ದುಡಿತಲೇ ಇರ್‍ತಾಳೆ

ಮನೆ ಇಲ್ಲ ಮಠ ಇಲ್ಲ ಮಕ್ಕಳಿಲ್ಲ ಮರಿ ಇಲ್ಲ ನೀನು ಶೋಕಿಯಾಗಿ ಆಕಾಶದಲ್ಲೆಲ್ಲ ಅಲೆದಾಡಿಕೊಂಡು ಇರಬಹುದು ಕೇಳಪ್ಪ ಶಶಿ, ಆದರೆ ಅವಳಿಗೆ ಮಕ್ಕಳು ಮರಿ ಸಂಸಾರದ ಭಾರ ಅದನ್ನು ಸಾಕಿ ಸಲಹೋಕೆ ದುಡಿತಲೇ ಇರ್‍ತಾಳೆ...

ಎಲ್ಲರಿಗೂ ಹಗಲಿರಲಿ

ಎಲ್ಲರಿಗೂ ಯಾವಾಗಲೂ ಹಗಲಿರಬೇಕೆಂದೇ... ಭೂಮಿ ಕ್ಷಣವೂ ನಿಲ್ಲದೆ ಅಹರ್ನಿಶಿ ಸುತ್ತುತ್ತಲೇ ಇರತ್ತದೆ. ಆದರೆ ದುರಾದೃಷ್ಟ ಮಾಡುವುದೇನು, ಎಷ್ಟು ಸುತ್ತಿದ್ದರೂ ಒಂದು ಕಡೆ ಹಗಲಾಗುವುಷ್ಟರಲ್ಲೇ ಮತ್ತೊಂದು ಕಡೆ ಕತ್ತಲಾಗಿ ಬಿಡುತ್ತದೆ. *****

ಹೈಕಮಾಂಡ್

ರಾಜ್ಯದ ಪಾರ್ಟಿ ಅಧ್ಯಕ್ಷ, ಮುಖ್ಯಮಂತ್ರಿ ಥರ ನಾನು ಮೇಲು ತಾನು ಮೇಲುಂತ ಜಗಳಕ್ಕೆ ಬೀಳಬೇಡಿ ಎಷ್ಟೇ ಇದ್ದರೂ ನಿಮಗಿಬ್ಬರಿಗೂ ಡಿಮ್ಯಾಂಡು ಎಚ್ಚರವಿರಲಿ ನಿಮಗೂ ಮೇಲ್ಪಟ್ಟಿದೆ ಒಂದು ಹೈ ಕಮ್ಯಾಂಡು. *****

ಮನ್ನಣೆ

ಸೂರ್ಯ ಥರ ನಿನಗೆ ಮನ್ನಣೆ ಸಿಗಬೇಕೆಂದರೆ ಈ ನಿನ್ನ ಕ್ಷಯ, ನಿಧಾನ ವೃದ್ಧಿಯ ರೋಗ ವಾಸಿ ಮಾಡಿಕೊಳ್ಳಲು ಹುಡುಕು ಯಾವುದಾದರೂ ಔಷಧ ಪ್ರಯೋಗ ಆಗಿಬಿಡು ದಿನವೂ ನೀನು ಹುಣ್ಣಿಮೆಯ ಪೂರ್ಣಚಂದ್ರ, ಆಗ ಎಲ್ಲರೂ ಹಾಡಿ...

ರಾತ್ರಿ ರಾಣಿಯರು

ತಾರೆಯರು ತಾರೆಯರು ಅಪೂರ್ವ ಸುಂದರಿಯರು - ನನಗೆಲ್ಲಾ ಗೊತ್ತೋ ತಮ್ಮ ಥಳಕು ಮೇಕಪ್‌ನಲ್ಲಿ ರಾತ್ರಿ ಆಕಾಶ ತೋರ್‍ಸಿ ಥಳಪಳ ಹೊಳೆಯುವ ಈ ವಯ್ಯಾರಿಯರು; ಹೇಳ್ತೇನೆ ಕೇಳು ಹಗಲು ಮುಖವನ್ನೇ ತೋರಿಸಲು ಅಂಜಿ ಓಡುವ ಇವರು...