ಮುದ್ದು ಕಂದನ ವಚನಗಳು : ಆರು

ಯೋಗ ಉಸಿರು ಉಸಿರಿಗೆ ಶಿವನ ನೆನಹು ನಿಂದಿರಲಣ್ಣ ಸಹಜಯೋಗವೆ ಯೋಗ ರಾಜಯೋಗ ಮಾಡೂವ ಕೈ ಕೆಲಸ ನೆನಪಿನಾಟವ ಮಾಡು ಕರ್‍ಮಯೋಗವೆ ಯೋಗ ಮುದ್ದುಕಂದ ಸಂಸಾರ ಸಂಸಾರವೆಂಬುವದು ಕೊಳಚೆ ಕಿಲ್ಪಿಷವಲ್ಲ ಸಂಸಾರ ಸುಂದರದ ದ್ರಾಕ್ಷಿತೋಟ ಹೂವು...

ಸ೦ಧ್ಯಾ

ದಿವಸಾವಸಾನದೊಳು ಬುವಿಯ ನುತಿಗೆಚ್ಚರಿಸೆ 'ಮುನಸ್ಸೀನ'ನಂದದೊಳು ಅಸ್ತಗಿರಿಯ ರವಿಯಡರಿ ರಂಜಿಸಿಹ- ನವನ ಪಾವನ ಕಾಂತಿ ಅವತರಿಸಿ ಹರಸುತಿದ ಅಂಜುವಿಳೆಯ. ಇನಿಯನೊಲಿಯಲಿ ಎಂದೊ ಮನದಾಸೆ ಸಲಲೆಂದೊ- ಎನಗರಿಯದಾ ಹರಕೆ-ಮುಗಿಲ ಕರೆಯ ಹೊನಲಿನೊಳು ಸುರಕನ್ಯೆ ಹಣತೆಯಿದ ತೇಲಿಸಿಹ- ಳೆನುವಂತೆ...

ಮುದ್ದು ಕಂದನ ವಚನಗಳು : ಐದು

ಶಿವಯೋಗಿ ಲಂಗೋಟಿ ಕಟ್ಕೊಂಡು ಕಾಡು ಸೇರುವ ಯೋಗಿ ನೀನೊಬ್ಬ ಹೆಂಬೇಡಿ ಅಂಜುಬುರುಕ ಇದ್ದ ಜೀವನದಲ್ಲಿ ಇದ್ದಂತೆ ಎದೆಯೊಡ್ಡು ಶೂರನೇ ಶಿವಯೋಗಿ ಮುದ್ದುಕಂದ ಲಾಂಛನ ಪ್ಯಾಂಟು ತೊಟ್ಟರು ಶರಣ ಬೂಟು ತೊಟ್ಟರು ಶರಣ ಲಾಂಛನದ ಪ್ರಿಂಟಿನಲಿ...

ಕವಿ

ಯೋಜನಗಳಾಚೆಯೊಳು ಎಲ್ಲಿಯೋ ಜನಿಯಾಂತು ಮಿಂಚಿನಣುಗಳನೇರಿ ಸಕಲ ದಿಙ್ಮಂಡಲವ ಸಂಚರಿಸುತಂತರದಿ ಮೌನದಿಂ ಮಿಡಿಯುತಿಹ ಸೋಜಿಗದ ಗೀತವನ್ನು ಹಿಡಿದು, ಉಜ್ಜ್ವಲಗೊಳಿಸಿ, ಶ್ರೋತೃಪಥವೈದಿಸುವ ಯಂತ್ರದೊಲು,-ಹೇ ಕವಿಯೆ, ಬಾಳುಬಾಳುಗಳಾಚೆ ಬ್ರಹ್ಮಾಂಡ ಹೃದಯಾಂತ- ರಾಳದೊಳು ಸಂತತಂ ಸಂಜನಿಸುವಾನಂದ- ಮಾತೃಕೆಯೆ ತಾನಾದ, ವಿಶ್ವ...

ಮುದ್ದು ಕಂದನ ವಚನಗಳು : ನಾಲ್ಕು

ಬದುಕು ನಟ್ಟು ಕಡಿಯುವ ಶರಣ ಒಡ್ಡು ಕಟ್ಟುವ ಶರಣ ರೊಟ್ಟಿ ತಟ್ಟುವ ಕೈಯೆ ತಾಯಿ ಶರಣ ಬದುಕು ಹೆಂಗೊ ಹಾಂಗ ಬದುಕಿ ನಿಂದವ ಶರಣ ಶೂರನೇ ಶಿವಶರಣ ಮುದ್ದುಕಂದ ಶರಣ ಮೂರ್‍ಹೊತ್ತು ಮಡಿಸ್ನಾನ ಉಪವಾಸ...

