Home / ಸರ

Browsing Tag: ಸರ

ಶಾರದ ಚಂದ್ರನು ಬಾನಿನ ನೀಲಿಗೆ ಬೆಳ್ನಗು ಹೂವನು ಮುಡಿಸಿಹನು ದಧಿ ಧವಲಾಚ್ಛ ಜ್ಯೋತ್ಸ್ನಾ ಲಹರಿಯು ಭೂಮಿಗೆ ಬರಿಸಿತು ಪುಲಕವನು ಮಲಯ ಸಮೀರನು ಯಮುನಾ ಜಲದೊಡ- ನಾಡುತ ತೀಡುತ ಬರುತಿಹನು ವೃಂದಾವನದಲಿ ಧ್ಯಾನಾವಸ್ಥಿತ ವೃಕ್ಷಗಳೊಳಿಯನೆಬ್ಬಿಪನು ಸಂಧ್ಯಾ ...

೧ ಒಂದು ಕಡೆ ಸಂತೋಷ-ಸುಖದ ಸಾಮ್ರಾಜ್ಯಮಯ ನಂದನ ಸರ್ಗದ ಸಮಾವೇಶವಿಹುದು ಬೇರೂಂದು ಕಡೆ ಬೇನೆ ಬೇಸರಿಕೆ- ಬಿಸುಸುಯ್ಗ- ಳೇರಿರುವ ನಲವಿರದ ನರಕವಿಹುದು ೨ ಒಂದು ಕಡೆ ಮದುವೆ-ಮಾಸಿರಿ ಬೆಡಗು-ಬಿನ್ನಣಗ- ಳೊ೦ದಿರುವ ಶೃಂಗಾರ ಸೌರಭ್ಯವಿಹುದು ಬೇರೊಂದು ಕಡೆ ...

೧ ವಿಜಯ ನಗರವೆ! ವಿಜಯ ನಗರವೆ! ಹಿಂದೆ ನೀ ಮು೦ದೊತ್ತಿಹೆ ನಿಜ ಮಹೋತ್ಸಾಹದಲಿ ಲೋಕದ ಬೆರಗಿನುತ್ಸವವಾಂತಿಹೆ! ಹಿಗ್ಗಿನಲಿ ತೊಳ ತೊಳಗಿಹೆ!- ನೀ ಬಗ್ಗದೆಯೆ ಬೆಳಬೆಳಗಿಹೆ!! ೨ # ಹಿಂದೆ ಮಾರುತಿ–ವಾಲಿ–ಸುಗ್ರೀವಾದಿ ಕಪಿಗಳ ಗೆಳೆತನ, ಸಂದ ...

ಔನ್ನತ್ಯ-ಸೌಂದರ್ಯ ಭಾವೈಕ್ಯದಾನಂದ ಮೂರ್ತಿಯೇ ಮೆರೆಯುತಿದೆ; ಕಣ್ಮುಂದೆ ಕಾಣುತಿದೆ ನಶ್ವರದ ಸುಖ-ಭೋಗ-ರಾಗಾದಿ ನಿಗ್ರಹದೆ ಮೈವೆತ್ತ ನಿಶ್ಚಲ ತ್ಯಾಗ-ಯೋಗಾಮಂದ ಸನ್ಮುದ್ರೆ ಮೊಗದಲ್ಲಿ ಕಳೆಗೂಡಿ ಕುಣಿಯುತಿದೆ ಪ್ರಾಕ್ತನದ ಬಾಹುಬಲಿ ವೈರಾಗ್ಯ ಸಂಸ್ಥಾನ-...

೧ ಲೋಕದಲ್ಲಿ ಧರ್ಮ ವಲ್ಲಿ ಸೊರಗಿ ಹೋಗಿ, ಕಾಣದಾಗಿ, ಕಡೆಗಧರ್ಮ ಲತೆಯು ಕೊನರಿ, ನೀತಿಯಳಿದು ರೀತಿಯಿಳಿದು, ಸ್ವಾರ್ಥ ಪರತೆ ಪಾಶವಿಕತೆ ರುದ್ರ ನೃತ್ಯ ನಲಿವಗತ್ಯ ಬರೆ, ಮಹಾಂತ ಸಾಧು-ಸಂತ ರೂಪದಿಂದ ದೇವನಿಂದ ಒಲ್ಮೆ-ನಲ್ಮೆ ಕೋಡಿವರಿದು ಧರ್ಮಪಥವ ನೀತಿ...

