಾ ನಿಂತಿದ್ದೆ- ನೋಡುತ್ತಿರುವಂತೆಯೆ ಒಂದರ...

ಹುಡುಗಿ ಮತ್ತು ದಾಸವಾಳ

ಟೀಚರ್‍….ಆವತ್ತು ನಾನು ತಂದುಕೊಟ್ಟ ಹೂವನ್ನುನೀವು ಮುಡಿಯಲಿಲ್ಲ. ನಿಮ್ಮ ಕುಂಕುಮದ ಬೊಟ್ಟಿಗೆನಿಮ್ಮ ಎತ್ತರದ ತುರುಬಿಗೆತೊಟ್ಟುಸಹಿತ ಕಿತ್ತುತಂದಕೆಂಪು ದಾಸವಾಳವನ್ನುನೀವು ಮುಡಿಯಲಿಲ್ಲ. ನಾನು ನಿಮ್ಮನ್ನು ಪ್ರೀತಿಸಿದ್ದೆನಮಗಾಗಿ ನೀವು ಪಾಠ ಹೇಳುವಗಣಿತವನ್ನೂ ಪ್ರೀತಿಸಿದ್ದೆಆದರೂ ನೀವು ಹೂವು ಮುಡಿಯಲಿಲ್ಲ. ಮರುದಿನ ನೀವೆ...

ನಾನು ಸೂರ್ಯ

ಎಲ್ಲ ಹೇಳುತ್ತಾರೆ ನಾನುಹಕ್ಕಿಗಳ ಗಡಿಯಾರನನಗೊ….ಚಿಲಿಪಿಲಿ ಸದ್ದುಕುಲುಕಿ ಎಬ್ಬಿಸಿದಾಗಲೆಎಚ್ಚರ! ನಾನು ಬಂಗಾರದ ರಥದಒಡೆಯ ಎನ್ನುವುದುಕೇವಲ ಉಳ್ಳವರ ಕುಹಕನಾನು ನಿಮ್ಮಂತೆಯೆಬೆಂಕಿಯ ಕಾರ್ಖಾನೆಯಲ್ಲಿಬಡ ಕಾರ್ಮಿಕ ನಾನು ಅಸ್ಪೃಶ್ಯನನ್ನ ಜೊತೆಗೆ ಎದ್ದುಧೂಳು ಗುಡಿಸುವಜಾಡಮಾಲಿಯನ್ನುಬೆಚ್ಚಗೆ ಚುಂಬಿಸುತ್ತೇನೆನಂತರ ಮಿಕ್ಕವರನ್ನುಸುಡುತ್ತಾ ಹೋಗುತ್ತೇನೆ. ನಾನು ಹುಟ್ಟು...