ಮುತ್ತಿನ ಹನಿಗಳನ್ನು
ಕೆಂಡದ ತುಟಿ ಹೀರಿತು.

ಮುಗುಳು ನಕ್ಕ ಚಿಗುರನ್ನು
ನೆಲ ನಿಷ್ಕರುಣೆಯಿಂದ ನುಂಗಿತು.

ಹಸಿದ ಒಡಲು ಬಾದಾಮಿ
ಕಣ್ಣುಗಳನ್ನೂ ಬಿಡಲಿಲ್ಲ.

ಒಂದು ಹಿಡಿ ಮೆದುಳು
ಜಗತ್ತಿನ ನಾಡಿಯಾದ
ನೀರು, ನೆಲ, ಆಕಾಶ
ಕೊನೆಗೆ-
ಪ್ರೇಮವನ್ನೂ ಧೂಳಾಗಿಸಿತು.

ತಾಯಿಯ ವಾತ್ಸಲ್ಯಪೂರಿತ
ಕಣ್ಣುಳ್ಳ ಸೂರ್ಯನನ್ನೇ ಕೇಳಿದೆ-
ನಿನಗೇನಾದರೂ ಹೇಳುವುದಿದೆಯೇ?

ಅವನು ಸುಮ್ಮನೆ
ಉರಿಯತೊಡಗಿದ.

*****

ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)