ನಾವು ಗೆಳೆಯರು ಹೂವು ಹಣ್ಣಿಗೆ

ನಾವು ಗೆಳೆಯರು ಹೂವು ಹಣ್ಣಿಗೆ ಚಿಗುರು ಕಾಯಿಗೆ ಚಲುವಿಗೆ ನಾವು ಹೊಸಯುಗ ನಗೆಯ ಹುಡುಗರು ಕಲ್ಲು ಮುಳ್ಳಿಗೆ ಕಾಡಿಗೆ ಗಿಡದ ಹಕ್ಕಿಯ ಕಂಠ ಕಂಠಕೆ ಸಿಹಿಯ ಸಕ್ಕರೆ ಹಂಚುವಾ ಮುಗಿಲ ಗಲ್ಲಕೆ ಪ್ರೀತಿ ತುಂಬಿಸಿ...

ನಾನು ಹೂವು ಮಧುರ ಮಾವು

ನಾನು ಹೂವು ಮಧುರ ಮಾವು ನಾನು ಶಿವನ ಗಾನವು ನಾನು ಅವನು ಕಬ್ಬು ಬಾಳೆ ಅವನೆ ನನ್ನ ಪ್ರಾಣವು ಮುಳ್ಳು ಇಲ್ಲ ಕಲ್ಲು ಇಲ್ಲ ಬೆಟ್ಟವೆಲ್ಲ ಬೆಣ್ಣೆಯು ಬಂಡೆಯೆಲ್ಲ ಉಣ್ಣೆ ಬಂಡೆ ದೊಡ್ಡ ಬೆಲ್ಲ...

ಏಳು ಕಂದಾ ಮುದ್ದು ಕಂದಾ

ಏಳು ಕಂದಾ ಮುದ್ದು ಕಂದಾ ತಂದೆ ಶ್ರೀಗುರು ಕರೆದನು ಮಕ್ಕಳಾಟವು ಸಾಕು ಮಗುವೆ ವ್ಯರ್ಥ ಸಾಕು ಎಂದನು ಕೈಯ ಹಿಡಿದನು ಕರುಣೆ ಮಿಡಿದನು ಮೇಲು ಮೇಲಕೆ ಕರೆದನು ಮೇಲು ಮೇಲಿನ ಮೇಲು ಮಠದಾ ಪ್ರೇಮ...

ದೇವ ಗಂಗಾಧರನ ಗಾಯನ

ಹೂವು ಹೂವಿಗೆ ಚಿಗುರು ಚಿಗುರಿಗೆ ಪ್ರೀತಿ ಚುಂಬನ ನೀಡುವೆ ದೇವ ಗಂಗಾಧರನ ಗಾಯನ ಹಾಡಿ ಹರುಷದಿ ಕುಣಿಯುವೆ ಗಾಳಿ ಬೀಸಲಿ ಚಳಿಯು ಚಿಮ್ಮಲಿ ಹಸಿರ ಉಡುಗರೆ ತೊಡಿಸುವೆ ಬಿಸಿಲು ಕೆಂಡದ ಮಳೆಯ ಸುರಿಸಲಿ ಪ್ರೀತಿ...

ನಂದಿ ಬೆಟ್ಟವ ಕಂಡೆ

ಹೆಂಗ ಹೇಳಲಿ ನಾನು ಹೇಳಲಾರದ ಹಿಗ್ಗು ಯೋಗ ನಂದೀಶ್ವರನ ಶಿಖರ ಕಂಡೆ ಭೋಗನಂದಿಯು ಕೆಳಗ ಯೋಗನಂದಿಯು ಮ್ಯಾಗ ನಂದಿ ಬೆಟ್ಟದ ಖುಶಿಯ ಬೆಳಕು ಕಂಡೆ ಬೆಟ್ಟ ಬೆಟ್ಟದ ಮ್ಯಾಲೆ ಗಟ್ಟ ಗಟ್ಟದ ಮಾಲೆ ನೋಡಿಲ್ಲಿ...

