ಹನಿಗವನ ಬೆಲೆ December 26, 2022December 28, 2021 ನೇಣು ಎನ್ನುವುದು ಗೇಣು ಹಗ್ಗೆ ಪ್ರಾಣ ಎನ್ನುವುದು ಅದಕ್ಕೆಷ್ಟು ಅಗ್ಗ *****
ಹನಿಗವನ ಸೋಲು ಗೆಲವು December 24, 2022December 19, 2021 ಪ್ರೀತಿಯಲಿ ಸೋತರೆ ಹೃದಯ ಬಚಾವ್ ಆದಂತೆ ಪ್ರೀತಿಯಲಿ ಗೆದ್ದರೆ ಹೃದಯ ಗಾಳಕ್ಕೆ ಬಿದ್ದಂತೆ *****
ಹನಿಗವನ ನೆರಳು December 19, 2022December 28, 2021 ಒಬ್ಬರು ಬೆಳೆಯಲು ಅರಮನೆ ಕೋಟೆ ಕೊತ್ತಲು ಮತ್ತೊಬ್ಬರು ಬೆಳೆಯಲು ಗುಡಿ ಗುಡಾರ ಗುಡಿಸಲು ಕೊನೆಗೆ ಯಾರೋ ತೋಡಿದ ನೆಲದ ಮನೆಯ ಮಡಿಲು ಅದಕ್ಕೆ ಮಣ್ಣಿನ ಬಾಗಿಲು ಮುಚ್ಚಿದರೆ […]
ಹನಿಗವನ ವಿಳಾಸ December 17, 2022December 19, 2021 ಮನಸ್ಸು… ದಾರಿ ತಪ್ಪಿದಾಗ ಒಳ ಓಣಿಯ ವಿಳಾಸ ನೆನಪಿಟ್ಟು ಕೋ ಪ್ರಜ್ಞೆಯ ಪಡಸಾಲೆಯಲಿ ಅವಿತಿಟ್ಟುಕೋ *****
ಹನಿಗವನ ದಾಖಲೆ December 12, 2022December 28, 2021 ಒಂದು ಗಾಳ ಒಮ್ಮೆಗೆ ಪಡೆಯಬಹುದಷ್ಟೆ ಒಂದು ಪ್ರಾಣವನ್ನು ಒಂದು ದಾಳ ಒಮ್ಮೆಗೆ ಕಬಳಿಸಿದೆ ರಾಜ್ಯ, ಕೋಶ, ಸೇನೆ ಹೆಂಡತಿ ಸಕಲ ಪಾಂಡವರ ಪಣವನ್ನ *****
ಹನಿಗವನ ವಿದಾಯ December 11, 2022December 29, 2021 ಮದುವೆ ಯಾಕೆ? ಪ್ರೀತಿಯೊಂದೇ ಸಾಕು ಎನ್ನುವ ಗೆಳೆಯ ಹೇಳಿದೆ ವಿದಾಯ ಆರಿಸಿಕೊ ಬೇರೆ ಹುಡುಗಿಯಾ…. *****
ಹನಿಗವನ ಪ್ರೀತಿ December 10, 2022December 19, 2021 ಮದುವೆಗೆ ಮೊದಲು ಪ್ರೀತಿ ಅರೆಹುಚ್ಚು ಹಿಡಿಸಿತ್ತು ಮದುವೆ ಯಾದ ಮೇಲೆ ಪೂರ್ತಿ ಹುಚ್ಚು ಹಿಡಿಸಿತ್ತು. *****
ಹನಿಗವನ ಪುಸಿ December 5, 2022December 28, 2021 ಮಣ್ಣು ಹೇಳುವುದಿಲ್ಲ ಹೆಣ ತನ್ನಲ್ಲಿದೆಯೆಂದು ಮಾತು ಹೇಳುತ್ತೆ ಸ್ವರ್ಗ ಕೈಲಾಸ ವೈಕುಂಠ ಸೇರಿದೆಯೆಂದು *****
ಹನಿಗವನ ಉಪ್ಪಿನಕಾಯಿ December 4, 2022December 29, 2021 ಇರಬೇಕು ಮನೆಮನೆಯಲ್ಲಿ ಗಂಡು-ಹೆಂಡತಿ ಜಗಳ ಊಟಕ್ಕೆ ಉಪ್ಪಿನಕಾಯಿ ಇದ್ದಾಗಲೇ ರುಚಿ ಬಹಳ *****
ಹನಿಗವನ ಹೂ ಬುಟ್ಟಿ December 3, 2022December 19, 2021 ಮನದ ಕಸದ ಬುಟ್ಟಿ ಖಾಲಿ ಯಾದರೆ ಹೃದಯ ಹೂ ಬುಟ್ಟಿ ತುಂಬುತ್ತದೆ *****