ಮನೆ ಇಲ್ಲ ಮಠ ಇಲ್ಲ
ಮಕ್ಕಳಿಲ್ಲ ಮರಿ ಇಲ್ಲ
ನೀನು ಶೋಕಿಯಾಗಿ ಆಕಾಶದಲ್ಲೆಲ್ಲ ಅಲೆದಾಡಿಕೊಂಡು
ಇರಬಹುದು ಕೇಳಪ್ಪ ಶಶಿ,
ಆದರೆ ಅವಳಿಗೆ ಮಕ್ಕಳು ಮರಿ ಸಂಸಾರದ ಭಾರ
ಅದನ್ನು ಸಾಕಿ ಸಲಹೋಕೆ ದುಡಿತಲೇ
ಇರ್‍ತಾಳೆ ಪಾಪ ಅಹರ್ನಿಶಿ.
*****