ಋತದ ಮೊದಲ ಕಣಸು

ಸೃಷ್ಟಿ ಸ್ವಯಂಪ್ರಭೆಯಗುಹೆಯ ದಾರಿಗನಾಗಿ ಚೇತನಂ ನಡೆಯುತಿರೆ, ವಿಸ್ಮಯಂಗೊಳಿಸಿತಿದ ನೂತನದ ನಸುಕೊಂದು ಒಂದೆಡೆಯೊಳ್ ; ಅದರಿಂದ ಸ್ಪಷ್ಟ ಮಂದದಕಾಯ್ತು ಅಹಮಸ್ಮಿ ಎಂಬರಿವು. ನಾನುಂಟು' ಎನ್ನುತಿದು ಹಿಗ್ಗಿ ಕಣ್ಮನ ತೆರೆಯ- ಲೆನಿತು ಭಯಮಾಯ್ತದಕೆ ಇಹದ ರಚನೆಯ ಕಂಡು!...

ಮುದ್ದು ಕಂದನ ವಚನಗಳು : ಮೂರು

ಶರಣ ದೊಡ್ಡ ದೀಪದ ಕೆಳಗ ಉದ್ದ ಭಾಷಣ ಬಿಗಿದು ಚಪ್ಪಾಳಿ ಹೊಡೆಸಿದರ ಶರಣನಲ್ಲ ಕುಡ್ಡ ದೀಪದ ಕೆಳಗ ಬಿದ್ದ ಆತ್ಮರ ಹುಡಿಕಿ ಶಿವನ ತೋರುವ ಶರಣ ಮುದ್ದುಕಂದ ವ್ಯಾಖ್ಯಾನ ಬಲುದೊಡ್ಡ ಜುಟ್ಟಿನಲಿ ರುದ್ರಾಕ್ಷಿ ಸರ...

ಕೆರೆಯ ತಡಿಯಲ್ಲಿ

೧ ಹಿಮಂತದೆಳೆದಿನ ಕಳಕಳಿಸಿತ್ತು, ಬಿಸಿಲೋ ಬೆಚ್ಚನೆ ಬಿದ್ದಿತ್ತು; ಬಿಡುವೆಲ್ಲೆಲ್ಲಿಯು ಮೈದೋರಿತ್ತು, ಸದ್ದೋ ಮೌನದಿ ಕೆಡೆದಿತ್ತು. ಹೊಲದೊಳು ತೋಟದಿ ಗದ್ದೆಯ ಬಯಲೊಳು ಅನ್ನ ಸಮೃದ್ಧಿಯ ಸಿರಿಯಿತ್ತು, ತಿರೆಯಂದಿನ ಆ ಪ್ರಶಾಂತ ಭಾವದಿ ಕೃತಕೃತ್ಯತೆಯಾ ಗೆಲವಿತ್ತು. “ಕ್ಲೇಶವ...

ಮುದ್ದು ಕಂದನ ವಚನಗಳು: ಎರಡು

ಶಿವಯೋಗ ಕೂಸು ತಾಯಿಯ ಕಂಡು ಕುಲುಕುಲನೆ ನಕ್ಕಂತೆ ಯೋಗವೆಂಬುದು ಚಂದ ಚಲುವ ಬಂಧ ತಾಯ ಎದೆ ಹಾಲನ್ನು ಗಟಗಟನೆ ಕುಡಿದಂತೆ ಶಿವಯೋಗದಾನಂದ ಮುದ್ದುಕಂದ ಬಣ್ಣ ಮಾವೀನ ಮರಕಂಡು ಗಾನ ಮಾಡುವರಿಲ್ಲ ಕಲ್ಲೊಗೆದು ಹರಿದೊಯ್ವ ಕಳ್ಳರಿಹರು...

ಒಂದಿರುಳು

ಪಡುವ ಮಲೆಯ ಕಣಿವೆಯಾಚೆ ಹೊತ್ತು ಹಾರಿಹೋಗುತಿತ್ತು, ಮೂಡ ಮಲೆಯ ಹಲ್ಲೆ ಹತ್ತಿ ಇರುಳ ದಾಳಿ ನುಗ್ಗುತಿತ್ತು; ಬಿದ್ದ ಹೊನ್ನ ಕೊಳ್ಳೆ ಹೊಡೆದು ಕಳ್ಳಸಂಜೆಯೋಡುತಿತ್ತು, ತಲೆಯ ಬಾಗಿ ಪುರದ ದೀಪ ಜೀವದೊಂದಿಗಿದ್ದಿತು. ಪಾನಭೂಮಿಯಲ್ಲಿ ಮತ್ತ- ಜನದ...