ನೀನೆ ಉಪ್ಪು ಬ್ಯಾಳಿಯು

ನನ್ನತನವನು ನಿನ್ನತನದಲಿ ಗಂಧದಂತೆ ತೇಯುವೆ ನನ್ನ ಬದುಕಿನ ತಾಳ ತಮ್ಮಟೆ ಗಂಟು ಮೂಟೆ ಕಟ್ಟುವೆ ನಿನ್ನ ಪಾದಕೆ ಒಟ್ಟುವೆ ಅಂತರಂಗದ ಹುಚ್ಚು ಆಸೆಯ ಬಿಚ್ಚಿ ಬಿಡಿಸಿ ಚಲ್ಲುವೆ ಕಲ್ಲು ಮಣ್ಣು ಮುಳ್ಳು ಕೊಟ್ಟು ಹಾಲು...

ಮುಗಿಲ ಮೇಲೆ ಮುಗಿಲು ತೇಲಿತು

ಮುಗಿಲ ಮೇಲೆ ಮುಗಿಲು ತೇಲಿತು ಚಂದ್ರ ಸೂರ್ಯರ ತೂಗಿತು ಗಿರಿಯ ಮೇಲೆ ಗಿರಿಯು ಏರಿತು ಹಸಿರು ಕಾನನ ಹಾಡಿತು ಮಂದ ಮಾರುತ ತುಂಬಿ ನೀಡಲು ಮೌನ ಎಚ್ಚರವಾಯಿತು ಮುಗಿಲ ಧೂಳಿಯ ಗೂಳಿ ಚಿಮ್ಮಲು ಗಾನ...

ಹಸಿರು ಮರಗಳು ತೇರು ಎಳೆದಿವೆ

ಹಸಿರು ಮರಗಳು ತೇರು ಎಳೆದಿವೆ ಇಗೋ ನೀಲಿಯ ಮುಗಿಲಲಿ ಶಿಖರ ಸಾಲ್ಗಳು ತಬ್ಬಿ ನಿಂದಿವೆ ಅಗೋ ಧಾರೆಯ ಜಲದಲಿ ಮುಗಿಯಲಾರದ ಮುಗಿಲು ಮುಗಿದಿದೆ ಕ್ಷಿತಿಜ ಓಕುಳಿಯಾಡಿದೆ ಸಿಡಿಲು ಘಂಟಾನಾದ ಮೊಳಗಿದೆ ಕಡಲು ಭೂಮಿಯ ತಬ್ಬಿದೆ...

ಮಾವು ಬಾಳೆ ತೆಂಗು ಹಲಸು

ಮಾವು ಬಾಳೆ, ತೆಂಗು, ಹಲಸು ರಸದ ಕಬ್ಬು ಬೆಳೆಯಲಿ ಸುತ್ತಮುತ್ತ ಚೈತ್ರ ಚಿತ್ರ ಪ್ರೇಮ ಪತ್ರ ಬರೆಯಲಿ ಜೀವಸೂತ್ರ ಗೆಲ್ಲಲಿ ಸೂರ್ಯ ಚಂದ್ರ ಮುಗಿಲು ಚುಕ್ಕಿ ವಿಶ್ವ ಲಾಲಿ ಹಾಡಲಿ ಹಕ್ಕಿ ಕಂಠ ಹಾಲು...

ಹರಕು ಅಂಗಿಯ ಮುರುಕು ಮನೆಯ

ಹರಕು ಅಂಗಿಯ ಮುರುಕು ಮನೆಯ ಕೊಟ್ಟೆನೆಂದರೆ ದಾನವೆ ಹಳೆಯ ರೋಗದ ಕೊಳೆಯ ದೇಹವ ಬಿಟ್ಟೆನೆಂದರೆ ತ್ಯಾಗವೆ ಅಲ್ಪ ಕಾಲದ ಆಸೆಗಾಗಿ ಕ್ಷಣಿಕ ತ್ಯಾಗವು ಯೋಗ್ಯವೆ ದೇಹದಾಸೆಗೆ ಎಳೆತ ಸೆಳೆತಕೆ ಜಾರಿಬಿದ್ದರೆ ಜ್ಞಾನವೆ ಮಹಾದಾನಿ ಮಹಾಯೋಗಿ...