ಪಲ್ಲವಿ ಎಲೆ ನೋವೆ! ನೀನೋವದಿಹ ಸುಕೃತಿಯಿರನೇ! ೧ ತನ್ನೊಂದದೃಶ್ಯವಹ ದುರ್ದಮ್ಯ ಶಕ್ತಿಯಿಂ ಚೇತನಾತ್ಮಕ ದೇಹಿಗಳನದುವಮಿ ನಿಂದು, ಪ್ರಾಚುರ್ಯದಲಿ ತಾನೆ ತಾನಾಗಿ ನೆರೆ ಸಂದು, ಸಾರ್ವತ್ರಿಕ ಪ್ರಗತಿಯಲಿ ಮೆರೆಯುವೆ ಧನಿಕರನು ಸೋಲಿಸುವೆ. ಬಡವರನು ಗೆಲುವ...

(ವಿಯೋಗ ಗೀತ) ೧ ಅಮ್ಮ! ನಿನ್ನ ವಿಯೋಗದರಿವಿನಲಿ ನನ್ನೆದೆಯು ಸಂತಾಪದಲಿ ಸಿಡಿಯುತಿತ್ತು! ದುಮ್ಮಾನದುರಿಯಲ್ಲಿ ಆಹುತಿಗೆ ಸಂದಿತ್ತು! ಮನವು ಸುಡುಗಾಡಿನಂತಿತ್ತು! ೨ ಕಣ್ಣೀರ ಕಾಳ್ಪುರವು ಕಾಲಾಗಿ ಹರಿದತ್ತು! ಉತ್ಸಾಹದೈಸಿರಿಯ ಮೇಲೆ ಮಣ್ಣೆರಚಿದಂತಾಯ್...

೧ ವಿಶ್ವ ಸಾಗರದೂರ್ಮಿಯಲ್ಲಿ, ಬಾಳ ದೋಣಿಯಿದು ನಶ್ವರದ ಶಾತ್ವತದಿ ತೇಲುತಿಹುದು ವೀಚಿಗಳ ಹೊಡೆತದಲಿ, ನೆಗೆತದಲಿ ಬಿದ್ದೆದ್ದು, ಶೂನ್ಯತೆಯ ಮೌನದಲಿ ಸಾಗುತಿಹುದು ೨ ಸಾಗರವ ಸುತ್ತಲೂ ಆಕಾಶದವಕಾಶ ತಾಗಿ, ಸರಿಯಾಗಿ ಸುತ್ತಿರೆ, ಮುತ್ತಿರೆ, ನಡುವಿನಲಿ ಮ...

(ಕಥಾ ಕವನ) ೧ ಏಳಲಿಕಾರದೆ, ಮರಣದ ಶಯ್ಯೆಯೊ- ಳೊರಗಿಹನೋರ್ವನು ಹಳೆ ಮುದುಕ ಕಳೆದಿದೆ ಪ್ರಾಯದೊಳೆಪ್ಪತ್ತರ ಗಡಿ ಸಾಯುವ ಸಮಯವು ಸನಿಯಕಿದೆ. ಬಳಿಕಾ ಮುದುಕನು ಒಂದು ದಿನ ಅಳಿಯಲು, ಬರಡಾಯಿತು ಪ್ರಾಣ ೨ ಒಂದರ ಮೇಲೊಂದಾಗುತ ನಾಲುಕು ಸ೦ದಿವೆ ಮುದುಕಗೆ ಮದ...

೧ ಅನಂತ ಶೂನ್ಯದಾಳದಲಿ, ದುರಂತವಾದಗಾಧದಲಿ ವಿಶಾಲ ನೀಲ ಮಾಲೆಯಲಿ ತಾರೆಯೊಂದು ಮೆರೆಯಲಿ! ೨ ಆರಿಗೇನು? ಏತಕೆಂದು? ಅರಿಯಲಾರು ಬಲ್ಲರಿಂದು? ದಿನವದರಳಿ ಬಾಡಲ೦ದು, ಮಿನುಗಿ, ಮಿರುಗಿ ಕಾ೦ಬುದು! ೩ ‘ತನ್ನ ಬೆಳಕಿದಲ್ಪವೇನೊ, ಇನ್ನು ಲೋಕವರಿಯದೇನೊ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...